ಇಂದು ಮಧ್ವ ನವಮಿ
ಬೆಳಗಾವಿ 05 : ಇಲ್ಲಿಯ ರೈಲ್ವೆ ಮೇಲ್ಸೇತುವೆ ಬಳಿಯ ವಿದ್ಯಾ ವಿಹಾರ ವಿದ್ಯಾಪೀಠ, ರಾಘವೇಂದ್ರ ಸ್ವಾಮಿಗಳ ನವ ವೃಂದಾವನದಲ್ಲಿ ಮಧ್ವನವಮಿ ಮಹೋತ್ಸವ ನಡೆಯಲಿದೆ. ಫೆಬ್ರುವರಿ 06 2025 ರಂದು ವಿಶೇಷ ಪೂಜೆ, ಪಂಚಾಮೃತ, ವಿಶೇಷ ಅಲಂಕಾರ, ಭಜನೆ,ಪಾರಾಯಣ, ಅರ್ಚನೆ, ಪ್ರವಚನ , ಮಹಾಪ್ರಸಾದ ಜರುಗುವುದು. ಮಧ್ವನವಮಿ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ನಿವೇದನೆ.