ಯರಗಟ್ಟಿ ತಾಲೂಕಾ ಹೋರಾಟ ಎರಡನೆ ದಿನಕ್ಕೆ

ಯರಗಟ್ಟಿ ತಾಲೂಕಾ ಘೋಷಣೆಗೆ ಆಗ್ರಹಿಸಿ ಎರಡನೇ ದಿನದ ಪ್ರತಿಭಟನೆಯ ವೇದಿಕೆಯಲ್ಲಿ ಮಾತನಾಡುತ್ತಿರುವ ರಾಜ್ಯ ರೈತ ಸಂಘ ರಾಜ್ಯ

ಯರಗಟ್ಟಿ 08: ಸವದತ್ತಿ ತಾಲೂಕಿನಲ್ಲಿಯೇ ಮಲಪ್ರಭಾ ನದಿ ಇದ್ದರೂ ಯರಗಟ್ಟಿ ಭಾಗದ ಹಳ್ಳಿಗಳ ರೈತರಿಗೆ ನೀರಾವರಿ ಭಾಗ್ಯ ಇಲ್ಲ. ಇದಕ್ಕೆ ಚುಣಾಯಿತ ಪ್ರತಿನಿಧಿಗಳ ನಿಷ್ಕಾಳಜಿತನ ಕಾರಣ ಎಂದು ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಶಿವನಗೌಡ ಪಾಟೀಲ ಆರೋಪಿಸಿದರು.

ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಯರಗಟ್ಟಿ ತಾಲೂಕಾ ಘೋಷಣೆಗೆ ಆಗ್ರಹಿಸಿ ನಡೆದ ಎರಡನೇ ದಿನದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಜ್ಯ ರೈತ ಸೇನೆ ಜಿಲ್ಲಾಧ್ಯಕ್ಷ ಸೋಮು ರೈನಾಪೂರ ಮಾತನಾಡಿ ಆಡಳಿತ ಸುಗಮಗೊಳಿಸಲು ಜನರಿಗೆ ಅನುಕೂಲ ಆಗುವ ದೃಷ್ಠಿಯಿಂದ ವಾಸುದೇವನ್, ಹುಂಡೆಕಾರ, ಗದ್ದಿಗೌಡರ ಸಮೀತಿಗಳು ಯರಗಟ್ಟಿ ತಾಲೂಕಾಗಲು ಯೋಗ್ಯ ಸ್ಥಳವೆಂದು ವರದಿ ನೀಡಿದ್ದರೂ ಹಲವಾರು ವರ್ಷಗಳಿಂದ ತಾಲೂಕಾ ಕೇಂದ್ರಕ್ಕಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಇಲ್ಲಿಯವರೆಗೆ ಯಾವದೇ ಸಕರ್ಾರ ತಾಲೂಕಾ ಕೇಂದ್ರ ಘೋಷಣೆ ಮಾಡಲು ವಿಫಲವಾಗಿವೆ. ಬೆಳಗಾವಿಯಲ್ಲಿ ಡಿ.10ರಿಂದ ನಡೆಯಲಿರುವ ಅಧಿವೇಶನದಲ್ಲಿ ತಾಲೂಕಾ ಕೇಂದ್ರ ಘೋಷಣೆ ಮಾಡಬೇಕು ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿದರು.

ಸಿದ್ದಪ್ಪ ಅಡಕಲಗುಂಡಿ ಹಾಗೂ ಸಂಗಡಿಗರಿಂದ ಡೊಳ್ಳಿನ ಪದಗಳನ್ನು ಹಾಡುವುದರ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು. 

ಕರವೇ ತಾಲೂಕಾ ಯುವ ಘಟಕಾಧ್ಯಕ್ಷ ರಫೀಕ್.ಡಿ.ಕೆ, ರೈತ ಸೇನೆ ಸ್ಥಳೀಯ ಘಟಕಾಧ್ಯಕ್ಷ ಶಮೀರ ಜಮಾದಾರ, ರೈತ ಮುಖಂಡರಾದ ಮಾರುತಿ ಕರಶೆಟ್ಟಿ, ಗಿರೇಪ್ಪ ಹಂಜಿ, ವೆಂಕಣ್ಣ ಹುರುಕನವರ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ಓ.ಬಿ.ತಂಬಾಕೆ, ಶಿವಾನಂದ ಕರಿಗೊಣ್ಣವರ, ನಿಂಗಪ್ಪ ಪಾಟೀಲ, ಸಿದ್ರಾಯಿ ಚುಂಚನೂರ, ಅಡಿವೆಪ್ಪ ಜಕಾತಿ, ರಮೇಶ ಮುದ್ದನ್ನವರ, ಮಾಯಪ್ಪ ವಡೆಕ್ಕನವರ, ಕೆಂಚಪ್ಪ ದ್ಯಾಮನಗೌಡರ ಮುಂತಾದವರಿದ್ದರು.