ಲೋಕದರ್ಶನ ವರದಿ
ಯಲ್ಲಾಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಕರಯನ್ನು ಸ್ವೀಕರಿಸುವದಿಲ್ಲ.ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕರ ನೇಮಕಾತಿ ಪ್ರಕ್ರೀಯೆಲ್ಲಿ ಪಾರದರ್ಶಕತೆ ಇಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ತಮ್ಮ ಇಲಾಖೆಯ ನೇಮಕಾತಿಯ ಮಾನದಂಡ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ ಎಂದು ಸಿಡಿಪಿಓ ಫಾತಿಮಾ ಚುಳಕಿಗೆ ತಾಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು.
ಅವರು ಪಟ್ಟಣದ ತಾಪಂ ಸಭಾಭವನದಲ್ಲಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ .ಕಿರವತ್ತಿಯ ಜಯಂತಿ ನಗರದ ಅಂಗನವಾಡಿ ಕೇಂದ್ರ ಶೌಚಾಲಯ ಸರಿ ಇಲ್ಲ ಎಂಬ ಮಾಹಿತಿ ಬಂದಿದೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ಉಪಖಜಾನೆ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ವಿವಿಧ ಇಲಾಖೆಗೆ ಬಂದ ಅನುದಾನ ವಾಪಸ ಹೋಗುತ್ತಿದೆ.ತಾಪಂ 12ಲಕ್ಷ,ಸಿಡಿಪಿಯೂ ಗೆ ಬಂದ 36ಲಕ್ಷ,ಅನುದಾನ ಹಾಗೂ ಆರೋಗ್ಯ ಇಲಾಖೆಗೆ ಬಂದ ಅನುದಾನ ಕೂಡ ವಾಪಸ ಹೋಗಿದೆ ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅಧಿಕಾರಿಗಳು ,ತಾ ಪಂ ಸದಸ್ಯರು ,ತಹಶೀಲ್ದಾರ ಡಿಜಿ ಹೆಗಡೆ ಅವರಿಗೆ ಕೇಳಿಕೊಂಡರು.
ಅತಿಕ್ರಮಣ ಭೂಮಿ ಸಕ್ರಮಕ್ಕೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.ಅದಕ್ಕೆ ಕಾನೂನು ತಿದ್ದುಪಡಿಯೊಂದೆ ಮಾರ್ಗವಾಗಿದೆ ಹೀಗಾಗಿತಾ ಪಂ ಸದಸ್ಯರೆಲ್ಲರೂ ಸೇರಿ ಸಂಸದರನ್ನು ಭೇಟಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಲು ನಿರ್ಣಯ ಮಾಡಲಾಯಿತು.
ಗ್ರಾಪಂ ವ್ಯಾಪ್ತಿಯಲ್ಲಿ ಹೊಸಮನೆಗಳಿಗೆ ನಂಬರ ನೀಡುವ ವ್ಯವಸ್ಥೆ ಸ್ತಬ್ಧವಾಗಿದೆ.ಪಿಡಿಓ ಗಳು ನಿರ್ಲಕ್ಷ್ಯದಿಂದ ವೆಬ್ ಸೈಟ್ ತೆರೆದುಕೊಳ್ಳುವುದೇ ಕಷ್ಟವಾಗುತ್ತಿದೆ ಎಂದು ಕಾರಣ ಹೇಳುತ್ತಿದ್ದಾರೆ .ಮನೆ ನಂಬರ ಕೊಡುವ ಪದ್ಧತಿಯನ್ನು ಸರಳಿಕರಣಗೊಳಿಸಿ ಹಿಂದಿನಂತೆಯೇ ನಂಬರ ನೀಡುವಂತಾಗಬೇಕು ಎಂದು ಸದಸ್ಯರಾದ ಸುಬ್ಬಣ್ಣ ಬೋಳ್ಮನೆ,ನಟರಾಜಗೌಡ ಒತ್ತಾಯಿಸಿದರು. ಈ ಕುರಿತು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ತಹಶೀಲ್ದಾರ ಸಲಹೆ ನೀಡಿದರು.
ತಾಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ,ಕಾರ್ಯನಿರ್ವಹಣಾಧಿಕಾರಿ ನಾರಾಯಣ ಹೆಗಡೆ,ಸದಸ್ಯೆಯರಾದ ಮಂಗಲಾ ನಾಯ್ಕ, ಮಾಲಾ ಚಂದಾವರ ಮುಂತಾದವರು ಇದ್ದರು.