ಸ್ವಯಂಪ್ರೇರಿತ ಅಂಗಡಿಮುಗ್ಗಟ್ಟುಗಳು ಬಂದ್, ವಿವಿಧೆಡೆ ಶ್ರೀಗಳಿಗೆ ಶ್ರದ್ದಾಂಜಲಿ ಶ್ರೀಗಳ ಶಿವಕ್ಯರಾಗಿದ್ದಕ್ಕೆ ತಾಳಿಕೋಟೆ ಸಂಪೂರ್ಣ ನಿಶಬ್ದ

ತಾಳಿಕೋಟೆ 22:ನಡೆದಾಡುವ ದೇವರು ದೇಶದ ಆರಾಧ್ಯ ಮೂತರ್ಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಶಿವಕ್ಯರಾಗಿದ್ದಕ್ಕೆ ಯಾವುದೇ ಜಾತಿ ಧರ್ಮವೆನ್ನದೇ ಎಲ್ಲರ ಸಹಭಾಗಿತ್ವದಲ್ಲಿ ಭಾವೈಕ್ಯತೆಯ ಪ್ರತೀಕ ಸ್ವಯಂಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ವಿವಿಧಡೆ ಶ್ರದ್ದಾಂಜಲಿ ಸಭೆ ನಡೆಸುವದರೊಂದಿಗೆ ಶ್ರೀಗಳಿಗೆ ಭಕ್ತಿಯ ನಮನಗಳನ್ನು ಸಲ್ಲಿಸಿದರು.

ಪಟ್ಟಣದಲ್ಲಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಮುಚ್ಚಲ್ಪಟ್ಟಿದ್ದರಿಂದ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಹಾಗೂ ವಾಹನ ಸಂಚಾರ ವಿಲ್ಲದೇ ನಿಶಬ್ದವಾಗಿ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡು ಬಂದವಲ್ಲದೇ ಕೆಲವುಕಡೆಗಳಲ್ಲಿ ಶ್ರದ್ದಾಂಜಲಿ ಸಲ್ಲಿಸಿ ಪೂಜಿಸಿ ಇಡಲಾದ ಶ್ರೀಗಳ ಭಾವಚಿತ್ರಕ್ಕೆ ನಾಗರಿಕರು ಪುಷ್ಪಾರ್ಚನೆ ಮಾಡುತ್ತಾ ತಮ್ಮ ಭಕ್ತಿಯನ್ನು ಸಮಪರ್ಿಸುತ್ತಿರುವದು ಕಂಡುಬಂದಿತು.

ಬಜಾರ ಬಸವೇಶ್ವರ ದೇವಸ್ಥಾನದ ಹತ್ತಿರ ಕಿರಾಣಿ ಅಸೋಶೇಷನ್ ವತಿಯಿಂದ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಿ ಶ್ರೀಗಳಿಗೆ ನಮನವನ್ನು ಸಲ್ಲಿಸಲಾಯಿತು. ಈ ಸಮಯದಲ್ಲಿ ಕಾಯಪಲ್ಲೆ ಮಾಕರ್ೇಟ್ ಯಾರ್ಡನ ಗಣ್ಯವರ್ತಕರಾದ ಕೆ.ಆರ್.ಚೌದ್ರಿ ಅವರು ಮಾತನಾಡಿ ತ್ರೀವಿದ ಸ್ವರೂಪರಾಗಿ ದೇಶದ ಲಕ್ಷಾಂತರ ಜನರಿಗೆ ಅನ್ನದಾಸೋಹ, ಜ್ಞಾನ ದಾಸೋಹ, ಆದ್ಯಾತ್ಮೀಕ ದಾಸೋಹಗಳನ್ನು ಜಗತ್ತಿಗೆ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿದ್ದಾರೆ ಅವರು ನಮ್ಮನ್ನು ಬಿಟ್ಟು ಅಗಲಿರುವದು ಇಡೀ ದೇಶಕ್ಕೆ ಅಷ್ಟೇ ಅಲ್ಲಾ ವಿದೇಶಿಗರಿಗೂ ಕಾಮರ್ೋಡ ಆವರಿಸಿದಂತಾಗಿದೆ ಎಂದರು.

