39ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಟಿ.ಕೆ ಮಲಗೊಂಡ ಪ್ರಶಸ್ತಿ

TK Malagonda Award at the 39th Karnataka Working Journalists Association State Conference

39ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಟಿ.ಕೆ ಮಲಗೊಂಡ ಪ್ರಶಸ್ತಿ 

ಹಾವೇರಿ 12: ತುಮಕೂರಿನಲ್ಲಿ ಜರುಗಿದ 39ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಸಂಘದ ವತಿಯಿಂದ ನೀಡಲ್ಪಡುವ ಟಿ.ಕೆ ಮಲಗೊಂಡ ಪ್ರಶಸ್ತಿಗೆ(ಅತ್ಯುತ್ತಮ ತನಿಖಾ ವರದಿ)ಭಾಜನರಾದ ವಿಜಯವಾಣಿ ದಿನ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರರಾದ ಕೇಶವಮೂರ್ತಿ ವ್ಹಿ.ಬಿ ಅವರಿಗೆ ಚುಟುಕು ಸಾಹಿತ್ಯ ಬಳಗ, ಡಿವೈಎಫ್‌ಐ ಹಾಗೂ ಅಮ್ಮಾ ಸಂಸ್ಥೆಯ ವತಿಯಿಂದ ಅವರ ಕಛೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. 

     ಸ್ನೇಹ ಜೀವಿಯಾದ ಕೇಶವಮೂರ್ತಿಯವರ ಮಾಧ್ಯಮ ಕ್ಷೇತ್ರದಲ್ಲಿನ ಅಭೂತಪೂರ್ವ ಸೇವೆ ಹಾಗೂ ಅತ್ಯುತ್ತಮ ತನಿಖಾ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ  ಟಿ.ಕೆ ಮಲಗೊಂಡ ಪ್ರಶಸ್ತಿ ನೀಡಿದ್ದು, ಸಂತೋಷಕರ ಹಾಗೂ ಹೆಮ್ಮೆ ಪಡುವ ವಿಷಯವಾಗಿದೆ.ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ದೊರೆಯಲಿ ಎಂದು ಶುಭ ಹಾರೈಸಿದರು. 

         ಈ ಸಂದರ್ಭದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗಂಗಯ್ಯ ಕುಲಕರ್ಣಿ,ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ,ಅಮ್ಮಾ ಸಂಸ್ಥೆಯ ಸಂಸ್ಥಾಪಕರಾದ ನಿಂಗಪ್ಪ ಎಂ ಆರೇರ, ಶಾಂತಂವೀರಯ್ಯ ಕುಲಕರ್ಣಿ,ಈಶ್ವರಿ ಕಹಾರ ಉಪಸ್ಥಿತರಿದ್ದರು.