ಆರೋಗ್ಯ ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಓಷಧಿಗಳ ಪಾತ್ರ ಅಮೂಲ್ಯ: ಡಾ. ಹರ್ಷ ಹೆಗ್ಡೆ
ಬೆಳಗಾವಿ 05: ವಿವಿಧ ಆರೋಗ್ಯ ಸ್ಥಿತಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸಾಂಪ್ರದಾಯಿಕ ಓಷಧಿಗಳ ಪಾತ್ರ ಅಮೂಲ್ಯ ಎಂದು ಬೆಳಗಾವಿ ಎಫ್, ಐಸಿಎಂಆರ್ - ಎನ್‌ಐಟಿಎಂ ವಿಜ್ಞಾನಿ ಡಾ. ಹರ್ಷ ಹೆಗ್ಡೆ ಹೇಳಿದರು.
ಫೈಟೊಕೆಮಿಸ್ಟ್ರಿ ಮತ್ತು ಗಿಡಮೂಲಿಕೆ ಓಷಧ ಅಭಿವೃದ್ಧಿಯಲ್ಲಿ ಹೊಸ ವಿಧಾನಗಳು ಕುರಿತು ಬೆಳಗಾವಿಯ ಕೆಎಲ್‌ಇ ಫಾರ್ಮಸಿ ಕಾಲೇಜಿನ ಫಾರ್ಮಕೊಗ್ನೋಸಿ ವಿಭಾಗವು ಏಪ್ರಿಲ್ 5ರಂದು ಆಯೋಜಿಸಿದ್ದ ಕಾರ್ಯಾಗಾರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಿಡಮೂಲಿಕೆ ಓಷಧಿಗಳ ಶ್ರೀಮಂತ ಪರಂಪರೆ ಮತ್ತು ಅವುಗಳನ್ನು ತಲೆಮಾರುಗಳಿಂದ ಹೇಗೆ ಬಳಸಲಾಗುತ್ತಿದೆ ಮತ್ತು ಆಧುನಿಕ ವೈದ್ಯಕೀಯ ಬಳಕೆಗೆ ಗಿಡಮೂಲಿಕೆಗಳ ಸೂತ್ರೀಕರಣಗಳು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಎಂದು ಖಚಿತಪಡಿಸಿಕೊಳ್ಳಲು ಅವುಗಳ ವೈಜ್ಞಾನಿಕ ದೃಢೀಕರಣದ ಮಹತ್ವವನ್ನು ಒತ್ತಿ ಹೇಳಿದ ಅವರು ಉತ್ತಮ ಆರೋಗ್ಯ ಪರಿಹಾರಗಳಿಗಾಗಿ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನವನ್ನು ಒಟ್ಟಿಗೆ ತರಲು ಹೆಚ್ಚಿನ ಸಂಶೋಧನೆ ಮತ್ತು ಸಹಯೋಗವನ್ನು ಡಾ. ಹರ್ಷ ಹೆಗ್ಡೆ ಪ್ರೋತ್ಸಾಹಿಸಿದರು.
ಸಸ್ಯ ರಸಾಯನಶಾಸ್ತ್ರದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಯ ಮಹತ್ವವನ್ನು ಪ್ರಾಂಶುಪಾಲ ಡಾ. ಸುನಿಲ್ ಎಸ್. ಜಲಾಲ್‌ಪುರೆ ಅವರು ವಿವರಿಸಿದರು. ಸಸ್ಯ ಆಧಾರಿತ ಸಂಯುಕ್ತಗಳನ್ನು ಅನ್ವೇಷಿಸಲು ಸುಧಾರಿತ ತಂತ್ರಗಳನ್ನು ಬಳಸುವ ಬಗ್ಗೆ ಹಾಗೂ ಈ ಕ್ಷೇತ್ರದಲ್ಲಿನ ಅವಕಾಶಗಳು ಮತ್ತು ಸವಾಲುಗಳೆರಡರ ಕುರಿತು, ಓಷಧ ಅನ್ವೇಷಣೆಯಲ್ಲಿ ಕೃತಕ ಬುದ್ಧಿಮತ್ತೆ (ಂಋ) ಮತ್ತು ಯಂತ್ರ ಕಲಿಕೆಯ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಅವರು ವಿವರವಾಗಿ ಮಾಹಿತಿ ನೀಡಿದರು. ಹೊಸ ಓಷಧಿಗಳ ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಅಭಿವೃದ್ಧಿಗಾಗಿ ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಸಂಶೋಧಕರನ್ನು ಪ್ರೋತ್ಸಾಹಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಆದಿತ್ಯ ಅರವಿಂದಕರ್ ಅವರು ಗಿಡಮೂಲಿಕೆ ಓಷಧ ಅಭಿವೃದ್ಧಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅವರ ಅಧಿವೇಶನವು ಭಾಗವಹಿಸಿದವರಿಗೆ ಗಿಡಮೂಲಿಕೆ ರಸಾಯನಶಾಸ್ತ್ರ ಮತ್ತು ಭವಿಷ್ಯದಲ್ಲಿ ಅದರ ಪಾತ್ರದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ನೀಡುವ ಗುರಿಯನ್ನು ಹೊಂದಿದೆ.
ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಹುಬ್ಬಳ್ಳಿ, ಧಾರವಾಡ ಮತ್ತು ಮಹಾರಾಷ್ಟ್ರದ ಗಡಿಂಗ್ಲಾಜ್, ಕೊಲ್ಲಾಪುರ, ಸಾಂಗಲಿಯ ವಿವಿಧ ಓಷಧ ಮತ್ತು ಆಯುರ್ವೇದ ಸಂಸ್ಥೆಗಳಿಂದ ಸುಮಾರು 50 ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಡೀನ್ ಡಾ. ವಿ. ಎಸ್. ಮಾಸ್ತಿಹೊಳಿಮಠ; ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಡಾ. ಎಂ. ಬಿ. ಪಾಟೀಲ್ ಸ್ವಾಗತಿಸಿದರು. ಸಂಯೋಜಕ ಡಾ. ಸತೀಶ್ ಎ. ಕವಟಗಿಮಠ್ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಅಕ್ಷಯ್ ಪಾಟೀಲ್ ವಂದನಾರೆ್ಣಗೈದರು.