ಲೋಕದರ್ಶನ ವರದಿ
ಮುಂಡಗೋಡ: ಹೆಣ್ಣು ತಾನು ಪುರಷರ ರಷ್ಟೆ ಸಮಾನಳು ಎಂದು ತೋರಿಸುವ ನಿಟ್ಟಿನಲ್ಲಿ ಸಾಗಬೇಕು ಆದರೆ ಹೆಣ್ಣು ತನ್ನ ಸಂಸಾರದ ಜವಾಬ್ದಾರಿ ನಿಭಾಯಿಸಿ ಹೋರಾಟ ಮಾಡಬೇಕಾಗಿರುವುದು ಅವಶ್ಯ ಎಂದು ಮಾಜಿ ಜಿ.ಪಂ ಸದಸ್ಯೆ ಶ್ಯಾಮಲಾ ಕುರಿಯವರ ಹೇಳಿದರು.
ಅವರು ಸಿಸಿಎಫ್, ಲೋಯಲಾ ಜನಸ್ಪೂತರ್ಿ ಸ್ವಸಹಾಯ ಸಂಘಗಳ ಒಕ್ಕೂಟ, ಲೋಯಲಾ ವಿಕಾಸಕೇಂದ್ರ ಮುಂಡಗೋಡ ಮತ್ತು ಹಾನಗಲ್ ಸಂಯುಕ್ತಾಶ್ರಯದಲ್ಲಿ ವಿವೇಕಾನಂದ ಬಯಲು ಮಂಟಪದಲ್ಲಿ ಹಮ್ಮಿಕೊಂಡಿದ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆಯ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೆಣ್ಣಿಗೆ ದೈರ್ಯ ಹಾಗೂ ಛಲ ಮತ್ತು ಹೋರಾಟ ಮಾಡುವ ಶಕ್ತಿ ಇರಬೇಕು. ಹೆಣ್ಣಿಗೆ ಒಂದು ಚೌಕಟ್ಟು ಇದೆ ಆ ಚೌಕಟ್ಟನ್ನು ನಾವು ಮೀರಿಹೋಗುವುದು ಸಲ್ಲದು ಎಂದರು.
ಪ್ರಸ್ತಾವಿಕವಾಗಿ ಲೋಯಲಾ ಸಮೂಹ ಸಂಸ್ಥೆಯ ಮುಖ್ಯಸ್ಥ ಫಾ|| ಫ್ರಾನ್ಸಿಸ್ ಮೆನೆಸಜ್ ಮಾತನಾಡಿ ಹೆಣ್ಣು ತಾನು ಮೋದಲು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಸ್ವಾಭಿಮಾನ ಬೆಳಸಿದಕೊಂಡರೆ ಹೆಣ್ಣಿಗೆ ಎಂತಹ ತೊಂದರೆಗಳು ಬಂದರೂ ನಿಭಾಯಿಸುವ ಶಕ್ತಿ ಬಂದು ತಾನು ಪುರಷರಷ್ಟೆ ಸಮಾನಳು ಎಂದು ತೋರಿಸಬಹುದಾಗಿದೆ ಎಂದರು ಹೆಣ್ಣಿನ ಆಂತರಿಕ ಶಕ್ತಿ ಪುರುಷರಿಗಿಂತಲೂ ಮಿಗಿಲಾದ್ದದ್ದು ಇದನ್ನು ನೋಡಿದರೆ ಹೆಣ್ಣು ಸಮಾನತೆ ಪಡೆದಿದ್ದಾಳೆ ಎಂದೆನುಸುತ್ತಿದೆ. ಆಂತರಿಕ ಹಾಗೂ ಬಾಹ್ಯ ಶಕ್ತಿಗಳ ಮೇಲೆ ಹೆಣ್ಣು ವಿಶ್ವಾಸವಿಟ್ಟು ನಡೆದರೆ ಹೆಣ್ಣು ಸಮಾನತೆ ಪಡೆಯುವುದು ಸಿದ್ದ. ತಾಯಂದಿರೂ ತಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ನೀಡಬೇಕು ಎಷ್ಟೆ ಕಷ್ಟಬಂದರೂ ಹೆಣ್ಣಿಗೆ ಶಿಕ್ಷಣದಿಂದ ವಂಚಿರನ್ನಾಗಿ ಮಾಡಬಾರದು. ಹೆಣ್ಣಿಗೆ ಶಿಕ್ಷಣವಿದ್ದರೆ ತನ್ನ ಕಾಲುಗಳ ಮೇಲೆ ನಿಲ್ಲಲ್ಲು ಆಕೆಗೆ ಧೈರ್ಯ ಬರುತ್ತದೆ. ಆಯಾ ಸಂದರ್ಭಕ್ಕ ಯೋಚಿಸುವ ಶಕ್ತಿ ಬರುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಕಲಾ ಡುಮ್ಮಿಂಗ್ ಸಿದ್ದಿ ವಹಿಸಿದ್ದರು. ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ಧಾರವಾಡದ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸೇವಾ ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಮುನವಳ್ಳಿ ಆಗಮಿಸಿದ್ದರು.
ವೇದಿಕೆ ಮೇಲೆ ಶ್ಯಾಮಲಾ ಆರ್.ನಾಯ್ಕ, ಜೆಸ್ಸಿ ಪುಲ್ಲಟ್, ಗ್ರೆಟ್ಟಾ ಮೊಂತೇರೋ, ಪೊಲೀಸ ಪೇದೆ ಶಂಕ್ರಮ್ಮ ಲಮಾಣಿ, ರೂಪಾ ಎಸ್.ಅಂಗಡಿ, ಸ್ಟೇಟ್ಬ್ಯಾಂಕ್ ನದೀಪಾ ಕುಲಕಣರ್ೀ, ಪತ್ರಕತರ್ೆ ಶಿಭಾ ರಾಠೋಡ,ಪ್ರಭಾವತಿ ಪಾಟೀಲ ರಾಜಾಬಿ ದೊಡ್ಡಮನಿ ಮುಂತಾದವರು ಇದ್ದರು
ವೇದಿಕೆ ಸಮಾರಂಭಕ್ಕಿಂತ ಮೋದಲು ಪರವೀಕ್ಷಣಾ ಮಂದಿರದ ಹತ್ತಿರ ಜಮಾವಣೆಗೊಂಡ ಮಹಿಳೆಯ ಮೆರವಣೆಗೆ ಮೂಲಕ ನಡೆದರು ಮೆರವಣಿಗೆಯಲ್ಲಿ ಮಹಿಳೆಯರ ಡೋಳ್ಳುಕುಣಿತ ಆಕರ್ಷಕವಾಗಿತ್ತು.