ಅನಿರ್ಧಿಷ್ಟ ಅವಧಿಯವರೆಗೆ ಮುಂದುವರೆದಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

The strike by the village administrative officers continued for an indefinite period

ಅನಿರ್ಧಿಷ್ಟ ಅವಧಿಯವರೆಗೆ  ಮುಂದುವರೆದಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ  

ರಾಣೇಬೆನ್ನೂರ 20:  ವಿವಿಧ ಬೇಡಿಕೆಗಳನ್ನು  ಈಡೇರಿಸಬೇಕು ಎಂದು ಆಗ್ರಹಿಸಿ  ಸ್ಥಳೀಯ ತಹಸೀಲ್ದಾರ ಕಛೇರಿ ಎದುರು ನಡೆಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ, ಸಹಾಯಕರ  ಮುಷ್ಕರ ಬುಧವಾರದಂದು ಅನಿರ್ಧಿಷ್ಟ ಅವಧಿಯವರೆಗೆ ಪ್ರತಿಭಟನೆ ನಡೆಸಿದರು.     ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ   ಮಂಜುನಾಥ ಕೆಂಚರೆಡ್ಡಿ ಮಾತನಾಡಿ ಗ್ರಾಮ  ಆಡಳಿತಾಧಿಕಾರಿಗಳ ಕೆಲಸ ಹೊರೆ ಕಡಿಮೆ ಮಾಡಬೇಕು ಮತ್ತು ಮೂಲಭೂತ ಸೌಲಭ್ಯ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ  ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ತಾಲೂಕಾ ನೌಕರರ ಸಂಘವು ಬೆಂಬಲ ಸೂಚಿಸಿದೆ ಎಂದರು. ಕಳೆದ ಫೆ.10 ರಿಂದ  ಗ್ರಾಮ ಆಡಳಿತ ಅಧಿಕಾರಿಗ ಸಂಘದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಕಂದಾಯ ಇಲಾಖೆ ಅಭಿವೃದ್ಧಿಪಡಿಸಿರುವ ಸುಮಾರು 21 ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದಾರೆ.  ಅದು ಹತ್ತಾರು ಸಮಸ್ಯೆಗಳನ್ನು ಸೃಷ್ಟಿಸಿದೆ. ಆದರೆ ಇದಕ್ಕೆ ಅಗತ್ಯವಿರುವ ಕಂಪ್ಯೂಟರ್, ಲ್ಯಾಪ್‌ಟಾಪ್, ಇಂಟರ್‌ನೆಟ್ ಹಾಗೂ ಸ್ಕ್ಯಾನರ್ ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಆದರೆ ಇದಕ್ಕೆ ಅಗತ್ಯವಿರುವ ಕಂಪ್ಯೂಟರ್, ಲ್ಯಾಪ್‌ಟಾಪ್, ಇಂಟರ್‌ನೆಟ್ ಹಾಗೂ ಸ್ಕ್ಯಾನರ್ ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಒಬ್ಬ ಹಾಗೂ ರಾಜ್ಯಾದ್ಯಂತ 50ಕ್ಕೂ ಅಧಿಕ ಗ್ರಾಮ ಆಡಳಿತಅಧಿಕಾರಿಗಳು ವಿವಿಧ ಆರೋಗ್ಯ ಸಮಸ್ಯೆಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಳಲು ತೋಡಿಕೊಂಡರು.   ಮೊಬೈಲ್ ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಆಧಾರೀ​‍್ಸಡಿಂಗ್, ಬಗರ್‌ಹುಕುಲ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಹೀಗೆ ಹತ್ತಾರು ಆ್ಯಪ್‌ಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡಬೇಕಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಅವರುಗಳು ಹೋರಾಟಕ್ಕೆ ಮುಂದಾಗಿದ್ದಾರೆ ಎಂದರು. ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಲ್ಯಾಪ್‌ಟಾಪ್, ಪ್ರಿಂಟರ್‌ಮತ್ತು ಸ್ಕ್ಯಾನರ್ ನೀಡಬೇಕು. ಪದೋನ್ನತಿಯ ವಿಚಾರದಲ್ಲೂ ವಂಚಿತರಾಗಿದ್ದು, ರಾಜ್ಯದ 1196 ಗ್ರೇಡ್‌-1 ಗ್ರಾಪಂ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್‌-1 ಗ್ರಾಮ ಅಧಿಕಾರಿ ಆಡಳಿತ ಹುದ್ದೆಯನ್ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಪ್ರತಿಭಟನೆ ಮುಂದುವರಿಸಲಾಗುವುದು ಎಂದರು. ತಾಲೂಕ ಅಧ್ಯಕ್ಷ ಬಸವಂತಕುಮಾರ, ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಬಸವಂತಕುಮಾರ ಕೆ, ಉಪಾಧ್ಯಕ್ಷ ಸಂಜೀವರೆಡ್ಡಿ ಭತ್ತೆರ, ಪ್ರಧಾನ ಕಾರ್ಯದರ್ಶಿ ಕೋಟ್ರೇಶ ಎ.ಎಮ್‌., ಖಜಾಂಚಿ ಬಸವರಾಜ ಎಡಿಕಾಲು, ಹಿರಿಯ ಗ್ರಾಮಧಿಕಾರಿ ಮಂಜುನಾಥ ಎಮ್‌.ಎನ್‌., ಗುರು ಲಮಾಣಿ, ಇಮಿಮ್ ಜಾಫರ್ ತಹಶೀಲ್ದಾರ, ಹನುಮಂತ ಯು, ಗೀರೀಶ ಪಾಟೀಲ, ದೀಪಾ ಎಮ್‌.ಎಸ್, ಪುಷ್ಪಾ ತೆಲಗಡೆ, ತರನಮ್ ಆರ್‌.ಜೆ, ವಿನೂತ ಪಿ.ಎಸ್, ವಿಶಾಲ ಚಕ್ರಸಾಲಿ, ಭಾವನಾ, ಕವಿತಾ ಎಚ್, ರೇಖಾ ಎಮ್‌.ಎಸ್, ಐಶ್ವರ್ಯ, ಚೇತನಾಕುಮಾರಿ, ಪ್ರಭಾಕರ ಎಮ್‌., ಪ್ರಕಾಶ ಲಮಾಣಿ, ಸುರೇಶ ಎಸ್‌.ಬಿ, ಕಿರಣ ಕುರುವತ್ತಿ, ಮಂಜುನಾಥ ಜಲ್ಲೇರ, ವೆಂಕಟೇಶ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರ ಸಂಘದವರು ಇದ್ದರು.