ಲೋಕದರ್ಶನ ವರದಿ
ಧಾರವಾಡ 19: ಭಾರತವು ಸರ್ವಧರ್ಮಗಳ ಸಮನ್ವಯದ ಅಪರೂಪದ ಭೂಮಿ, ಭಾವೈಕ್ಯತೆಯ ಸುಂದರ ನಾಡು ಎಂದು ವಣರ್ಿಸಿರುವುದನ್ನು ಓದಿದ್ದೇವೆ. ಕನರ್ಾಟಕ ವಿದ್ಯಾವರ್ಧಕ ಸಂಘ ಸರ್ವಧರ್ಮಗಳ ಸದಸ್ಯರನ್ನು ಹೊಂದಿದ್ದು, ಭಾವೈಕ್ಯತೆಯ ನೈಜ ಪುಣ್ಯಭೂಮಿ ಆಗಿದೆ ಎಂದು ಶಿವಪುತ್ರಯ್ಯ ಮ. ರಾಚಯ್ಯನವರ ಹೇಳಿದರು.
ಅವರು ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ಕನರ್ಾಟಕ ರಾಜ್ಯೋತ್ಸವ ಅಂಗವಾಗಿ ಇಂದು 'ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ' ನಾಟಕ ಪ್ರದರ್ಶನದ ಚಾಲನೆ ನೀಡಿ ಮಾತನಾಡಿದ ಕ.ವಿ.ವ. ಸಂಘದ ಅಧೀಕ್ಷಕ ಶಿವಪುತ್ರಯ್ಯ ಮ. ರಾಚಯ್ಯನವರ, ಸಂಘದಲ್ಲಿ ಸುದೀರ್ಘ ಸೇವೆ ಮಾಡಿದ ನನ್ನ ಸೇವೆಯನ್ನು ಗಮನಿಸಿ, ಶ್ರಮಜೀವಿಗಳ ಪ್ರತಿನಿಧಿಯಾಗಿ ನನ್ನನ್ನು ಗೌರವಿಸಿ ಈ ನಾಟಕ ಪ್ರದರ್ಶನಕ್ಕೆ ಚಾಲನೆ ಮಾಡುವ ಗೌರವದ ಅವಕಾಶ ನೀಡಿದ ಸಂಘದ ನಡೆದ ನನಗೆ ತುಂಬಾ ಆದರ್ಶ ಪ್ರಾಯವಾಗಿ ತೋರುತ್ತಿದೆ ಎಂದರು.
ಹಿರಿಯ ಸದಸ್ಯರಾದ ಪ್ರೊ. ವ್ಹಿ. ಆರ್. ಸಂಗೊಂದಿಮಠ ಮತ್ತು ವಿನಾಯಕ ಬೊಮ್ಮಯ್ಯ ಗಾಂವಕರ, ರಂಗಭೂಮಿ ಕಲಾವಿದ ಭೀಮನಗೌಡ ಭು. ಖಟಾವಿ ಅವರನ್ನು ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಮತ್ತು ಪದಾಧಿಕಾರಿಗಳು ಸೇರಿ ಗೌರವಿಸಿ, ಸನ್ಮಾನಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಮೂವರು ಸಂಘವು ನಮ್ಮನ್ನು ಗುರುತಿಸಿ, ಸನ್ಮಾನಿಸಿದ್ದಕ್ಕೆ ತಮ್ಮ ಕೃತಜ್ಞತೆ ಇದು ನಮ್ಮ ಸೌಭಾಗ್ಯ ಎಂದರು.
ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ), ಗೌರವ ಉಪಾಧ್ಯಕ್ಷ ಎಂ.ಬಿ. ಕಟ್ಟಿ, ಸೇತುರಾಮ ಹುನಗುಂದ, ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ, ಶಂಕರ ಕುಂಬಿ ಉಪಸ್ಥಿತರಿದ್ದರು.
ಶಿಕ್ಷಕ ಸುರೇಶ ಗೋವಿಂದರೆಡ್ಡಿ ಪ್ರಾಥರ್ಿಸಿದರು. ಸಂಘದ ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಎಸ್.ಬಿ. ಗುತ್ತಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಗಾಮನಟ್ಟಿ ಹಾಗೂ ವೀರಣ್ಣ ಒಡ್ಡೀನ, ಡಾ. ರಾಜಶೇಖರ ಬಶೆಟ್ಟಿ, ಲಕ್ಷ್ಮಣ ಪುರದ, ಪ್ರಭು ಹಂಚಿನಾಳ, ಜಯಶ್ರೀ ಗೌಳಿ, ಎಚ್.ಡಿ. ನದಾಫ್, ವೈ.ಎನ್. ಮಾಳಗಿ, ಶಂಕರ ರಾಜಗೂಳಿ, ರಾಘವೇಂದ್ರ ಕುಂದಗೋಳ, ಲಕ್ಷ್ಮಣ ಬಕ್ಕಾಯಿ, ಮಹೇಶ ಕುಲಕಣರ್ಿ, ವಾಯ್.ಸಿ. ಬಿಜಾಪೂರ, ಚನಬಸಪ್ಪ ಅವರಾದಿ ಸೇರಿದಂತೆ ಅನೇಕರ ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣ ಧಾರವಾಡ ತಂಡದ ಕಲಾವಿದರು 'ಪಾಪು ಗಾಂಧಿ ಗಾಧಿ ಬಾಪು ಆದ ಕಥೆ' ನಾಟಕವನ್ನು ಪ್ರದಶರ್ಿಸಿದರು. ಸರಳ ರಂಗ ವಿನ್ಯಾಸದ ಈ ನಾಟಕ ಪ್ರೇಕ್ಷಕರಿಗೆ ತುಂಬಾ ಹಿಡಿಸಿತು ಮತ್ತು ಹೊಸ ಬಗೆಯ ರಂಗ ಪ್ರದರ್ಶನ ಎಂದು ಪ್ರೇಕ್ಷಕರು ಮೆಚ್ಚಿ ಚಪ್ಪಾಳೆ ತಟ್ಟಿದರು.