ಗದಗ 15: ದೇಶದ ನಿಜವಾದ ಸಂಪತ್ತು ಆರೋಗ್ಯಕರ ಜನಸಂಪತ್ತು. ಆದುದರಿಂದ ವಿದ್ಯಾಥರ್ಿ ದಿಸೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಎಚ್.ಕೆ.ಪಾಟೀಲ ನುಡಿದರು.
ನಗರದ ಕಳಸಾಪುರ ರಸ್ತೆಯಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿಂದು ಪದವಿ ಪೂರ್ವ ಶಿಕ್ಷಣ ಇಲಾಖೆ, ಸನ್ಮಾರ್ಗ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗುತ್ತಿರುವ 2018-19 ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾಥರ್ಿಗಳ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಗದಗ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಗದಗ ಜಿಲ್ಲೆಯು ಸ್ವಾತಂತ್ರ್ಯ ಹೋರಾಟ, ಕನರ್ಾಟಕ ಏಕೀಕರಣ, ಸಹಕಾರ ಕ್ಷೇತ್ರ, ಸಾಹಿತ್ಯ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಹಾಕಿ, ಕಬಡ್ಡಿ ಹಾಗೂ ಕುಸ್ತಿ ರಂಗಗಳಲ್ಲಿ ಗದಗ ತನ್ನದೇ ಆದ ಛಾಪು ಮೂಡಿಸಿದೆ. ಗದಗ ಜಿಲ್ಲೆಯ ಕುಸ್ತಿ ಪಟುಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಹೆಸರನ್ನು ಉತ್ತುಂಗಕ್ಕೇರಿಸಿದ ಕೀತರ್ಿ ಏಕಲವ್ಯ ಪ್ರಶಸ್ತಿ ವಿಜೇತರಾದ ಗದುಗಿನ ಕುಸ್ತಿ ಪಟು ಕು. ಪ್ರೇಮಾ ಹುಚ್ಚಣ್ಣ ಅವರಿಗೆ ಸಲ್ಲುತ್ತದೆ. ಗದಗ ಜಿಲ್ಲೆಯು ಕುಸ್ತಿ ಸೇರಿದಂತೆ ಕ್ರೀಡಾ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸುವಂತಾಗಬೇಕು. ಕಳಸಾಪುರ ರಸ್ತೆಯಲ್ಲಿನ ಈ ಒಳಾಂಗಣ ಕ್ರೀಡಾಂಗಣದಲ್ಲಿ ಇನ್ನೂ ಹೆಚ್ಚಿನ ಕ್ರೀಡಾಕೂಟಗಳು ನಡೆಯಬೇಕು ಶಾಸಕ ಎಚ್.ಕೆ.ಪಾಟೀಲ ನುಡಿದರು.
ಏಷಿಯನ್ ಕುಸ್ತಿ ಚಾಂಪಿಯನ್, ಏಕಲವ್ಯ ಪ್ರಶಸ್ತಿ ವಿಜೇತ ಕುಸ್ತಿ ಪಟು ಕುಮಾರಿ ಪ್ರೇಮಾ ಹುಚ್ಚಣ್ಣ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ ಭಾರತ ದೇಶದಲ್ಲಿ ಕುಸ್ತಿಗೆ ಅದರಲ್ಲೂ ದೇಶೀ ಕುಸ್ತಿಗೆ ತನ್ನದೇ ಆದ ಇತಿಹಾಸ ಹೊಂದಿದೆ. ಮೈಸೂರು ಮಹಾರಾಜರ ಕಾಲದಲ್ಲಿಯೂ ಇದು ಪ್ರಸಿದ್ಧಿಯಾಗಿತ್ತು. ಕನ್ನಡ ನಾಡು ಕುಸ್ತಿಗೆ ಹೆಸರುವಾಸಿಯಾದ ನಾಡು. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ತಂದಿರುವ ಕು. ಪ್ರೇಮಾ ಹುಚ್ಚಣ್ಣವರು ನಮ್ಮ ಗದುಗಿನವರೇ ಎನ್ನುವುದು ಅಭಿಮಾನದ ಸಂಗತಿಯೆಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ ಗದಗ ಜಿಲ್ಲೆಯು ಕ್ರೀಡಾ, ಸಹಕಾರ, ಸಂಗೀತ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ ಎಂದರು. ಇಂದು ವಿದ್ಯಾಥರ್ಿಗಳು ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿಲ್ಲ. ಓಲಂಪಿಕ್ದಲ್ಲಿ ಭಾರತವು 2016 ರಲ್ಲಿ ಎರಡು ಪದಕಗಳನ್ನು ಗಳಿಸಿದೆ. ದೇಶದ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ತರಬೇತಿ ನೀಡುವ ಕಾರ್ಯವಾಗಬೇಕಾಗಿದೆ. ಅಗತ್ಯದ ಸೌಲಭ್ಯಗಳು ಹೆಚ್ಚುವ ಅಗತ್ಯವಿದೆ ಎಂದು ಸಂಕನೂರ ನುಡಿದರು.
