ಇಕ್ರಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ: ವಾಲಿಕಾರ

The work of Ikra Education Institute is commendable: Walikara

ಇಕ್ರಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ: ವಾಲಿಕಾರ 

 ತಾಳಿಕೋಟಿ, 12; ಮಕ್ಕಳು ಒಂದು ಸಮುದಾಯದ ಭವಿಷ್ಯವನ್ನು ನಿರ್ಣಯಿಸುತ್ತಾರೆ,ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಅಗತ್ಯವಾಗಿದೆ. ಇದರ ಕುರಿತು ಪಾಲಕರು ಯಾವ ಕಾರಣಕ್ಕೂ ನಿಷ್ಕಾಳಜಿ ತೋರಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸಲಹೆ ನೀಡಿದರು.  

   ಪಟ್ಟಣದ ಟಿಪ್ಪು ನಗರ ಮೈದಾನದಲ್ಲಿ ಮಂಗಳವಾರ ಸಂಜೆ ಅಲ್‌-ಹುದಾ ಶಿಕ್ಷಣ ಸಂಸ್ಥೆಯ ಇಕ್ರಾ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದರ 18ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 18 ವರ್ಷಗಳಿಂದ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯ ಕಾರ್ಯಾ ಶ್ಲಾಘನೀಯ, ಸಂಸ್ಥೆಯ ಅಧ್ಯಕ್ಷರು ಶಿಕ್ಷಕರು ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಇವರಿಗೆ ಸಮುದಾಯದ ಸಹಕಾರ ಇರಲಿ ಎಂದರು. ಶಿಕ್ಷಕ ಸಾಹೇಬಗೌಡ ಬಿರಾದಾರ ಮಾತನಾಡಿ ಇದೊಂದು ಉರ್ದು ಶಾಲೆಯಾಗಿದ್ದರೂ ಇಲ್ಲಿಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಕುರಿತು ಇರುವ ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅತಿ ಕಷ್ಟದ ಕೆಲಸವಾಗಿದೆ ಇಂತಹದರಲ್ಲಿ 18 ವರ್ಷಗಳಿಂದ ಈ ಸಂಸ್ಥೆ ನಡೆಸಿಕೊಂಡು ಬರುತ್ತಿರುವುದು ಅತಿ ದೊಡ್ಡ ಸಾಧನೆಯಾಗಿದೆ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಎಐಎಂಐಎಂ ವಿಜಯಪುರ ಜಿಲ್ಲಾ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪೂರ ಮಾತನಾಡಿದರು. 

   ಅಲ್‌-ಹುದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಸಾಬ ಐ.ಕೆಂಭಾವಿ,ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ ಕೆಂಭಾವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಹೃದಯಸ್ಪರ್ಸಿಯಾಗಿ ಬೀಳ್ಕೋಡಲಾಯಿತು. 12 ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಶಿಕ್ಷಣ ಸಂಸ್ಥೆಯಲ್ಲಿ ಕಲಿತು ವಿವಿಧ ರಂಗಗಳಲ್ಲಿ ಸೇವಿಸಲ್ಲಿಸುತ್ತಿರುವವರಿಗೆ ಹಾಗೂ ಸಂಸ್ಥೆಯಿಂದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎಸ್‌.ಎಂ.ಬೇಪಾರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನಬಾಷಾ ಜಮಾದಾರ, ಮಾಜಿ ಉಪಾಧ್ಯಕ್ಷ ಮಾಸೂಮಸಾಬ ಕೆಂಭಾವಿ, ಕಸಾಪ ಅಧ್ಯಕ್ಷ ಆರ್‌.ಎಲ್‌. ಕೊಪ್ಪದ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಚಾಂದಹುಸೇನ ಖಾಂಜಾದೆ, ಕರವೇ ಜಿಲ್ಲಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ವಿಕೆಎಚ್ ಕಾರ್ಯದರ್ಶಿ ಮಾಧೂರಿ ಪ.ಹಜೇರಿ, ಪತ್ರಕರ್ತ ಅಬ್ದುಲ್ ಗನಿ ಮಕಾನದಾರ,ಕಾಸೀಮ್ ಅಲಿ ಮನ್ಸೂರ, ಸರಫರಾಜ್ ಎಂ, ಮಹಮ್ಮದ್ ಶಫೀಕ ಇನಾಮದಾರ, ಮೈನುದ್ದೀನ್ ಸಿಪಾಯಿ, ಅಲ್ಲಾಭಕ್ಷ ಲಾಹೋರಿ, ಮಹೆಬೂಬ್ ಬಿಸ್ತಿ, ಇಮಾಮಸಾಬ ಚೌದ್ರಿ, ಮುಖ್ಯ ಶಿಕ್ಷಕ ಜಾವೀದ ಎಂ.ಕೆಂಭಾವಿ,ಪ್ರೌಢಶಾಲೆ ಸಂಚಾಲಕ ಸಲಾವುದ್ದೀನ ಇರ್ಫಾನ್ ಖಾಜಿ ಸಿಬ್ಬಂದಿಗಳಾದ ಶ್ರೀಮತಿ ಬಿ. ಎಲ್‌.ಬಿರಾದಾರ,ಎಂ.ಎಂ .ಕೆಂಭಾವಿ,ಜೆ.ಎಚ್‌. ಮುಲ್ಲಾ,ಟಿ.ಎಂ. ಜಕಾತಿ,ಎಂ.ಎ.ಕಟಗಿ, ಎಂ.ಎ. ಪಟ್ಟೇವಾಲೆ,ಎನ್‌.ಎಂ. ಬಲಶಟ್ಟಿಹಾಳ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.