ನಾಳೆ ಅಂಗವಿಕಲರ ಜಾಗೃತಿ ಮೇಳ

ಲೋಕದರ್ಶನ ವರದಿ

ಕೊಪ್ಪಳ13: ಅಂಗ ವೈಫಲ್ಯ ದೇವರು ಅವರಿಗೆ ನೀಡಿದ ಶಾಪವಲ್ಲ ಅವರಲ್ಲಿ ಒಂದು ವಿಶೇಷ ವಾದ ಶಕ್ತಿ ಅಡಗಿ ಕುಳಿತ್ತಿರುತದ್ದೆ ಅದನ್ನು ಹೊರ ತರುವ ಮೂಲಕ ಅವರ ಬದುಕಿಗೆ ಭರವಸೆಯನ್ನು ನೀಡಬೇಕಾಗಿ ಎಂದು ಏನೇಬಲ್ ಇಂಡಿಯಾ ಸಹಾಯಕ ಸಂಯೋಜಕ ಶರತ್ ನಟರಾಜ್ ಅಭಿಪ್ರಾಯಪಟ್ಟರು.

    ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನ.15 ಹಾಗೂ 16 ರಂದು ಕುಷ್ಟಗಿಯಲ್ಲಿರುವ  ಸಮೂಹ ಸಾಮಥ್ರ್ಯ ಸಂಸ್ಥೆಯ ಆವರಣದಲ್ಲಿ ಹಾಗೂ ಏನೇಬಲ್ ಇಂಡಿಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಾಗೃತಿ ಮೇಳ ನಡೆಯಲಿದೆ ಎಂದು ತಿಳಿಸಿದರು. ಗ್ರಾಮೀಣ ಮಟ್ಟದಲ್ಲಿ ಅಂಗವಿಕಲತೆಯುಳ್ಳ ವ್ಯಕ್ತಿಗಳಿಗೆ ಹಾಗೂ ಅವರ ಪಾಲಕರಿಗೆ ಪೂರಕ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ. ಇದರ ಜೊತೆಯಲ್ಲಿ ಮಾಹಿತಿಯನ್ನು ನೀಡುವ ವೇದಿಕೆಗಳು ಸಹ ಅತಿ ನಿಯಮಿತ, ಈ ಕಾರಣಕ್ಕಾಗಿ ಸಮೂಹ ಸಾಮಥ್ರ್ಯ ಇವರ ಸಹಯೋಗದೊಂದಿಗೆ ಜಾಗೃತಿ ಮುಡಿಸುವ ಕೆಲಸ ಮಾಡಲಾಗುತ್ತಿದೆ. 

   ಜಿಲ್ಲೆಯಲ್ಲಿ 15 ಸಾವಿರ ಜನರು ಅಂಗವಿಕಲರಿದ್ದಾರೆ. ಅವರಿಗೆ ಇದುವರೆಗೂ ಯಾವುದೇ ರೀತಿಯ ಜೀವನ ಭದ್ರತೆ ಇಲ್ಲ, ಈ ವಿಚಾರವನ್ನು ಮನಗಂಡು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ 30 ಕ್ಕೂ ಹೆಚ್ಚು ಸಂಸ್ಥೆ ಹಾಗೂ ಸಕರ್ಾರ, ಹಣಕಾಸು ಸಂಸ್ಥೆ ಮತ್ತು ವೃತ್ತಿಪರ ಸಲಹೆಗಾರರ ಮೂಲಕ ಶೈಕ್ಷಣಿಕ, ಸಾಮಾಜಿಕ, ಆಥರ್ಿಕ, ಕೌಶಲ್ಯ, ಔದ್ಯೋಗಿಕ ಮಾಹಿತಿಯನ್ನು ಈ ಕಾರ್ಯಕ್ರಮದ ಮುಖಾಂತರ ತಿಳಿಸಲಾಗುತ್ತದೆ 300 ಕ್ಕೂ ಅಧಿಕ ಅಂಗವಿಕಲರು ಇದರ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

  ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಇಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳುವ ಮುಖೇನ ಉತ್ತಮ ಜೀವನೋಪಾಯ ರೂಪಿಸಿಕೊಳ್ಳಲು ಅಂಗವಿಕಲರು ಹಾಗೂ ಪಾಲಕರು ಮುಂದಾಗಬೇಕು ಎಂದು ಕರೆ ನೀಡಿದರು. ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಮೂಹ ಸಾಮಥ್ರ್ಯ ಸಂಸ್ಥೆಯ ಸಹಾಯಕ ಸಂಯೋಜಕಿ ತಾಹೀರಾ ಚೌಧರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.