ಕುರುಬ ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಲುಮತ ಮಹಾಸಭಾದಿಂದ ಮನವಿ

ಲೋಕದರ್ಶನ ವರದಿ

ಗದಗ 02:  ಕುರುಬ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಹಾಗೂ ಪೌರಾಯುಕ್ತರಿಗೆ ಹಾಲುಮತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಿ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ಕುರುಬ ಸಮಾಜದ ಅಭಿವೃದ್ದಿಗಾಗಿ ಹಾಗೂ  ಹಿಂದುಳಿದ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಹೋರಾಟ ಮಾಡುತ್ತ ಬಂದಿದ್ದು ಅದರಂತೆ  ರಹೆಮತನಗರ ಹತ್ತಿರವಿರುವ ಕುರುಬ ಸಮಾಜದ ಸ್ಮಶಾನವನ್ನು ಈವರೆಗೂ ಅಭಿವೃದ್ದಿ ಮಾಡಲಾಗಿಲ್ಲ ಹಲವಾರು ದಶಕಗಳಿಂದ ಈ ಸ್ಮಶಾನದಲ್ಲಿ ಸಮಾಜದ ವತಿಯಿಂದ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಹಾಗೂ ಈ ಸ್ಮಶಾನ ಈಗ ಮುಳ್ಳುಕಂಠಿಗಳಿಂದ ತುಂಬಿರುವದರಿಂದ ಅಂತ್ಯಸಂಸ್ಕಾರ ಮಾಡಲು ತುಂಬಾ ತೊಂದರೆ ಆಗಿರುವದರಿಂದ ಅದನ್ನು ಅಭಿವೃದ್ದಿಗೊಳಿಸಬೇಕು. 

ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿರುವ ದೇಶಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ವೃತ್ತವನ್ನು ಅಭಿವೃದ್ದಿಗೊಳಿಸಬೇಕು ಹಾಗೂ  ಮೂತರ್ಿಗೆ ಮಾಲೆ ಹಾಕಲು ಸ್ಟೇರ್ಕೇಸ್ ನಿಮರ್ಿಸಬೇಕು. ಮುಳಗುಂದ ನಾಕಾದಿಂದ ಕನಕಭವನದ ವರೆಗೆ ಈಗಾಗಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆ ಎಂದು ನಗರಸಭೆಯಿಂದ ಠರಾವು ಪಾಸ್ ಮಾಡಲಾಗಿದ್ದು ಅದರಂತೆ ಆ ರಸ್ತೆಗೆ ನಾಮಕರಣ ಮಾಡಬೇಕು.  ನಗರದ ಡಿಜಿಎಂ ಆಸ್ಪತ್ರೆಯ ಹಿಂದುಗಡೆ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉದ್ಯಾನವನ ಅಭಿವೃದ್ದಿಗೊಳಿಸಬೇಕು ಹಾಗೂ ಇತ್ತೀಚಿಗೆ ದೇಶಸೇವೆ ಸಲ್ಲಿಸುವಾಗ ನಿಧನರಾದ ಕುಮಾರಸ್ವಾಮಿ  ನಾಗರಾಳ ಅವರ ಸೇವೆಯನ್ನು ಪ್ರೇರೇಪಿಸಲು ನಗರದಲ್ಲಿನ ಒಂದು ರಸ್ತೆಗೆ ನಾಮಕರಣ ಮಾಡಬೇಕು ಎಂದು ಮನವಿ ಮೂಳಕ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಡಿ.ಎಲ್.ಗುರಿಕಾರ, ಕಾರ್ಯದಶರ್ಿ ಸೋಮನಗೌಡ್ರ ಪಾಟೀಲ, ಮಲ್ಲೇಶಪ್ಪ ಕೊಣ್ಣೂರ, ಉಮೇಶ ಪೂಜಾರ, ಮಾಗೂಂಡಪ್ಪ ಕಳಗಣ್ಣವರ, ಕುಮಾರ ಮಾರನಬಸರಿ, ಬಸವರಾಜ ಅಣ್ಣಿಗೇರಿ, ತಾಲ್ಲೂಕ ಅಧ್ಯಕ್ಷ ಮಹೇಶ ಕೆರಕಲಮಟ್ಟಿ,  ಯಲ್ಲಪ್ಪ ಜಡಿ, ಸುರೇಶ ಗುಲಗಂಜಿ, ಮುತ್ತು ಜಡಿ, ರಂಗಪ್ಪ ದ್ಯಾವಣಸಿ, ಸೋಮು ಮೇಟಿ, ಬಸವರಾಜ ಕೊರ್ಲಹಳ್ಳಿ, ಸುಭಾಸ ದಳವಾಯಿ, ನಾಗರಾಜ ಕಂಬಳಿ,  ಆನಂದ ಹಂಡಿ,  ಹನಮಂತಪ್ಪ ಕೋಟೆಕಲ್, ಯಲ್ಲಪ್ಪ ಗೋಂದಿ, ಸುನೀಲ ಜಡಿ, ಮಂಜುನಾಥ ಪೂಜಾರ, ಮಲ್ಲೇಶ ಬಿಂಗಿ, ತಿಪ್ಪಣ್ಣ ಕಳಸಣ್ಣವರ, ಸಚಿನ ಮೆಣಸಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.