ಇಂದು ವೀರಗಂಟಿ ಮಡಿವಾಳ ಮಾಚಿದೇವರ ಕಾರ್ತಿಕೋತ್ಸವ
ರಾಣೇಬೆನ್ನೂರ 22: ವೀರಗಂಟಿ ಮಡಿವಾಳ ಮಾಚಿದೇವರ ಹಾಗೂ ಕಾಶಿ ವಿಶ್ವನಾಥ, ಗುರು ಗೋವಿಂದಾನಂದ ಮತ್ತು ಬ್ರಹ್ಮಾನಂದ ಸ್ವಾಮಿಗಳ ಕಾರ್ತಿಕೋತ್ಸವವು ಇಂದು ಡಿ.23ರಂದು ಸಂಜೆ 6-30ಕ್ಕೆ ಇಲ್ಲಿನ ಅಗಸರ ಮಠದಲ್ಲಿ ನೆರವೇರಲಿದೆ.
ಕಾರ್ತಿಕೋತ್ಸವದ ನಿಮಿತ್ತ ಮುಂಜಾನೆಯಿಂದ ಸಂಜೆಯವರೆಗೆ ಮೂರ್ತಿಗಳಿಗೆ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ-ಟ್ರಸ್ಟ ಸಮಿತಿಯು ತಿಳಿಸಿದೆ.