ಟಿಪ್ಪು ಸುಲ್ತಾನ ಬ್ರಿಟಿಷರೊಂದಿಗೆ ನಿರಂತರ ಹೋರಾಟ ಮಾಡಿದ ದಿಟ್ಟ ರಾಷ್ಟ್ರ ನಾಯಕ : ಮೂರಮನ್

ಇಂಡಿ, 10: ಟಿಪ್ಪು ಸುಲ್ತಾನ ಒಬ್ಬ ದೇಶ ಭಕ್ತನಾಗಿದ್ದು ತನ್ನ ಜೀವಿತ ಅವಧಿಯಲ್ಲಿ ಬ್ರಿಟಿಷರೊಂದಿಗೆ ನಿರಂತರ ಹೋರಾಟ ಮಾಡಿದ ದಿಟ್ಟ ರಾಷ್ಟ್ರ ನಾಯಕ ಎಂದು ಕಾಂಗ್ರೆಸ್ ಮುಖಂಡ ಶಿವಾನಂದ ಮೂರಮನ್ ಹೇಳಿದರು.

    ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಹಜರತ ಟಿಪ್ಪು ಸುಲ್ತಾನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರೊಂದಿಗೆ ನಿರಂತರ ಹೋರಾಟ ಮಾಡಿ ನಾಲ್ಕನೆ ಆಂಗ್ಲೋ ಮೈಸೂರ ಯುದ್ದದಲ್ಲಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳಾಗಿ ಇಟ್ಟರೂ ಸಹಿತ ಸ್ವಾತಂತ್ರ್ಯದ ಕಿಚ್ಚು ಇತನಲ್ಲಿ ಅಡಗಿರಲಿಲ್ಲ. ಅಧಿಕಾರಶಾಹಿ ಆಗಿದ್ದರೆ ತನ್ನ ಇಬ್ಬರು ಮಕ್ಕಳನ್ನು ಒತ್ತೇಯಾಳಾಗಿ ಇಡುವ ಪ್ರಶ್ನೆ ಬರುತ್ತಿರಲ್ಲಿಲ್ಲ. ಇಡೀ ವಿಶ್ವದಲ್ಲಿಯೇ ಮೊಟ್ಟ ಮೋದಲ ಕ್ಷೀಪಣಿ ತಯಾರಕ ಟಿಪ್ಪು ಸುಲ್ತಾನ. ಟಿಪ್ಪು ಸುಲ್ತಾನ ಹಿಂದುಗಳ ವಿರೋಧಿಯಾಗಿದರೆ ಶೃಂಗೇರಿಯ ಶಾರದಾ ಪೀಠವನ್ನು ಜೀಣರ್ೋದ್ದಾರ ಮಾಡುತ್ತಿರಲ್ಲಿಲ್ಲ. ಶ್ರೀರಂಗ ಪಟ್ಟಣದ ಮುಂಭಾಗ ಮಸೀದಿ ಮುಂಭಾಗ ಹಿಂದು ದೇವಸ್ಥಾನ ಕಟ್ಟುತ್ತಿರಲ್ಲಿಲ್ಲ, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ಪಂಚಲಿಂಗ ಸ್ಥಾಪನೆ. ದೇವನಹಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯ, ಬೆಂಗಳೂರಿನ ಗಣೇಶ ದೇವಾಲಯ,ತಮಿಳುನಾಡಿನ ರಂಗಸ್ವಾಮಿ ದೇವಾಲಯ ಹೀಗೆ ಅನೇಕ ಹಿಂದು ದೇವಾಲಯಗಳಿಗೆ ಧಾನ ದತ್ತಿ ನೀಡಿ ಟಿಪ್ಪು ಸರ್ವಧರ್ಮಗಳ ಸಮನ್ವಯ ನೀತಿ ಹೊಂದಿದ ಒಬ್ಬ ಅಪ್ಪಟ್ಟ ದೇಶ ಭಕ್ತ ಎಂದು ಹೇಳಿದರೆ ತಪ್ಪಾಗಲಾರದು ಎಂದರು.

  ಪುರಸಭೆ ನಾಮನಿದೇರ್ಶಕ ಸದಸ್ಯರಾದ ಜಬ್ಬರಣ್ಣಾ  ಅರಬ,  ಮುಸ್ತಾಕ ಟಾಂಗೇವಾಲೆ, ಮಹಿಬೂಬ ಅರಬ, ಎಂ.ಎಂ.ಮಾಣಿಕಸರ್, ಸಿದ್ದಿಕ ಬೇಪಾರಿ, ರಾಜು ನೀಲನಾಯಕ, ಹರೀಶ ಹಿಟ್ನಳ್ಳಿ, ಭೀಮು ಅಹಿರಸಂಗ, ಸಚೀನ ಅಂಜುಟಗಿ, ಮಂಜು ಹಾದಿಮನಿ, ಶಿವು ತೆನ್ನಳ್ಳಿ ಸೇರಿದಂತೆ ಅನೇಕ ಗಣ್ಯರು ಇದ್ದರು.