ಸಮಾರಂಭದಲ್ಲಿ ಗದಗ ತಾಲೂಕು ಪಂಚಾಯತ್ ಅಧ್ಯಕ್ಷ ಮೋಹನ ದುರಗಣ್ಣವರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಬಿ.ಬಿ. ವಿಶ್ವನಾಥ, ಸನ್ಮಾರ್ಗ ಪದವಿ ಪೂರ್ವ ಕಾಲೇಜಿನ ಎಸ್.ಇ.ಸಮಿತಿಯ ಅಧ್ಯಕ್ಷ ರಾಜೇಶ ಕುಲಕಣರ್ಿ, ಕಾಲೇಜಿನ ಪ್ರಾಚಾರ್ಯರಾದ ರೋಹಿತ ಒಡೆಯರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಶೇಷ ವೀಕ್ಷಕ ಶಾಂತದುಗರ್ಿ, ವಿವಿಧ ಜಿಲ್ಲೆಗಳ ಪಿ.ಯು ಕಾಲೇಜುಗಳಿಂದ ಆಗಮಿಸಿದ ಕುಸ್ತಿ ಕ್ರೀಡಾಪಟುಗಳು, ನಿಣರ್ಾಯಕರುಗಳು, ತರಬೇತುದಾರರು, ಕಾಲೇಜುಗಳ ಬೋಧಕ ವೃಂದದವರು, ವಿದ್ಯಾಥರ್ಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಗದಗ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯ ಸಂಘದ ಅಧ್ಯಕ್ಷ ಎಮ್.ಸಿ. ಕಟ್ಟಿಮನಿ ಸರ್ವರನ್ನು ಸ್ವಾಗತಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಎಸ್. ಹಿರೇಮಠ ವಂದಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಡಾ. ಲಕ್ಷ್ಮೀದೇವಿ ಗವಾಯಿ ಹಾಗೂ ಎಫ್.ಎನ್.ಹುಡೇದ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ 30 ಜಿಲ್ಲೆಗಳಿಂದ 350 ಬಾಲಕರು ಹಾಗೂ 150 ಬಾಲಕಿಯರು ಎರಡು ದಿನಗಳವರೆಗೆ ನಡೆಯುವ ಈ ಕುಸ್ತಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಬಾಲಕಿಯರಿಗಾಗಿ ಫ್ರೀ ಸ್ಟೈಲ್, ಬಾಲಕರಿಗಾಗಿ ಫ್ರೀ ಸ್ಟೈಲ್ ಮತ್ತು ಗ್ರೀಕೋ ರೋಮನ್ ಸ್ಟೈಲ್ ನಲ್ಲಿ ಕುಸ್ತಿ ಪಂದ್ಯಾಟಗಳು ನಡೆಯಲಿವೆ. ಬಳ್ಳಾರಿ ಮತ್ತು ಬೆಂಗಳೂರು ತಂಡಗಳ ನಡುವೆ ಪ್ರಥಮ ಪಂದ್ಯ ದೊಂದಿಗೆ ಕುಸ್ತಿ ಪಂದ್ಯಾವಳಿಗಳು ಪ್ರಾರಂಭಗೊಂಡವು.