ವಿವಿಧಡೆ ಜರುಗಿದ ಶ್ರದ್ದಾಂಜಲಿ ಸಭೆಯಲ್ಲಿ ಶ್ರೀಗಳ ಭಕ್ತಾದಿಗಳಾದ ರವಿ ತಾಳಪಲ್ಲೆ, ಕಾಶಿನಾಥ ಸಜ್ಜನ, ಸತ್ಯನಾರಾಯಣ ತಾಳಪಲ್ಲೆ, ವಿಕ್ರಮ ಅಗರವಾಲಾ, ರಾಮಸ್ವರೂಪ ಅಗರವಾಲಾ, ರವಿ ಜಾಲಿಬಂಚಿ, ಪ್ರಲ್ಹಾದ ಮಾನವಿ, ಎಂ.ಆಯ್.ಸಜ್ಜನ, ಗುರು ಕಲಾಲ, ರಾಘವೇಂದ್ರ ತಾವರಗೇರಿ, ಜಾಕೀರ ಇಂಗಳಗೇರಿ, ರಜಾಕ ಅವಟಿ, ಎಂ.ಎಸ್.ಬೇಪಾರಿ, ಅಲ್ಲಾಭಕ್ಷ ಪಟ್ಟೇವಾಲೆ, ಯಂಕಣ್ಣ ತಾಳಪಲ್ಲೆ, ವಿಶ್ವನಾಥ ಬಿದರಕುಂದಿ, ರಾಜು ಹಂಚಾಟೆ, ರಾಘವೇಂದ್ರ ವಿಜಾಪೂರ, ಸರಶೆಟ್ಟಿ, ಕಾಶಿನಾಥ ಅರಳಿಚಂಡಿ, ರಾಜು ಅಲ್ಲಾಪೂರ, ಸಂಗನಗೌಡ ಅಸ್ಕಿ(ಹಿರೂರ), ಅಡತ್ ಮರ್ಚಂಟ್ ಅಸೋಶೇಷನ್ದ ಬಾಬು ಹಜೇರಿ, ಚಿಂತಪ್ಪಗೌಡ ಯಾಳಗಿ, ಅಪ್ಪು ಆನೇಸೂರ, ದತ್ತಾತ್ರೇಯ ಹೆಬಸೂರ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ, ಆಯ್.ಬಿ.ಬಿಳೇಭಾವಿ,ಅಶೋಕ ಶೆಟ್ಟಿ, ಶಿವಣ್ಣ ಸರೂರ,ಅಶೋಕ ಜಾಲವಾದಿ, ಚನಬಸ್ಸು ಸರಶೆಟ್ಟಿ, ಮಹಾದೇವಪ್ಪ ಕುಂಭಾರ, ನಾರಾಯಣ ಸುಭೇದಾರ, ಎಂ.ಎಸ್.ನಾಗರಾಳ, ಸಂಜೀವನ್ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಸುಭಾಸ ನಾಡಗೌಡ, ಡಾ.ಮುತ್ತು ಅಲೇಗಾವಿ, ಲಲಿತಾ ನಾಡಗೌಡ, ರಘುದಾದಾ ಹಜೇರಿ, ಸುರೇಶ ಹಜೇರಿ, ಗೊಲ್ಲಾಳ್ಪ, ಅಶೋಕ ಹಚಡದ, ಒಳಗೊಂಡಂತೆ ಸಾವಿರಾರು ಜನರು ಜಾತಿ ಧರ್ಮ ಬೇದವೆನ್ನದೇ ಪಾಲ್ಗೊಂಡು ಭಾವೈಕ್ಯತೆಯಿಂದ ಶ್ರೀಗಳಿಗೆ ನಮನ ಸಲ್ಲಿಸಿದರು.