ನಮ್ಮ ಗ್ರಾಮೀಣ ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ಪೂರಕ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು : ಖಾದ್ರಿ
ಶಿಗ್ಗಾವಿ 03: ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಮ್ಮ ಗ್ರಾಮೀಣ ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ಪೂರಕ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು. ಸರ್ಕಾರದ ಯೋಜನೆಗಳ ಜೊತೆಗೆ ನಮ್ಮ ಮಕ್ಕಳು ಪ್ರತಿಭಾಶಾಲಿಗಳಾಗಿ, ಉನ್ನತ ಮಟ್ಟದ ವಿಜ್ಞಾನಿಗಳು. ತಂತ್ರಜ್ಞರು ಮೇದಾವಿಗಳಾಗಬೇಕೆಂದು ಹೆಸ್ಕಾಂ ನಿಗಮದ ಅಧ್ಯಕ್ಷ ಅಜಂಪೀರ್ ಎಸ್ ಖಾದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು..
ತಾಲೂಕಿನ ನಾರಾಯಣಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಬ್ರಾಹಿಂಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗ್ರಾಮಸ್ಥರ ಹಾಗೂ ದಾನಿಗಳ ಸಹಾಯದಿಂದ ನವೀಕರಣವಾದ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಸರ್ಕಾರದ ಯೋಜನೆಗಳು ಹಾಗೂ ಸಾಮೂಹಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಸರ್ವಧರ್ಮದವರೊಡನೆ ಸೌಹಾರ್ಧತೆಯಿಂದ ಕೆಲಸ ಮಾಡುತ್ತಿರುವ ಗ್ರಾಮದ ಹಿರಿಯರ ಹೃದಯ ಶ್ರೀಮಂತಿಕೆ ದೊಡ್ಡದು. ಸರಕಾರಿ ಶಾಲೆಯನ್ನು ದಾನಿಗಳ ಮೂಲಕ ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವ್ಯವಸ್ಥೆಯನ್ನು ಸರಿಪಡಿಸಿದ್ದಕ್ಕೆ ಮಾಜಿ ಜಿಪಂ ಸದಸ್ಯ ಶಶಿಧರ ಮಾಡಿದ ಕಾರ್ಯಕ್ಕೆ ಅಭಿನಂದನೆ ತಿಳಿಸಿದ ನಮ್ಮ ಗ್ರಾಮೀಣ ಶಾಲಾ ಮಕ್ಕಳು 100ಅ ಪ್ರತಿಭಾಶಾಲಿಗಳಾಗಬೇಕು. ರಾಜ್ಯಕ್ಕೆ ಶಾಲೆ ಮಾದರಿಯಾಗಬೇಕು. ಎಂದರು.
ಜಿಲ್ಲಾಧಿಕಾರಿ ವಿಜಯ ಮಾಹಾಂತೇಶ ಮಾತನಾಡಿ, ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಲಾಗದು. ಗ್ರಾಮ ಮಟ್ಟದಲ್ಲಿ ಸರಕಾರಿ ಶಾಲೆ ಅಭಿವೃದ್ದಿ ಪಡಿಸಿದ್ದು ಸರಕಾರಿ ಶಾಲೆ ಹೀಗೂ ಇರುತ್ತಾ ಎನ್ನುವ ಶಿರ್ಷಿಕೆ ಕಾರ್ಯಕ್ರಮದ ಪ್ರಸ್ತೂತ ಅಭಿವೃದ್ಧಿ ಕಂಡು ಎಲ್ಲರ ಗಮನ ಸೆಳೆಯುವಂತಾಯಿತು. ಗ್ರಾಮೀಣ ಶಾಲೆಗಳ ಆಧುನಿಕರಣ, ನವೀಕರಣ, ಎಲ್ಲ ಕಲಿಕಾದೃಷ್ಠಿ ಮಕ್ಕಳ ಶಿಕ್ಷಣಕ್ಕೆ ಹೊಸತನ ನೀಡಿದೆ.ಶಿಕ್ಷಣ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಜಾತಿಧರ್ಮವಿಲ್ಲದ ಗುರುವಂದನೆ ಕಾರ್ಯಕ್ರಮ, ಸಾಮಾಜಿಕ ಸಾಮರಶ್ಯದ ಅರ್ಥಿಕ ಸಹಾಯ, ಹಾಗೂ ಶಾಲೆಗೆ ಭೂದಾನ ಮಾಡಿದ ಎಲ್ಲ ಹಿರಿಯರ ನಿಸ್ವಾರ್ಥ ಸಹಕಾರಕ್ಕೆ ಅಭಿನಂದನೆ ತಿಳಿಸಿದ ಅವರು ಗಾಂಧೀಜಿ ತತ್ವ ಆದರ್ಶಗಳನ್ನು ಮಕ್ಕಳ ಮನದಲ್ಲಿ ಮೂಡಿಸಲು ಯುವಪೀಳಿಗೆಯಲ್ಲಿ ಬಿತ್ತಲು ಮೈದಾನದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ್ದು ಕಂಡು ಮೆಚ್ಚುಗೆಯಾಗಿತು ಎಂದರು.
