ದಾನಮ್ಮ ದೇವಿಯ ಮದುವೆ ಸಂಭ್ರಮ


ಲೋಕದರ್ಶನ ವರದಿ

ಸಿಂದಗಿ: ಪಟ್ಟಣದ ಸಾರಂಗಮಠದ ಆವರಣದಲ್ಲಿ ಚೆನ್ನವೀರ ಮಹಾಸ್ವಾಮಿಗಳ  124ನೇ ಜಯಂತ್ಯುತ್ಸವ ಅಂಗವಾಗಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ-ಗಚ್ಚಿನಮಠ ಅಡಿಯಲ್ಲಿ ನಡೆಯುತ್ತಿರುವ ಗುಡ್ಡಾಪುರ ದಾನಮ್ಮ ತಾಯಿ ಪುರಾಣ-ಪ್ರವಚನ ಕಾರ್ಯಕ್ರಮದಲ್ಲಿ ದಿ.19ರಂದು ಸಂಜೆ ಸಾರಂಗಮಠದ ಆವರಣದಲ್ಲಿ ಸಂಜೆ ದಾನಮ್ಮ ದೇವಿಯ ಮದುವೆಯ ಸಮಭ್ರಮ ಅದ್ದೂರಿಯಾಗಿ ಜರುಗಿತು.

ತಾಲೂಕಿನ ರಾಂಪೂರ ಪಿ.ಎ. ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ದಿ.19ರಂದು ಬೆಳಿಗ್ಗೆ ದಾನಮ್ಮ ದೇವಿಯ ಪರಿವಾರ ಮತ್ತು ದಾನಮ್ಮ ದೇವಿಯ ಪತಿ ಸೋಮಲಿಂಗ ಪರಿವಾರದವರು ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಪರಿವಾರದವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಂತರ ಪರಿವಾರದವರಿಗೆ ಬಟ್ಟೆ ಆಹೇರಿ ಮಾಡಲಾಯಿತು. ನಂತರ ದಾನಮ್ಮ ದೇವಿಯ ಪರಿವಾರದವರು ಗಂಡಿನವರಿಗೆ ಮದುವೆಗೆ ಆಮಂತ್ರ್ರಣ ನೀಡಿದರು.

ಗಂಡಿನ ಪರಿವಾರದವರಾದ ರಾಂಪೂರ ಗ್ರಾಮದವರೊಂದಿಗೆ ಹಿಕ್ಕಣಗುತ್ತಿ, ಬೆನಕೋಟಗಿ, ಗಣಿಹಾರ ಮತ್ತು ಬಬಲೇಶ್ವರ ಗ್ರಾಮಗಳಿಂದ 51 ಎತ್ತಿನ ಬಂಡಿಗಳಲ್ಲಿ ಮೇರವಣಿಗೆ ಮೂಲಕ ಪಟ್ಟಣದ ಸಾರಂಗಮಠಕ್ಕೆ ಆಗಮಿಸಿದರು. ಅವರನ್ನು ಸುಮಂಗಲೆಯರ ಆರತಿ ಮಾಡುವ ಮೂಲಕ ಬರಮಾಡಿಕೊಂಡರು.

ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು, ಇಲಕಲ್ಲದ ಹಿರೇಮಠದ ಅನ್ನದಾನ ಶಾಸ್ತ್ರಿಗಳು, ಸಿ.ಎಂ.ಪೂಜಾರ, ವಿಶ್ವನಾಥ ಜೋಗುರ, ಈರಯ್ಯ ಕಪರ್ೂರಮಠ, ಚನ್ನಯ್ಯ ಮಠ, ಚನ್ನು ಬಮ್ಮಣ್ಣಿ, ಅಮೀರಸಾಬ ಮುಜಾವರ, ಸೋಮಶೇಖರ ಜೋಗುರ, ಶಾಂತು ಬಮ್ಮಣ್ಣಿ, ಗುರುಶಾಂತಯ್ಯ ಜಂಗಿನಮಠ, ಬಾಬು ಡೋಳ್ಳಿ, ಪ್ರಾಚಾರ್ಯ ಶರಣು ಜೋಗುರ, ಚನ್ನು ಕಟ್ಟಿ ಸೇರಿದಂತೆ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.