ಯಾಣದಿಂದ 12 ಕಿ.ಮೀ.ದೂರದಲ್ಲಿ ಭೂ ಕಂಪನ ಭಯ ಪಡುವಅಗತ್ಯಇಲ್ಲ

There is no need to fear earthquakes at a distance of 12 km from the aircraft.

ಯಾಣದಿಂದ 12 ಕಿ.ಮೀ.ದೂರದಲ್ಲಿ ಭೂ ಕಂಪನ ಭಯ ಪಡುವಅಗತ್ಯಇಲ್ಲ ್ಲ

ಕಾರವಾರ 09 :ಯಾಣದಿಂದ 12 ಕಿ.ಮೀ.ದೂರದ ಭೂಮಿಯ ಆಳದಲ್ಲಿ ಭೂ ಕಂಪನ ಆಗಿತ್ತು . ಅದರ ಪ್ರಮಾಣ 2.3 ರಷ್ಟು ಮಾತ್ರ ಇತ್ತು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಹೇಳಿದ್ದಾರೆ.ಸೋಮವಾರ ಭೂಕಂಪನದ ರಾಷ್ಟ್ರೀಯ ಕೇಂದ್ರ ಹಾಗೂ ಭೂ ವಿಜ್ಞಾನ ಸಚಿವಾಲಯದ ಅಧ್ಯಯನ ವರದಿ ನಂತರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿಗಳು, ಕುಮಟಾಯಾಣ, ಅಳಕೋಡ, ಶಿರಸಿಯರಾಗಿ ಹೊಸಳ್ಳಿ, ಬಂಡಲದ ಜನರು ಭಯಪಡುವ ಅಗತ್ಯ ಇಲ್ಲ ಎಂದಿದ್ದಾರೆ. 

1 ಡಿಸೆಂಬರ್ 2024 ರಂದು ಬೆಳಿಗ್ಗೆ 11:59 ಕ್ಕೆ ಯಾಣದ 12 ಕಿಲೋಮೀಟರ್ ಪೂರ್ವ-ಉತ್ತರ ದಿಕ್ಕಿನಲ್ಲಿ ಸಂಭವಿಸಿದೆ. ಭೂಕಂಪವು 5 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು .ಉತ್ತರಕನ್ನಡಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರತಾಲ್ಲೂಕು ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ಹರಿದಾಡಿದಕಲ್ಪನೆಯ ಅಂಶಗಳ ಕಾರಣದಿಂದರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾಕೇಂದ್ರವನ್ನು ಸಂಪರ್ಕಿಸಿ ನಿರ್ಧಿಷ್ಟಅಧ್ಯಯನ ಹಾಗೂ ಮಾಹಿತಿಕೋರಲಾಗಿತ್ತು. ಗಣಿ ಮತ್ತು ಭೂ ವಿಜ್ಞಾನಇಲಾಖೆಯ ಭೂವಿಜ್ಞಾನಿಗಳು ಹಾಗೂ ಕರ್ನಾಟಕರಾಜ್ಯ ನೈಸರ್ಗಿನ ವಿಪತ್ತು ನಿರ್ವಹಣಾಕೇಂದ್ರದ ವೈಜ್ಞಾನಿಕ ಅಧಿಕಾರಿಗಳು ಈ ಸಂಬಂಧಅಧ್ಯಯನ ನಡೆಸಿದ್ದರು.ಶಿರಸಿ ತಾಲ್ಲೂಕಿನಗ್ರಾಮ ಬಂಡಲ ಗ್ರಾಮ ಪಂಚಾಯತ ವ್ಯಾಪ್ತಿಯದೇವಿಮನೆ, ರಾಗಿ ಹೊಸಳ್ಳಿ, ಬಂಡಲ ಗ್ರಾಮ ಪಂಚಾಯತ ವ್ಯಾಪ್ತಿಯಕುಡುಟಾತಾಲ್ಲೂಕಿನಯಾಣ, ಅಳಕೋಡ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ಥಾನಿಕ ವರೀಶೀಲನೆ ನಡೆಸಿ ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದರು. 

