ಬತ್ತಿ ಹೋಗುತ್ತಿದ್ದ ಕಬ್ಬು ಕಟಾವು: ತಪ್ಪಿದ ರೈತರ ಹಾನಿ
ಸಂಬರಗಿ 24: ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನಡೆಸುವ ಹಂಗಾಮವು ಸ್ಥಗಿತಗೊಂಡಿದ್ದರೂ ಸಹ ಎಳೆ ಕಬ್ಬು ನೀರಿಲ್ಲದೆ ಬತ್ತಿ ಹೋಗುತ್ತಿದೆ. ಈ ಕಬ್ಬನ್ನು ಸಾಂಗಲಿ ಜಿಲ್ಲೆಯ ಹಲವಾರು ಕಾರ್ಖಾನೆಗಳು ಕಬ್ಬು ಕಟಾವ ಮಾಡಿ ಸಾಗಾಣಿಕೆ ಮಾಡಿದ್ದಾರೆ. ನೀರಿನ ಕೊರತೆಯಿಂದ ಬತ್ತಿ ಹೋಗಿರುವ ಕಬ್ಬಿಗೆ ಕಾರ್ಖಾನೆಗಳು ಕಬ್ಬು ಕಟಾವು ಮಾಡಿ ಸಾಗಾಣಿಕೆ ಮಾಡಿ ಸುಮಾರು 1 ಲಕ್ಷ ಟನ್ ಕಬ್ಬನ್ನು ಕಟಾವ್ ಮಾಡಿದ್ದಾರೆ.
ಅಕ್ಟೋಬರ್, ನವ್ಹೆಂಬರ್‌ದಲ್ಲಿ ಲಾಗಾನ್ ಮಾಡಿರುವ 86032, 265, 94012 ಈ ಕಬ್ಬನ್ನು ಕೇವಲ 7 ತಿಂಗಳಲ್ಲಿ ಕಟಾವು ಮಾಡಿದ್ದಾರೆ. ಕಾರ್ಖಾನೆಗಳಿಗೆ ಈ ಕಬ್ಬು ಕಟಾವು ಮಾಡಿದರೆ ಹಾನಿ ಇದ್ದರೂ ಸಹ ಎಥನಾಯಿಲ್ ತಯಾರ್ ಮಾಡಲು ಈ ಕಬ್ಬನ್ನು ಕಟಾವು ಮಾಡಿ ರೈತರಿಗೆ ಪ್ರತಿ ಟನ್‌ಗೆ 3ಸಾವಿರದ 1ನೂರು ರೂಪಾಯಿ ದರ ನೀಡಿದ್ದಾರೆ. ಮದಬಾವಿ, ಸಂಬರಗಿ, ಅನಂತಪೂರ, ಜಂಬಗಿ, ಗುಂಡೆವಾಡಿ, ಪಾರ್ಥನಹಳ್ಳಿ, ಚಮಕೇರಿ, ಕೆಂಪವಾಡ ಈ ಭಾಗದ ಸುತ್ತ ಮುತ್ತಲಿನ ಗ್ರಾಮದಲ್ಲಿ ಕಬ್ಬು ಬತ್ತಿ ಹೋಗುತ್ತಿತ್ತು. ಆದರೆ ಸಾಂಗಲಿ, ಜತ್ತ, ಶಿರೊಳ, ಜಮಖಂಡಿ ತಾಲೂಕಿನ ಹಲವಾರು ಕಾರ್ಖಾನೆಗಳು ಕಬ್ಬು ಸಾಗಾಣಿಕೆ ಮಾಡಿ ರೈತರಿಗೆ ಅನುಕೂಲ ಮಾಡಿದ್ದಾರೆ. ಕಬ್ಬು ಕಟಾವು ಮಾಡದಿದ್ದರೆ, ರೈತರ ಕಬ್ಬು ಬತ್ತಿ ಹೋಗುತ್ತಿತ್ತು.
ಗಡಿ ಭಾಗದಲ್ಲಿ ಹಾಳಾಗುವ ಕಬ್ಬನ್ನು ಕಾರ್ಖಾನೆಗಳು ಕಟಾವು ಮಾಡಿ ರೈತರು ಹಾನಿಗೊಳಗಾವುದನ್ನು ದೂರ ಮಾಡಿದ್ದಾರೆ. ಗಡಿ ಭಾಗದಲ್ಲಿ ಅಕ್ಟೋಬರ, ನವ್ಹೆಂಬರ, ಡಿಸೆಂಬರ ತಿಂಗಳಲ್ಲಿ ನಾಟಿಮಾಡಿರುವ ಕಬ್ಬನ್ನು ಕೇವಲ 12 ಗಣಿಕೆ ಕಬ್ಬನ್ನು ಕಟಾವು ಮಾಡಿ ರೈತರಿಗೆ ಮರುಜೀವ ಕೊಟ್ಟಿದ್ದಾರೆ. 2025-26ನೇ ಸಾಲಿನಲಿ ಗಡಿ ಭಾಗದಲ್ಲಿ ಕಬ್ಬು ಸಿಗುವುದು ಸ್ಥಳಿಯ ಕಾರ್ಖಾನೆಗಳಿಗೆ ಕಷ್ಟವಾಗುತ್ತದೆ.