ಡಿಡಿಪಿಐ ಸುರೇಶ ಹುಗ್ಗಿ ಭೂದಾನಿಗಳ ಫಲಕ ಅನಾವರಣಗೊಳಿಸಿ ಮಾತನಾಡಿ, ಜ್ಞಾನ ಯಾರೊಬ್ಬರ ಸ್ವತ್ತೂ ಅಲ್ಲ. ಪ್ರತಿವರ್ಷವೂ ಇಬ್ರಾಹಿಂಪೂರ ಸರಕಾರಿ ಶಾಲೆ ತನ್ನ ಕ್ರೀಯಾಶೀಲ ಪ್ರತಿಭೆಯಿಂದ ಪ್ರಶಸ್ತಿಗಳನ್ನು ಬಾಚುತ್ತಲೇ ಇದೆ. ನುರಿತ ಆಸಕ್ತ ಶಿಕ್ಷಕರು ಕೆಲಸ ಮಾಡಿದ್ದಾರೆ. ಅಧ್ಯಯನಕ್ಕೆ ಶಾಲೆ ಪರಿಸರ ಪಾಲಕರ ಕಾಳಜಿ, ಸ್ವಚ್ಛತೆ, ಕಲಿಕೆಗೆ ಪ್ರೇರಣೆಯ ಶಿಕ್ಷಕರ ಪಠ್ಯಕ್ರಮ ಮಕ್ಕಳ ಪ್ರತಿಭೆಗೆ ಅನುಕೂಲತೆ ನೀಡುತ್ತಿದೆ. ಶಿಕ್ಷಣಕ್ಕೆ ಇನ್ನಷ್ಟು ಮೆರಗು ನೀಡುತ್ತಿದೆ. ಶಿಕ್ಷಕರು ಹಾಗೂ ಪಾಲಕರ ಹೊಣೆಗಾರಿಕೆಯಿದ್ದಲ್ಲಿ ಗ್ರಾಮೀಣ ಪರಿಸರದ ಮಕ್ಕಳೂ ಉತ್ತಮ ಸಾಧನೆ ಮಾಡುತ್ತಾರೆನ್ನುವುದು ಇಲ್ಲಿ ಸಾಭಿತಾಗಿದೆ.ಎಂದರು.
ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ ಕಾರ್ಯಕ್ರಮದ ಪ್ರಾಸ್ಥಾವಿಕ ಮಾತನಾಡಿ ಶಾಲೆ ನಡೆದು ಬಂದ ದಾರಿ , ಹಾಗೂ ದಾನಿಗಳ ಸಂಗ್ರಹ ರಾಜಸ್ವದಿಂದ ಅಭಿವೃದ್ಧಿ ಕಾರ್ಯಗಳ ನಡೆ. ಶಿಕ್ಷಕರ ಶೃಮದಾನ. ಬಗ್ಗೆ ಮಾಹಿತಿ ಪ್ರಸ್ತೂತಪಡಿಸಿದರು. ಶಿವದೇವ ಶರಣರ ಸಾನಿಧ್ಯದ ಎಸ್.ಡಿಎಂಸಿ ಅಧ್ಯಕ್ಷ ಸಹದೇವಪ್ಪ ಗುಳೇದಕೇರಿ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ನಿವೃತ್ತರಿಗೆ ಗುರುವಂದನೆ, ದಾನಿಗಳಿಗೆ, ಗ್ರಾಮೀಣ ಪ್ರತಿಭೆಗಳಿಗೆ ಸನ್ಮಾನ ಗೌರವ ಸಮರೆ್ಣ.ಅಭಿನಂಧನೆ ನಡೆಯಿತು. ಧಾರವಾಡ ಶಿಕ್ಷಣ ಆಯುಕ್ತೆ ಜಯಶ್ರೀ ಸಿಂತ್ರಿ. ಜಿಪಂ ಕಾರ್ಯನಿರ್ವಾಹಕ ಅಭಿಯಂತರ ದಿಲ್‌ಶಾದ್ ಬೇಗಂ ಮೂಗನೂರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ ಅಂಬಿಗೇರ. ಹಾಗೂ ಎಂಎಚ್.ಪಾಟೀಲ. ಶಾಲಾ ಅಭಿವೃದ್ಧಿ ಸಮೀತಿ ಸದಸ್ಯರು. ಗ್ರ್ರಾಮ ಪಂಚಾಯತಿ ಸದಸ್ಯರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಗ್ರಾಮಸ್ಥರು. ಉಪಸ್ಥಿತರಿದ್ದರು.