 ಭೂಕಂಪನದ ತಾಂತ್ರಿಕ ಅಂಶಗಳ ಪರೀಶೀಲನೆ ಮಾಡಿ, ಸ್ಪಷ್ಟತೆಗೆ ಬಂದರುಎಂದುಜಿಲ್ಲಾಧಿಕಾರಿ ತಿಳಿಸಿದ್ದಾರೆ.ವರದಿಯ ಅಂಶಗಳು:ಕರ್ನಾಟಕರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾಕೇಂದ್ರ (ಏಖಓಆಒಅ) ಮತ್ತುಗಣಿ ಮತ್ತು ಭೂವಿಜ್ಞಾನಇಲಾಖೆಯತಂಡವು ಭೂಕಂಪನ ಪೀಡಿತ ಗ್ರಾಮಗಳಲ್ಲಿ ಕ್ಷೇತ್ರ ಪರೀಶೀಲನೆ ನಡೆಸಿ, ದೇವಿಮನೆ, ರಾಗಿಹೊಸಳ್ಳಿ ಮತ್ತು ಬಂಡಲ ಗ್ರಾಮಗಳಲ್ಲಿ ಅತ್ಯಂತ ಸೌಮ್ಯವಾದ ಕಂಪನಗಳು ಆಗಿವೆ. ಈ ಕಂಪನ ದಿಂದ ಭೂಮಿಯ ರಚನೆಗಳಲ್ಲಿ ಯಾವುದೇ ಬಿರುಕುಗಳು ಉಂಟಾಗಿಲ್ಲ.ಸ್ಥಳೀಯರು ಕೇವಲ 2-3 ಸೆಕೆಂಡುಗಳ ಕಾಲ ಕಂಪನವನ್ನು ಅನುಭವಿಸಿದ್ದಾರೆ. 

ಭೂ ಕಂಪನ ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತಯಾವುದೇಗಣಿಗಾರಿಕೆಚಟುವಟಿಕೆ ನಡೆಯುತ್ತಿಲ್ಲ.ಕಂಪನಗಳು ಭಾರೀ ಮಳೆಯಿಂದ ಉಂಟಾಗುವ ಅಡಚಣೆಗಳಿಂದ ಉಂಟಾಗಬಹುದುಎಂದು ಭೂಕಂಪನಅಧ್ಯಯನ ತಂಡವು ನಂಬಿದೆ. ಇದು ಭೂಮಿಯ ಹೊರಪದರದ ಆಳವಿಲ್ಲದ ಪದರಗಳಲ್ಲಿ ಮರುಹೊಂದಾಣಿಕೆಅಥವಾ ಸ್ಥಳಾಂತರಗಳಿಗೆ ಕಾರಣವಾಗುತ್ತದೆಎಂದುಅಧ್ಯಯನತಂಡ ಸ್ಪಷ್ಟಪಡಿಸಿದೆ.ಸ್ಥಳೀಯರು ಭಯಪಡುವಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಏಕೆಂದರೆ ಭೂಮಿಯ ಆಳದ ಸಣ್ಣ ಕಂಪನಗಳಿಂದಾಗಿ, ಭೂಮಿಯ ಮೇಲಿನ ಹೊರಪದರದಲ್ಲಿನ ಹೊಂದಾಣಿಕೆಗಳು ಸಹಜ. ಇದುಜಗತ್ತಿನಎಲ್ಲೆಡೆಒಂದೇ ಬಗೆಯಾಗಿರುತ್ತವೆಎಂದುಅಧ್ಯಯನತಂಡ ವರದಿ ನೀಡಿದೆಎಂದುಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರದಲ್ಲಿ ವಿವರಿಸಿದ್ದಾರೆ.