ಲೋಕದರ್ಶನ ವರದಿ
ಬೆಳಗಾವಿ,12 : ಕೆ.ಎಲ್.ಇ. ಸೊಸೈಟಿಯ ಬಿ.ವಿ. ಬೆಲ್ಲಾಡ್ ಲಾ ಕಾಲೇಜ್, ಬೆಳಗಾವಿ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ (ಎಫ್ಐಎನ್ಎಸ್) ದ ಸಹಯೋಗದೊಂದಿಗೆ "ರಾಷ್ಟ್ರೀಯ ಭದ್ರತೆಗೆ ಸವಾಲುಗಳು ಮತ್ತು ಯುವ ಪಾತ್ರ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಡಾ. ಬಿ.ಜಯಸಿಂಹ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ರಾಜ್ಯದ ಒಳಗೆ ಧಾಮರ್ಿಕ, ಕೋಮು, ಸಾಮಾಜಿಕ ಮತ್ತು ರಾಜಕೀಯ ಅಡಚಣೆ ತೊಂದರೆಗಳಿಂದಾಗಿ ನಮ್ಮ ಯುವ ಸಮುದಾಯದಲ್ಲಿ ಸಮಾಜಘಾತುಕ ಕೆಲಸಕ್ಕೆ ಇಳಿಯುತ್ತಿದ್ದಾರೆ. ನಮ್ಮ ರಾಷ್ಟ್ರದ ಒಟ್ಟಾರೆ ಪ್ರಗತಿ ಸಮಾಜದೊಳಗಿನ ಆಂತರಿಕ ಶಾಂತಿ ಮತ್ತು ಸ್ಥಿರತೆಯ ಮೇಲೆ ಅವಲಂಬಿತವಾಗಿದೆ. ರಾಷ್ಟ್ರದಲ್ಲಿ ಶಾಂತಿ ಸುವ್ಯವಸ್ಥೆಗೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಕೋಲ್ ರಾಮಕೃಷ್ಣ ಜಾಧವ್ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುವಾಗ ನಮ್ಮ ದೇಶ ವಿವಿಧ ಬಾಹ್ಯ ಮತ್ತು ಆಂತರಿಕ ಭದ್ರತೆಯ ಸಮಸ್ಯೆಯನ್ನು ಎದುರಿಸುತ್ತಿದೆ ಇಂತಹ ಸಮಸ್ಯಾಪರಿಹಾರಕ್ಕೆ ಸಕರ್ಾರ ಮತ್ತು ಯುವ ನಾಗರಿಕರ ಪಾತ್ರವು ಬಹು ಮುಖ್ಯವಾಗಿದೆ ಎಂದರು.
ಮೇಜರ್ ಜನರಲ್ ಕೆ.ಎನ್. ಮಿಜರ್ಿ ಮಾತನಾಡಿ ಭಯೋತ್ಪಾದನೆಯಂತಹ ರಾಷ್ಟ್ರದ್ರೋಹಿ ಕೆಲಸಗಳಿಗೆ ನೆರೆಯ ದೇಶಗಳು ನಮ್ಮ ಯುವಕರ ಮನೋಬಲವನ್ನು ಬದಲಾಯಿಸಿ ಅವರನ್ನು ದೇಶದ್ರೋಹ ಕೆಲಸಗಳಿಗೆ ಉಪಯೋಗಿಸುತ್ತಿದ್ದಾರೆ. ಯುವಕರು ಇಂತಹ ಕಾರ್ಯಗಳಿಗೆ ಮುಂದಾಗಬಾರದು, ಯುವ ಜನಾಂಗವು ನಮ್ಮ ಸಂವಿಧಾನವನ್ನು ಎತ್ತಿಹಿಡಿಯಲು ಮೂಲಭೂತ ಕರ್ತವ್ಯಗಳಿಂದ ಅನುಸರಿಸಲು ವಿದ್ಯಾಥರ್ಿಗಳಿಗೆ ಕರೆಕೊಟ್ಟರು.
ಕಿಶೋರ್ ಕಾಕೇಡ್, ಡಾ. ವಿಜಯ್ ಮುರದಾಂಡೆ, ಸೇರಿದಂತೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೂಣರ್ಿಮಾ ಕಾಜಗರ್ ನಿರೂಪಿಸಿದರು ಸುಪ್ರಿಯಾ ಸ್ವಾಮಿ ವಂದಿಸಿದರು.