20 ಲಕ್ಷ ರೂ. ವೆಚ್ಚದಲ್ಲಿ ಸಿಸಿರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ

20 lakhs Rs. MLA Srinivasa Mane Bhumipuja for the construction of sisiraste and pakka gutter at cos

20 ಲಕ್ಷ ರೂ. ವೆಚ್ಚದಲ್ಲಿ ಸಿಸಿರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ  

ಹಾನಗಲ್ 12: ಶೇಷಗಿರಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

     ಗ್ರಾಮದ ಶಿವಣ್ಣ ಗುರ್ಕಿ ಅವರ ಮನೆಯಿಂದ ಶಂಕ್ರಣ್ಣ ಚಕ್ರಸಾಲಿ ಅವರ ಮನೆಯವರೆಗೆ ಈ ಸಂದರ್ಭದಲ್ಲಿ ಸಿಸಿರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಬಳಿಕ ಜನಸಂಪರ್ಕ ಸಭೆ ನಡೆಸಿ,ಗ್ರಾಮಸ್ಥರ ಅಹವಾಲು ಆಲಿಸಿದ ಶಾಸಕ ಮಾನೆ, ಕೇಂದ್ರ ಸರಕಾರ ಕರ್ನಾಟಕಕ್ಕೆ ಭಾರಿ ಅನ್ಯಾಯ ಮಾಡುತ್ತಿದೆ.ನ್ಯಾಯುತವಾಗಿ ನೀಡಬೇಕಿರುವ ಅನುದಾನ ನೀಡದೇ ವಂಚಿಸುತ್ತಿದೆ. ಬೆಳೆಹಾನಿ ಪರಿಹಾರವನ್ನೂ ಸಹ ಕೋರ್ಟ್‌ ಮೊರೆ ಹೋಗಿ ಪಡೆಯುವಂಥ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಜ್ಯ ಸರಕಾರ ಕೋರ್ಟ್‌ಗೆ ಹೋಗದಿದ್ದರೆ ಕಳೆದ ಬಾರಿ ಅತಿವೃಷ್ಟಿ ಪರಿಹಾರವನ್ನೂ ಬಿಡುಗಡೆ ಮಾಡದೇ ಕೇಂದ್ರ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿತ್ತು ಎಂದು ಹೇಳಿದ ಅವರು ಆರ್ಥಿಕ ಸಂಕಷ್ಟದ ನಡುವೆಯೂ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಲೂಕಿನ 62 ಸಾವಿರ ಕುಟುಂಬಗಳು ಆರ್ಥಿಕ ನೆರವು ಪಡೆಯುತ್ತಿವೆ ಎಂದರು. 

         ಹೊಂಕಣ ಗ್ರಾಪಂ ಅಧ್ಯಕ್ಷೆ ಜಯಮ್ಮ ಅಂಬಿಗೇರ ಅಧ್ಯಕ್ಷತೆ ವಹಿಸಿದ್ದರು.ಸದಸ್ಯರಾದ ಕೋಟೇಶ ಕುಮ್ಮೂರ, ಅರುಣ ಕೊಂಡೋಜಿ, ನಯನಾ ಹರಿಜನ, ತಾಪಂ ಮಾಜಿ ಸದಸ್ಯ ರಾಮಣ್ಣ ಶೇಷಗಿರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ,ಮುಖಂಡರಾದ ಬಸವರಾಜ ಬಡೆಮ್ಮಿ, ಜಯಣ್ಣ ದ್ಯಾವಣ್ಣನವರ,ಧರ್ಮಪ್ಪ ರೊಟ್ಟಿ, ಶಿವಪ್ಪ ಗುರ್ಕಿ, ರಾಮಚಂದ್ರ​‍್ಪ ಹೊಸಳ್ಳಿ, ಶಿವನಾಗಪ್ಪ ಕಬ್ಬೂರ, ಮುಲ್ಲಾನ್ ಶೇಷಗಿರಿ, ಸುರೇಶ ಕಟ್ಟಿಮನಿ, ನಾಗರಾಜ ನೆಲ್ಲಿಕೊಪ್ಪ, ಚಂದ್ರಶೇಖರ ರೊಟ್ಟಿ, ಹುಚ್ಚಪ್ಪ ವಡ್ಡರ, ರಾಮಚಂದ್ರ ಕಲ್ಲೇರ ಸೇರಿದಂತೆ ಅನೇಕರಿದ್ದರು.