ಜನೇವರಿಯಲ್ಲಿ ಮೂರು ದಿನ ಅಖಿಲಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸಿದ್ಧತೆ ಚುರುಕುಗೊಳಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ

ಧಾರವಾಡ 30: ಬರುವ 2019 ಜನೇವರಿ 6,7, ಮತ್ತು 8 ರಂದು ಧಾರವಾಡದ ಕೆಸಿಡಿ ಮೈದಾನದಲ್ಲಿ ಆಯೋಜಿಸುತ್ತಿರುವ ಅಖಿಲಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಸಂಭ್ರಮದಿಂದ ಆಯೋಜಿಸಲು ಎಲ್ಲ ಕಾರ್ಯಗಳ ಸಿದ್ಧತೆನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅಧಿಕಾರಿಗಳಿಗೆ ಮತ್ತು ಜಿಲ್ಲಾ ಕಸಾಪ ಘಟಕಕ್ಕೆ ಆದೇಶ ನೀಡಿದರು.

                ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳನ್ನು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

                ಸುಮಾರು 61 ವರ್ಷಗಳ ನಂತರ ಧಾರವಾಡ ನಗರಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸುವ ಗೌರವ ಸಿಕ್ಕಿದೆ. ಇದನ್ನು ಜಿಲ್ಲೆಯ ಹಬ್ಬವಾಗಿ ಸಂಘಟಿಸಿ, ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಜಿಲ್ಲೆಯ ಆತಿಥ್ಯ ನೀಡಿ ಗೌರವಿಸೋಣ. ಸಂಘಟನೆಯಲ್ಲಿ ಯಾವುದೇ ರೀತಿ ಕೊರತೆ ಮತ್ತು ಲೋಪವಾಗದಂತೆ ಪ್ರತಿಯೊಬ್ಬರು ಜಾಗರೂಕತೆ ವಹಿಸಬೇಕು. ಅದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿ, ಮೂಲಕ ಯೋಜನಾಬದ್ಧವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

                ಸಾಹಿತ್ಯ ಸಮ್ಮೇಳನದ ಸ್ವಾಗತ, ದ್ವಜಾರೋಹಣ, ಮೆರವಣಿಗೆ, ವಿಚಾರ ಸಂಕಿರಣ, ಕವಿಗೋಷ್ಠಿ, ಪುಸ್ತಕ ಮಳಿಗೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಆಯೋಜಿಸಬೇಕು.

                ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಮತ್ತು ಸಾರ್ವಜನಿಕರಿಗೆ ಊಟ, ವಸತಿ, ಪಾಕರ್ಿಂಗ್ ವ್ಯವಸ್ಥೆಗಳು ಯಾವ ತೊಂದರೆಗಳು ಇಲ್ಲದಂತೆ ಸಿಗಬೇಕು. ಅದಕ್ಕಾಗಿ ಸಕರ್ಾರಿ ನೌಕರರ, ಹೋಟೆಲ್ ಮಾಲೀಕರ, ಶಿಕ್ಷಣ ಸಂಸ್ಥೆಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮತ್ತು ವಿವಿಧ ಸಾಹಿತ್ಯ ಸಂಘಟನೆಗಳ ಸಭೆಗಳನ್ನು ಪ್ರತ್ಯೇಕವಾಗಿ ಆಯೋಜಿಸಿ ಅವರಿಗೆ ಜವಾಬ್ದಾರಿ ನೀಡಿ, ಸಹಕಾರ ಕೋರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

                ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತ್ಯೇಕ ಲಾಂಛನದ ಅಗತ್ಯವಿದ್ದು, ಕುರಿತು ಹಾಗೂ ವಿವಿಧ ಸಮಿತಿಗಳ ರಚನೆ, ಸಮ್ಮೇಳನಕ್ಕೆ ಅಗತ್ಯವಿರುವ ಬಜೆಟ್ ಕುರಿತು ಚಚರ್ಿಸಲು ಸಧ್ಯದಲ್ಲಿಯೇ ಮತ್ತೊಂದು ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

