ನಾಳೆ ಮಹಿಳೆ ಮತ್ತು ಹಾಸ್ಯ ಕಾರ್ಯಕ್ರಮ
ಬೆಳಗಾವಿ 6: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 8 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾದಿನ ನಿಮಿತ್ತ ’ಮಹಿಳೆ ಮತ್ತು ಹಾಸ್ಯ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಪ್ರೊ. ಜಿ. ಕೆ. ಕುಲಕರ್ಣಿ, ಸುಪ್ರಿಯಾ ದೇಶಪಾಂಡೆ, ರಾಜೇಶ್ವರಿ ಹಿರೇಮಠ ಮತ್ತು ದೀಪಿಕಾ ಚಾಟೆ ತಮ್ಮ ನಗೆಮಾತುಗಳಿಂದ ರಂಜಿಸಲಿದ್ದಾರೆ. ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ ಆರ್. ಬಿ. ಕಟ್ಟಿ ಉಪಸ್ಥಿತರಿರುತ್ತಾರೆ ಪ್ರಾಸ್ತಾವಿಕ ನುಡಿಗಳನ್ನು ಗುಂಡೇನಟ್ಟಿ ಮಧುಕರ ಆಡಲಿದ್ದಾರೆ. ಪ್ರಾಯೋಜಕತ್ವವನ್ನು ಬಿ. ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಎಸ್. ವಿ. ದೀಕ್ಷಿತ ಇವರು ವಹಿಸಿಕೊಂಡಿದ್ದಾರೆ.