ನಾಳೆ ರಾಣೇಬೆನ್ನೂರಲ್ಲಿ ಸಾಂಸ್ಕೃತಿಕ ರಂಗ ಸಂಗಮ
ರಾಣೇಬೆನ್ನೂರು 13: ರಂಗಭೂಮಿಯ ಅಸ್ತಿತ್ವ ಮೂಲದಂತೆ ಉಳಿದಿಲ್ಲ. ಕಲಾವಿದರ ಜೀವನ ಚಿಂತಾ ಜನಕವಾಗಿದೆ. ಇದಕ್ಕೆ ಕಾರಣ ಮಲ್ಟಿಮೀಡಿಯಾಗಳ ಮನೋರಂಜನೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕೆ.ಸಿ.ನಾಗರಜ್ಜಿ ಹೇಳಿದರು. ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಲಾವಿದರನ್ನು, ಕಲೆಯನ್ನು ಪೋಷಿಸಿ ಬೆಳೆಸುವ ಮತ್ತು ಪ್ರೋತ್ಸಾಹಿಸುವ ಗುರುತರವಾದ ಜವಾಬ್ದಾರಿ ಪ್ರೇಕ್ಷಕರಲ್ಲಿದೆ ಎಂದರು.
ರಂಗ ಚೇತನ (ಪ. ಜಾ ) ಸಂಸ್ಥೆ ಕುಪ್ಪೇಲೂರು 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ರಂಗ ಸಂಗಮ ಸಾಂಸ್ಕೃತಿಕ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಗಣ್ಯರಿಗೆ ಅಭಿನಂದನಾ ಸಮಾರಂಭ, ಹಾಗೂ ವೃತ್ತಿ ರಂಗಭೂಮಿ ಕಲಾವಿದರಿಂದ ರತ್ನ ಮಾಂಗಲ್ಯ ನಾಟಕ ಪ್ರದರ್ಶನವು ಡಿ. 15ರಂದು ಸಂಜೆ 5:00ಗೆ ಸ್ಥಳೀಯ ಹಲಗೇರಿ ರಸ್ತೆಯಲ್ಲಿರುವ ಬಿ.ಎ.ಜೆ. ಎಸ್. ಎಸ್. ಮಹಿಳಾ ಮಹಾವಿದ್ಯಾಲಯ ಆವರಣದಲ್ಲಿ ಜರುಗಲಿದೆ ಎಂದರು.
ವಿಧಾನಸಭಾ ಉಪ ಸಭಾಪತಿ ರುದ್ರ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಪ್ರಕಾಶ್ ಕೋಳಿವಾಡ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟ, ಧಾರವಾಡ ರಂಗಾಯಣ ನಿರ್ದೇಶಕ, ರಂಗಭೂಮಿ ಕಲಾವಿದ ಡಾ. ರಾಜು ತಾಳಿಕೋಟೆ. ಬಿ ಎ ಜೆ ಎಸ್ ಎಸ್ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್. ಎಂ. ಕುಬೇರ್ಪ. ಜೆಸಿ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ- ಆಫ್ ಸೊಸೈಟಿ ಅಧ್ಯಕ್ಷ ಶ್ರೀನಿವಾಸ್ ದೊಡ್ಡ ನಾಗಪ್ಪ ಕಾಕಿ. ಖ್ಯಾತ ಮಕ್ಕಳ ತಜ್ಞ ಡಾ. ಪ್ರವೀಣ್ ಖನ್ನೂರ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ ನ್ಯಾಯವಾದಿ . ಎಸ್.ಎಸ್. ರಾಮಲಿಂಗಣ್ಣನವರ. ವಂದೇ ಮಾತರಂ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ. ಮಂಜಯ್ಯ ಚಾವಡಿ. ಅಭಿರುಚಿ ಜನಪದ ಕಲಾ ತರಬೇತಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ನಾಗರಾಜ್ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಸಾಧಕರಿಗೆ ರಂಗಭೂಮಿ ಪ್ರಶಸ್ತಿ, ಜನಪದ ಪ್ರಶಸ್ತಿ ನೀಡಲಾಗುವುದು ಎಂದು ವಿವರಿಸಿದರು.