                ಜಿ.ಪಂ. ಮುಖ್ಯಕಾರ್ಯನಿವರ್ಾಹಣಾಧಿಕಾರಿ ಡಾ.ಬಿ.ಸಿ. ಸತೀಶ್ ಅವರು ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ತಮಗೆ ನೀಡಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಸಮ್ಮೇಳನಕ್ಕೆ ಲಕ್ಷಾಂತರ ಜನ ಆಗಮಿಸುವುದರಿಂದ ಸಮ್ಮೇಳನದ ಸ್ಥಳವಾದ ಕೆಸಿಡಿ ಸುತ್ತಮುತ್ತ ಟ್ರಾಫಿಕ್ ಸಮಸ್ಯೆಯಾಗದಂತೆ ನಗರಕ್ಕೆ ಬಂದು ಸೇರುವ ಎಲ್ಲಾ ರಸ್ತೆಗಳಿಗೆ ನಿಧರ್ಿಷ್ಟ ಸ್ಥಳ ಗುರುತಿಸಿ, ಅಲ್ಲಿಯೇ ಸಾರ್ವಜನಿಕರ ವಾಹನಗಳಿಗೆ ಪಾಕರ್ಿಂಗ್ ವ್ಯವಸ್ಥೆ ಕಲ್ಪಿಸಬೇಕು. ಮತ್ತು ಅಲ್ಲಿಂದ ಸಮ್ಮೇಳನದ ಸ್ಥಳದವರೆಗೆ ಉಚಿತವಾಗಿ ನಗರ ಸಾರಿಗೆ ಬಸ್ ಸೇವೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.

                ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಬಹಳ ವರ್ಷಗಳ ನಂತರ ಧಾರವಾಡ ಜಿಲ್ಲೆಗೆ ಸಿಕ್ಕಿರುವ ಸಮ್ಮೇಳನದ ಆತಿಥ್ಯವನ್ನು ನಿರ್ವಹಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯ. ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸ್ವಾಗತ ಸಮಿತಿ ಸೇರಿದಂತೆ ಸುಮಾರು 16 ಕ್ಕೂ ಹೆಚ್ಚು ಸಮಿತಿಗಳ ರಚನೆ ಅಗತ್ಯವಿದೆ. ಇದರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾಹಿತ್ಯ, ಸಾಂಸ್ಕೃತಿಕ, ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಬೇಕು. ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ನಿದರ್ೆಶನ ನೀಡಬೇಕೆಂದು ಹೇಳಿದರು.

                ಉಪಪೊಲೀಸ್ ಆಯುಕ್ತ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಆಹಾರ ಇಲಾಖೆಯ ಹಿರಿಯ ಉಪನಿದರ್ೆಶಕ ಡಾ.ಸದಾಶಿವ ಮಜರ್ಿ, ರಂಗಾಯಣದ ಆಡಳಿತಾಧಿಕಾರಿ ಕೆ.ಎಸ್. ಚೆನ್ನೂರ, ಕವಿವಿ ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಕೇರಿ, ಹಿರಿಯ ಸಾಹಿತಿ ಮೋಹನ ನಾಗಮ್ಮನವರ, ಶ್ರೀಮತಿ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕ ಎಸ್.ಕೆ. ರಂಗಣ್ಣವರ ಸೇರಿದಂತೆ ಇತರರು ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡಿದರು.

                ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್, ಎಸಿಪಿ ಎಂ.ಎನ್. ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿನಿದರ್ೆಶಕ ಮುನಿರಾಜು, ಡಾ.ಆರ್.ಸಿ. ಹಿರೇಮಠ, ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಜೆ.ಎಂ. ನಾಗಯ್ಯ, ಜಿಲ್ಲಾ ಕಸಾಪ ಕಾರ್ಯದಶರ್ಿಗಳಾದ ಪ್ರೊ. ಕೆ.ಎಸ್. ಕೌಜಲಗಿ, ಡಾ: ಜೀನದತ್ತ ಹಡಗಲಿ, ಕೋಶಾಧಿಕಾರಿ ಡಾ.ಎಸ್.ಎಸ್. ದೊಡ್ಡಮನಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.