ಲೋಕದರ್ಶನ ವರದಿ
ಧಾರವಾಡ26: ಮಹಾನ್ ವ್ಯಕ್ತಿಗಳ ಹೆಸರುಗಳು ಅವರ ಕಾರ್ಯಗಳು ಅಜರಾಮವಾಗಿ ಉಳಿಯಲು ಹಾಗೂ ಅವರುಗಳ ಸಾಧನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಕೆಲ ಬಡಾವಣೆಗಳ ರಸ್ತೆಗಳಿಗೆ ಅಂತಹ ವ್ಯಕ್ತಿಗಳ ನಾಮಫಲಕಗಳನ್ನು ಹಾಕಿ ಆ ರಸ್ತೆಗಳಿಗೆ ಹೆಸರಿಡುವಂತ ಕಾರ್ಯ ಶ್ಲಾಘನೀಯವಾಗಿದೆ ಅದರಲ್ಲಿಯೂ ಬಡಾವಣೆಗಳ ಹೆಸರನ್ನು ಸೂಚಿಸಿ ರಸ್ತೆಗಳಿಗೆ ನಾಮಫಲಕ ನಿಮರ್ಿಸಿರುವುದು ಹೆಮ್ಮಯ ವಿಚಾರವಾಗಿದೆ ಎಂದು ಉದ್ಯಮಿ ಈರಣ್ಣ ಅಮರಶೆಟ್ಟಿ ಹೇಳಿದರು.
ಅವರು ಇಂದು ಇಲ್ಲಿಯ ಲಕ್ಷ್ಮೀನಗರದ ಯುವ ಬಳಗದವರು ನಿಮರ್ಿಸಿದ ರಸ್ತೆನಾಮಫಲಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿ, ಸಮಾಜಮುಖಿಯಾಗಿ ಕೆಲಸ ನಿರ್ವಹಿಸುವ ಇಂತಹ ಯುವ ಪಡೆಗೆ ಮಹಾನಗರ ಪಾಲಿಕೆಯವರು ಸ್ಪಂದಿಸಬೇಕೆಂದರು.
ಯಾವುದೇ ಕೆಲಸಕ್ಕೂ ಸಕರ್ಾರಗಳೇ ಮಾಡಲಿ ಎನ್ನುವ ಮನೋಭಾವನೆಗಳನ್ನು ಕೈಬಿಟ್ಟು ಸಮಾಜದೊಂದಿಗೆ ಎಲ್ಲರನ್ನು ಸೇರಿಸಿಕೊಂಡು ಒಂದಾಗಿ ಸಂಘ-ಸಂಸ್ಥೆಗಳ ಒಡನಾಟದೊಂದಿಗೆ ತಮ್ಮ ಬಡಾವಣೆಗೆ ಬೇಕಾದ ಸೌಲಭ್ಯಗಳನ್ನು ಹಾಗೂ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕೆಂದರು ಮನವಿ ಮಾಡಿದರು.
ಅಧ್ಯಕತೆ ವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರಾದ ಈರಣ್ಣ ಮಲ್ಲಿಗವಾಡ ಮಾತನಾಡಿ, ಈ ನಾಮಫಲಕ ನಿಮರ್ಿಸಲು ಸಾಕಷ್ಟು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿದ್ದರು ಯಾವುದೇ ಕಾರ್ಯವಾಗದ ಹಿನ್ನಲೆಯಲ್ಲಿ ಯುವ ಪಡೆ ಈ ನಾಮಫಲಕ ನಿಮರ್ಿಸಲು ಮುಂದಾಗಿತು ಇದಕ್ಕೆ ನಾವೇಲ್ಲರೂ ಕೈ ಜೋಡಿಸಿದ್ದೇವೆ ಎಂದ ಅವರು ಸಮಾಜ ಮುಖಿಯಾಗಿ ಸಲ್ಲಿಸುವ ಯಾವುದೇ ಕೆಲಸಕ್ಕೆ ನಾನು ಯಾವಾಗಳು ಬದ್ಧನಾಗಿ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಮೇಶ ಬರಮಗೌಡರ, ರಾಮಣ್ಣ ಚಲವಾದಿ, ಮಲ್ಲಿಕಾಜರ್ುನ ಕುತರ್ಿಮಠ, ಅಶೋಕ ಶೆಟ್ಟಿ, ರವಿ ಸತೀಶ, ಎಚ್.ಎಸ್.ಗೀರೀಶ ಹಲಗಿ, ಆರ್.ಬಿ.ಕಾಡನಕರ, ದಾನಪ್ಪಗೌಡರ, ಡಿ.ಸ್ಯಾಮಸಂಗ್ ಇನ್ನಿತರರು ಉಪಸ್ಥಿತರಿದ್ದರು.