ಬೆಟಗೇರಿ ವಿಪಿಜಿಕೆಎಸ್ ನೂತನ ಅಧ್ಯಕ್ಷ ಬಸವಂತ ಕೋಣಿಗೆ ಸನ್ಮಾನ
ಬೆಟಗೇರಿ 04:ಗೋಕಾಕ ತಾಲೂಕಿನ ಬೆಟಗೇರಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನೂತನ ಸದಸ್ಯರಾಗಿ ಆಯ್ಕೆಗೊಂಡ ಬಳಿಕ ಅವಿರೂಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮೂಡಲಗಿ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸೈಟಿ ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಬಸವಂತ ಕೋಣಿ ಅವರನ್ನು ಮೂಡಲಗಿ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸೈಟಿಯ ಬೆಟಗೇರಿ ಶಾಖೆಯ ವತಿಯಿಂದ ಸನ್ಮಾನಿಸಿದರು.
ಮೂಡಲಗಿ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸೈಟಿ ಬೆಟಗೇರಿ ಶಾಖೆಯ ಸಲಹಾ ಸಮಿತಿ ಉಪಾಧ್ಯಕ್ಷ ಶ್ರೀಶೈಲ ಗಾಣಿಗೇರ, ಈಶ್ವರ ಬಳಿಗಾರ, ಬಸನಗೌಡ ಪಾಟೀಲ, ರಾಮಪ್ಪ ಕತ್ತಿ, ಮಲ್ಲಪ್ಪ ಗುದಗನ್ನವರ, ಮಾರುತಿ ಬಣಜಿಗೇರ, ಹನುಮಂತ ವಗ್ಗರ, ಭೀಮಪ್ಪ ಐದುಡ್ಡಿ, ಸ್ಥಳೀಯ ಶಾಖೆಯ ಕಾರ್ಯದರ್ಶಿ ಶಿವಾನಂದ ಹಿರೇಮಠ, ಭೀಮಪ್ಪ ಹಂಜಿ, ಸಿಬ್ಬಂದಿ, ಶಾಖೆಯ ಸಲಹಾ ಸಮಿತಿ ಸದಸ್ಯರು, ಇತರರು ಇದ್ದರು.