ಕಬ್ಬಿನ ಸಮಸ್ಯೆ ಇತ್ಯರ್ಥಕ್ಕಾಗಿ ಸಕರ್ಾರ ಮದ್ಯ ಪ್ರವೇಶಿಸಬೇಕು: ಶಾಸಕ ಕಾರಜೋಳ

ಲೋಕದರ್ಶನ ವರದಿ

ಮುಧೋಳ 03: ದಕ್ಷಿಣ ಕನರ್ಾಟಕದ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ ಮತ್ತು ತೆಂಗು ಹಾಗೂ ಇತ್ಯಾದಿ ಬೆಳೆಯನ್ನು ಬೆಳೆಯುವ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸಕರ್ಾರ ಅದೆ ರೀತಿ ಉತ್ತರ ಕನರ್ಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬಿನ ಸಮಸ್ಯೆ ಪರಿಹರಿಸಲು ಮದ್ಯಸ್ಥಿಕೆವಹಿಸಿ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ,ಶಾಸಕ ಗೋವಿಂದ ಕಾರಜೋಳ ಆಗ್ರಹಿಸಿದರು.

   ಶನಿವಾರ ತಮ್ಮ ಸ್ವಗೃಹ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಭಾಗದ ರೈತರು ಕಬ್ಬಿನ ಬಿಲ್ಲ ಬಾಕಿಗಾಗಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿಗಾಗಿ ಕಬ್ಬು ಬೆಳೆಗಾರರು ನಿರಂತರ ಹೋರಾಟ ಮಾಡುತ್ತಿದ್ದರೂ ಸಕರ್ಾರ ಮಾತ್ರ ಕೈಕಟ್ಟಿ ಕುಳಿತಿರುವುದು ವಿಷಾದನೀಯ ಸಂಗತಿ, ಉತ್ತರ ಕನರ್ಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿರುವುದು ನೋವಿನ ಸಂಗತಿಯಾಗಿದೆ, ಇನ್ನು ಮುಂದಾದರೂ ಈ ಕೂಡಲೇ ಸಕರ್ಾರ ಎಚ್ಚತ್ತುಕೊಂಡು ಕಾಖರ್ಾನೆಯ ಮಾಲಿಕರ ಹಾಗೂ ರೈತ ಮುಖಂಡರ ಸಭೆ ಕರೆದು ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

   ರೈತರ ಸಾಲ ಮನ್ನಾ ಘೋಷಣೆ ಮಾಡಿರುವ ಸಕರ್ಾರ ಇದೂವರೆಗೂ ರೈತರ ಖಾತೆಗಳಿಗೆ ಹಣ ಜಮಾವಾಗಿರುವದಿಲ್ಲ, ಇದು ಕೇವಲ ಘೋಷಣೆಯಾಗಿ ಮಾತ್ರ ಉಳಿದಿದೆ, 15 ದಿನದೊಳಗೆ ರೈತರ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿದರು, 2018-19ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳು ಯಾವುದೂ ಅನುಷ್ಠಾನಗೊಂಡಿಲ್ಲ, ಬಜೆಟ್ನಲ್ಲಿ ಉಲ್ಲೇಕಿಸಿರುವ ಪ್ರಕಾರ ಇಲ್ಲಿಯವರೆಗೂ ಯಾವುದೇ ಇಲಾಖೆಗೆ ಅನುದಾನ ಬಿಡುಗಡೆಯಾಗಿಲ್ಲ ಕೂಡಲೇ ಸಂಬಂಸಿದ ಇಲಾಖೆಗೆ ಅನುದಾನ ಬಿಡುಗಡೆ ಮಾಡಬೇಕು, ಶಾಸಕರ ಪ್ರದೇಶ ಅಭಿವೃದ್ದಿಗಾಗಿ ನೀಡುವ ರು.2ಕೋಟಿ ಅನುದಾನವು ಸಹ ಬಿಡುಗಡೆ ಮಾಡಿರುವದಿಲ್ಲ ಈ ಕೂಡಲೇ ಸಕರ್ಾರ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.      ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಬಾಕಿ ಉಳಿಸಿಕೊಂಡಿರುವ 10 ಸಾವಿರ ಕೋಟಿ ಹಣವನ್ನು ಸಕರ್ಾರ ಬಿಡುಗಡೆ ಮಾಡಬೇಕು ಹಾಗೂ ಕಳೆದ 5 ತಿಂಗಳನಿಂದ ಮಾಸಾಶನ ನೀಡಿರುವದಿಲ್ಲ ಇದನ್ನು ಗಮನಿಸಿದರೆ ಸಕರ್ಾರದ ಖಜಾನೆ ಖಾಲಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ದೂರಿದರು, ಅರ್ಧಕ್ಕೆ ನಿಂತಿರುವ ಸಕರ್ಾರದ ಕಟ್ಟಡಗಳು ಪೂರ್ಣಗೊಳಿಸಲು ಹಾಗೂ ಅಭಿವೃದ್ದಿ ಕೆಲಸಗಳಿಗೆ ಕೂಡಲೇ ಹಣ ಬಿಡುಗಡೆಗೊಳಿಸಬೇಕೆಂದರು.

    ಸಕಾಲಕ್ಕೆ ಮಳೆ ಬಾರದ ಕಾರಣ ಮುಂಗಾರು ಮತ್ತು ಹಿಂಗಾರು ಬೆಳೆಗಳು ಬಾರದೆ ಇರುವದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಕಾರಣ ಹಿಂಗಾರು ಮತ್ತು ಮುಂಗಾರು ಬೆಳೆ ವಿಫಲವಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಘಟಪ್ರಭ ಬಲ ಮತ್ತು ಎಡದಂಡೆ ಕಾಲುವೆಗೆ ಕೂಡಲೇ ನೀರು ಹರಿಸುವಂತೆ ನೀರಾವರಿ ಇಲಾಖೆಯ ಅಕಾರಿಗಳನ್ನು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ತಾವು ಮನವಿ ಮಾಡಿಕೊಳ್ಳುವದಾಗಿ ತಿಳಿಸಿದ ಅವರು ನೀರು ಹರಿಸಲು ಕಾನೂನಾತ್ಮಕ ತೊಡಕುಗಳು ಉಂಟಾದರೆ ರೈತರ ಹಿತ ಕಾಪಾಡುವ ಉದ್ದೇಶದಿಂದ ಸಲಹಾ ಸಮಿತಿಯ ತುತರ್ು ಸಭೆ ಕರೆಯಬೇಕೆಂದು ತಾವು ತಿಳಿಸಿರುವದಾಗಿ ಹೇಳಿದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್.ಪಂಚಗಾವಿ, ತಾಲೂಕಾ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ರನ್ನ ಶುಗರ್ಸ ನಿದರ್ೇಶಕ ಶ್ರೀಕಾಂತ ಗುಜ್ಜನವರ, ನಗರಸಭೆ ಸದಸ್ಯ ಸುನೀಲ ನಿಂಬಾಳಕರ, ಮಾಜಿ ಸದಸ್ಯ ಸೊನಾಪ್ಪಿ ಕುಲಕಣರ್ಿ, ಮಾರುತಿ ಆನಿ, ರುದ್ರಪ್ಪ ಅಡವಿ, ಬಿಜೆಪಿ ಯುವ ಮುಖಂಡರಾದ ಕುಮಾರ ಹುಲಕುಂದ, ಪ್ರದೀಪ ನಿಂಬಾಳಕರ ಪತ್ರಿಕಾಗೋಷ್ಠಿಯಲ್ಲಿದ್ದರು.