ಬಜ್ ವಿಮೆನ್ ಇಂಡಿಯಾದ ತರಬೇತಿ ಕಾರ್ಯಕ್ರಮ
ಹಾವೇರಿ 28: ತಾಲೂಕ ದೇವಗಿರಿ ಗ್ರಾಪಂ ಗ್ರಂಥಾಲಯದಲ್ಲಿ ಬಜ್ ವಿಮೆನ್ ಇಂಡಿಯಾದ ತರಬೇತಿ ಕಾರ್ಯಕ್ರಮ ಜರುಗಿತು.
ಗ್ರಾಪಂ ಅಧ್ಯಕ್ಷರಾದ ಪ್ರಭಾಕರ ಪಾರಿಗಂಟಿ ಅವರು ಕಾರ್ಯಕ್ರಮವನ್ನು ಸಸಿಗೆ ನೀರೆರುವ ಮೂಲಕ ಚಾಲನೆ ನೀಡಿದರು.ಬಜ್ ಸಂಸ್ಥೆಗೆ ನಾವು ಸಹಾಯ ಮತ್ತು ಉತ್ತೇಜನವನ್ನು ನೀಡುತ್ತೇವೆ.ಇದರ ಸದುಪಯೋಗ ಪಡೆದು ಮಹಿಳೆಯರು ಸಬಲರಾಗಲಿ ಎಂದರು.
ಗ್ರಾಪಂ ಉಪಾಧ್ಯಕ್ಷರಾದ ಶ್ರೀಮತಿ ಶಿವಲೀಲಾ ತಿರ್ಕಣ್ಣನವರ ಮಾತನಾಡಿ ಮಹಿಳೆಯು ಅಬಲೆಯಲ್ಲ,ಸಬಲೆ.ಮಹಿಳೆಯು ಮಾನಸಿಕವಾಗಿ ದೈಹಿಕವಾಗಿ ಮತ್ತು ಆರ್ಥಿಕವಾಗಿಯೂ ಸಹ ಸಬಲಾಗಿರಬೇಕು ಎಂದು ತಿಳಿಸಿದರು ಮ್ಯಾನೇಜರ್ ಚನ್ನಬಸವ ಇವರು ಕಾರ್ಯಕ್ರಮದಲ್ಲಿ ಬಜ್ ಸಂಸ್ಥೆಯ ಬೆಳವಣಿಗೆಯ ಹಂತ ಸಂಸ್ಥೆಯ ಉದ್ದೇಶ ಗುರಿ ಮತ್ತು ಸಂಸ್ಥೆಯ ರೂಪರೇಷೆಗಳ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.
ಬಜ್ ಸಂಸ್ಥೆಯ ಕ್ಷೇತ್ರ ಸುಗಮಕಾರರಾದ ಕುಮಾರಿ ನೇತ್ರ ಧರಿಯಪ್ಪನವರ ಇವರು ಕಾರ್ಯಕ್ರದದ ಯೋಜನೆಯ ಉದ್ದೇಶಿಸಿ ಮಾತನಾಡಿದರು.ಸ್ಪೂರ್ತಿವನ ತರಬೇತಿಯನ್ನು ನೀಡಿದರು
ಈ ಸಂದರ್ಭದಲ್ಲಿ ಗ್ರಾಪಂ ಜನಪ್ರತಿನಿಧಿಗಳು ಹಾಗೂ ಕಾರ್ಯವೃಂದದವರು ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಗೌರಮ್ಮ ಚನ್ನಪ್ಪನವರ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.