ಬಸವಾದಿ ಶರಣರ ಸಮಾಧಿಗಳಿರುವ ಗ್ರಾಮ ಆದರ್ಶ ಗ್ರಾಮವಾಗಿ ಘೋಷಿಸಬೇಕೆಂದು ಮನವಿ

ಲೋಕದರ್ಶನ ವರದಿ

ಬೆಳಗಾವಿ 10: ಬಸವಾದಿ ಶರಣರ ಸಮಾಧಿಗಳಿರುವ ಗ್ರಾಮಗಳನ್ನು ಆದರ್ಶ ಗ್ರಾಮಗಳು ಎಂದು ಘೋಷಿಸಬೇಕು ಹಾಗೂ ಆ ಗ್ರಾಮಗಳು ಮತ್ತು ಸಮಾಧಿ ಸ್ಥಳಗಳ ಅಭಿವೃದ್ದಿಗೆ ಬಜೆಟನಲ್ಲಿ ವಿಶೇಷ ಅನುದಾನ ನೀಡುವಂತೆ ಬಸವ ಭೀಮ ಸೇನೆ ಆಗ್ರಹಿಸಿದೆ. 

ಈ ಕುರಿತು ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಅವರ ನೇತೃತ್ವದಲ್ಲಿ ದಿ.09ರಂದು ಅಪ್ಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ವಿಶ್ವಗುರು ಬಸವಣ್ಣನವರು, 12 ನೇ ಶತಮಾನದ ಬಸವ ಕ್ರಾಂತಿ ಹಾಗೂ ಆ ಕ್ರಾಂತಿಯ ರೂವಾರಿಗಳಾಗಿರುವ ಬಸವಾದಿ ಶರಣರೆ ಈ ನಾಡಿನ ಹೆಗ್ಗುರುತುಗಳು. ಈ ನಾಡಿನ ಮುಖ್ಯಮಂತ್ರಿ ಆದಿಯಾಗಿ ಎಲ್ಲರಿಗೂ ಬಸವ ಮಾರ್ಗವೇ ಆದರ್ಶ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದನ್ನು ಈ ನಾಡಿನ ಮುಖ್ಯಮಂತ್ರಿಗಳಾಗಿ ತಾವೂ ಒಪ್ಪಿಕೊಳ್ಳುವಿರೆಂದು ಭಾವಿಸಿದ್ದೇವೆ. ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಆ ಮಹೋನ್ನತನ ಕ್ರಾಂತಿಯ ರೂವಾರಿಗಳಾಗಿರುವ ಅನೇಕ ಬಸವಾದಿ ಶರಣರ ಸಮಾಧಿಗಳು ಮಹಾಮನೆಗಳಾಗಿ ಕಂಗೋಳಿಸಬೇಕಾಗಿತ್ತು. ಆದರೆ, ಇಂದು ಆ ಪವಿತ್ರ ಸಂಕೇತಗಳು ತೀರ ಶಿಥಿಲಾವಸ್ಥೆಯಲ್ಲಿವೆ. ಆ ಸಮಾಧಿಗಳು ಮಹಾಮನೆಗಳನ್ನಾಗಿಸಬೇಕು ಮತ್ತು ಆ ಸಮಾಧಿ ಸ್ಥಳಗಳನ್ನು 900 ವರ್ಷಗಳ ಕಾಲ ಕಾಪಾಡಿಕೊಂಡು ಬಂದಿರುವ ಆ ಗ್ರಾಮಗಳು ಆದರ್ಶ ಗ್ರಾಮಗಳಾಗಿ ರೂಪಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. 

ಬೆಳಗಾವಿ ಜಿಲ್ಲೆಯಲ್ಲಿ ಬಸವಾದಿ ಶರಣರ ಅನೇಕ ಸಮಾಧಿಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಬಸವ ಶರಣ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ, ಮುರಕಿಭಾವಿಯಲ್ಲಿ ಬಸವ ಶರಣೆ ನೀಲಮ್ಮನವರ, ಇಂಚಲದಲ್ಲಿ ಬಂಕನಾಥೇಶ್ವರರ, ಸವದತ್ತಿ ತಾಲೂಕಿನ ಕಾರಿಮನಿಯಲ್ಲಿ ಮಡಿವಾಳ ಮಾಚಿದೇವರ, ಖಾನಾಪೂರ ತಾಲೂಕಿನ ಕಕ್ಕೇರಿಯಲ್ಲಿ ಡೋಹರ ಕಕ್ಕಯ್ಯ ಹಾಗೂ ಅವರ ಧರ್ಮಪತ್ನಿ ಭೀಷ್ಠಾದೇವಿಯವರ ಸಮಾಧಿಗಳಿವೆ. ಆ ಸಮಾಧಿಗಳಿರುವ ಸ್ಥಳಗಳನ್ನು ಮಹಾಮನೆಗಳಾಗಿ ಪರಿವತರ್ಿಸಬೇಕಾಗಿದೆ. ಈ ಎಲ್ಲ ಸಮಾಧಿ ಸ್ಥಳಗಳು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತವೆ. ಆದರೂ ಅನುದಾನ ಪಡೆಯುವಲ್ಲಿ ಪರದಾಡಬೇಕಾಗುತ್ತಿದೆ. ಆದರಿಂದ, ಮುಂಬರುವ ರಾಜ್ಯ ಬಜೆಟ್ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿರುವ ಸಮಾಧಿಗಳು ಸೇರಿದಂತೆ ರಾಜ್ಯದಾದ್ಯಂತ ಇರುವ ಬಸವಾದಿ ಶರಣರ ಸಮಾಧಿಗಳಿರುವ ಗ್ರಾಮಗಳನ್ನು ಆದರ್ಶ ಗ್ರಾಮಗಳೆಂದು ಘೋಷಿಸಬೇಕು. ಆ ಗ್ರಾಮಗಳು ಮತ್ತು ಸಮಾಧಿ ಸ್ಥಳಗಳ ಅಭಿವೃದ್ದಿಗಾಗಿ ವಿಶೇಷ ಅನುದಾನ ಘೋಷಿಸುವಂತೆ ತಮಗೆ ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಜಿ.ಜಿ.ತಳವಾರ, ಬಸವರಾಜ ಸುಣಗಾರ, ಮಧುಶ್ರೀ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.