4ನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

The strike of village administrative officers entered the 4th day

4ನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ 

ಇಂಡಿ 13 : ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ  ಇಂಡಿ ಹಾಗೂ ಚಡಚಣ ಘಟಕ ವತಿಯಿಂದ  ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೈಗೊಂಡ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದೆ ಹೌದು  ರಾಜ್ಯ ಸರ್ಕಾರ ನಮ್ಮ ನ್ಯಾಯಯುತವಾದ ವಿವಿಧ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಆದ್ದರಿಂದ ನಾವು ನಮ್ಮ ಬೇಡಿಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸುತ್ತಿದ್ದೆವೆ. ಎಂದು ಇಂಡಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ವಾಯ್ ಎಲ್ ಪೂಜಾರಿ ಹೇಳಿದರು. ಚಡಚಣ ತಾಲೂಕು ಗ್ರಾಮ ಆಡಳಿತ ನೌಕರರ ಸಂಘದ ಅಧ್ಯಕ್ಷರಾದ ಎಮ್ ಎಸ್ ಹೊಸೂರು ಅವರು ಮಾತನಾಡಿ ಸರ್ಕಾರ  ನಮ್ಮ ಬೇಡಿಕೆಗಳನ್ನು ಈಡೇರಿಸುವರಿಗೆ ನಾವು ಶಾಂತಿಯುತವಾಗಿ ನಾಯ್ಯಯುತವಾಗಿ ಮುಷ್ಕರ ಮುಂದುವರಿಸುತ್ತಿದ್ದೆವೆ ಎಂದು ಹೇಳಿದರು.ಈ ಮುಷ್ಕರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಉಪಾಧ್ಯಕ್ಷರಾದ ಎಸ್ ಎಸ್ ಲಾಳಸಂಗಿ, ಗ್ರಾಮ ಆಡಳಿತ ಅಧಿಕಾರಿಗಳಾದ ಎಸ್ ಎಸ್ ಮೋದಿ, ಎಮ್ ಆರ್ ರಾಠೋಡ, ಸಿದ್ದು ಪೂಜಾರಿ ವಿ ಎಮ್ ಕೊಳಿ,ಜೆ ಕೆ ಪಾಯಪ್ಪಗೋಳ,ಶಿವಾನಂದ ವಾಲಿಕಾರ,ಜಿ ಎಮ್ ಬಿರಾದಾರ, ಸಿದ್ದು ಪೂಜಾರಿ, ಪ್ರಕಾಶ್ ಚವಡಿಹಾಳ, ಮಹೇಶ್ ರಾಠೋಡ,ಮಸ್ತಾನ ನಧಾಪ್,ವಿದ್ಯಾ ಸರಸಂಬಿ, ಕವಿತಾ ಕರಜಗಿ, ಈರಮ್ಮ ಜೋಗುರ, ಶ್ವೇತಾ ಹಚಡದ, ಭೂಮಿಕಾ ಅವರಾದಿ, ಸೇರಿದಂತೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.