ಮಹಾಕವಿ ರನ್ನ ಚಕ್ರವರ್ತಿ ರನ್ನ ಜಾಗೃತಿ ರಥೋತ್ಸವಕ್ಕೆ ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ ಚಾಲನೆ

Minister in charge of Mahakavi Run Chakraborty Run Awakening Rathotsava RB. Thimmapura drive

ಮಹಾಕವಿ ರನ್ನ ಚಕ್ರವರ್ತಿ ರನ್ನ ಜಾಗೃತಿ ರಥೋತ್ಸವಕ್ಕೆ ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ ಚಾಲನೆ. 

ಮಹಾಲಿಂಗಪುರ  13 : ಗದಾಯುದ್ಧ ಪ್ರಸಂಗದ ಕತೃ ಕವಿ ರನ್ನ ಮಹಾಶಯ ಜಾಗೃತಿ ರಥ ಯಾತ್ರೆಗೆ ಪಟ್ಟಣದ ಬಂದಲಕ್ಷ್ಮಿ ದೇವಸ್ಥಾನದ ಹತ್ತಿರ ಉಸ್ತುವಾರಿ ಸಚಿವರಾದ ಆರ್ ಬಿ. ತಿಮ್ಮಾಪುರ ಚಾಲನೆ ನೀಡಿದರು.ಜಿಲ್ಲಾ ತಾಲೂಕಾಡಳಿತ  ಹಾಗೂ ಸಾವಿರಾರು ರನ್ನ ಅಭಿಮಾನಿಗಳ  ಸಮಕ್ಷಮ ಸ್ಥಳೀಯ ರನ್ನ ಪ್ರತಿಷ್ಠಾನ ಸದಸ್ಯರಾದ ಸಿದ್ಧರಾಮ ಶ್ರೀಗಳು ರನ್ನನ ಬೃಹತ್ ಮೂರ್ತಿಗೆ ಪೂಜೆ ಸಲ್ಲಿಸಿ ರಥ ಯಾತ್ರೆಗೆ ಶುಭ ಹಾರೈಸಿದರು.ಇದೆ ಸಮಯಕ್ಕೆ ಉಸ್ತುವಾರಿ ಸಚಿವರು ರನ್ನ ರಥ ತಂಡದ ಸದಸ್ಯರಿಂದ ರನ್ನನ ಗದೆಯನ್ನು ಹಸ್ತಾಂತರ ಮಾಡಿಕ್ಕೊಂಡು ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ಮೂಲಕ ಭವ್ಯ ರಥೋತ್ಸವಕ್ಕೆ ಚಾಲನೆ ದೊರಕಿತು.ಬಂದಲಕ್ಷ್ಮಿ ದೇವಸ್ಥಾನದಿಂದ ಬೆಳಗಲಿ ಪಟ್ಟಣದ ಹೊರವಲಯ ವರೆಗೂ ಶಾಲಾ, ಕಾಲೇಜು, ಸಂಘ ಸಂಸ್ಥೆಗಳು ಮತ್ತು ಪ್ರಮುಖರು ಸೇರಿ ಸಾಗುವ ಮಾರ್ಗದುದ್ದಕ್ಕೂ ರನ್ನ ರಥಕ್ಕೆ ಭವ್ಯ ಸ್ವಾಗತ ನೀಡಿದರೆ, ಝಾಂಝ ಪಥಕ ತಂಡ ತಾಳ ಮೇಳಗಳೊಂದಿಗೆ ಸಂಗೀತ ಸುಧೆ ಹರಿಸಿತು.ಮಧ್ಯ ಮಧ್ಯೆ ವಿಧ್ಯಾರ್ಥಿಗಳು, ಸಾರ್ವಜನಿಕರು ರನ್ನ ಸಾಹಿತ್ಯ ಪರಾಕ್ರಮದ ಬಗ್ಗೆ ಬಹುಪರಾಕ ಹೇಳಿದರು. 

ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಅಧಿಕಾರಿ ಜಾನಕಿ ಕೆ. ಎಂ, ಎಸಿ ಶ್ವೇತಾ ಬೀಡಿಕರ, ಜಿಪಂ ಮಾಜಿ ಅಧ್ಯಕ್ಷ ಎಸ್ ಎಸ್‌. ಮಲಘಾನ, ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ ಉಪಾಧ್ಯಕ್ಷೆ  ಸಹನಾ ಸಿದ್ದು. ಸಾಂಗ್ಲೀಕರ, ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ಶಿವನಗೌಡ ಪಾಟೀಲ, ಉದಯ ಸಾರವಾಡ, ಸದುಗೌಡ ಪಾಟೀಲ್, ರಾಜು ಭಾಗವಾನ, ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಸಂಗಪ್ಪ ಅಮಾತಿ, ಪ್ರವೀಣ ಪಾಟೀಲ್, ಸದುಗೌಡ ಪಾಟೀಲ್, ಸಿದ್ದು ಧಡೂತಿ, ಶಿವನಗೌಡ ಬಿ.ಪಾಟೀಲ್, ಮುಖ್ಯಾಧಿಕಾರಿ ನಾಮದೇವ ಲಮಾನಿ, ಸಿದ್ದಣ್ಣ ಬಾಡಗಿ, ಸಂಗಣ್ಣ ನೀಲಗುಂದ, ಸಿದ್ದು ಸಾಂಗ್ಲಿಕರ, ಮಲ್ಲು ಕ್ವಾನ್ಯಾಗೋಳ, ಗುರು ಗುಳೇದ, ಪ್ರಮೋದ್ ಹೊಸಪೇಟೆ, ಸ್ವಪ್ನಾ ಅನಿಗೋಳ, ಬಸವರಾಜ ಜಮಖಂಡಿ, ಈರ​‍್ಪ ಕಿತ್ತೂರ, ಲಕ್ಕಪ್ಪ ಮೇಡ್ಯಾಗೋಳ, ಸದಾಶಿವ ಹೊಸಟ್ಟಿ, ಕೆ ಬಿ.ಕುಂಬಾಳೆ, ಕೆ ಎಂ ದಡೂತಿ, ಆನಂದ ಪಾಟೀಲ, ಮಹಾದೇವ ಮುರನಾಳ, ರಥೋತ್ಸವ ತಂಡದ ಆಯ್ ಎಂ ಧಾರವಾಡಮಠ, ಸಿ ಎಂ. ಮಠಪತಿ, ಡಿ ಎಸ್ ಡೋಣಿ, ವಿ ಡಿ. ಬಂಡಿ ಮುಂತಾದವರಿದ್ದರು.