ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ: ಮೋಹನ್ ಕಾಮತ

ಲೋಕದರ್ಶನ ವರದಿ

ಬೆಳಗಾವಿ 16: ಸಂಗೀತ ಜೀವನದಲ್ಲಿ ಶಾಂತಿ ನೆಮ್ಮದಿ ಮತ್ತು ಸಂತೋಷ ತಂದು ಕೊಡುವಂತಹ ಒಂದು ಸಾಧನ ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಿಮ್ಮ ಜೀವನ ಸುಖಕರವಾಗಿರುತ್ತದೆ ಎಂದು  ಅಧ್ಯಕ್ಷರಾದ ಮೋಹನ್ ಕಾಮತ  ಹೇಳಿದರು.

ಇಲ್ಲಿನ ಶಹಾಪುರ ಗುರು ಮಾವುಲಿ ಸಭಾಂಗಣದಲ್ಲಿ ದಿ.14 ರಂದು ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡಮೆಯಿಂದ ದೊನ ದಿವಸಾಚೆ ಸಂಗೀತ ಕಮ್ಮಟ ಹಾಗೂ ಅನಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತ ನಮ್ಮ ಸಂಸ್ಕೃತಿ ಅದನ್ನು ಬೆಳೆಸುವ ಜವಾಬ್ದಾರಿ ನಮ್ಮ ಪಾಲಕರ ಮೇಲಿದೆ ಎಂದು ಹೇಳಿದರು. ರಾಧಾಬಾಯಿ ವೆಣರ್ೇಕರ್ ಸ್ಥಾಪಕ ನಿದರ್ೇಶಕರು ದೈವಜ್ಞ ಮಹಿಳಾ ಸೊಸೈಟಿ ಇವರು ಮಾಡಿದರು.

ವಿದೂಷಿ ನಿರ್ಮಲಾ ಪ್ರಕಾಶ್ ಮಾತನಾಡಿ, ಪ್ರಮೋದ್ ಶೇಟ್ ಅವರು ಕನ್ನಡದ ಮಕ್ಕಳಿಂದ ಕೊಂಕಣಿ ಹಾಡು ಹಾಡಿಸುವ ಧೈರ್ಯವನ್ನು ಮಾಡಿದ್ದು ಬೆಳಗಾವಿಯಲ್ಲಿ ಪ್ರಥಮವಾಗಿದೆ ಎಂದರು. ಮತ್ತೋರ್ವ ಅತಿಥಿ ಯಾದ ಸುರೇಂದ್ರ ಪಾಲಂಕರ್ ಅವರು ಮಾತನಾಡಿ ಬೆಳಗಾವಿಯಲ್ಲಿ ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಇನ್ನೂ ಹಲವಾರು ಕಾರ್ಯಕ್ರಮಗಳು ಜರುಗಲಿವೆ ಎಂದರು ಕಾರ್ಯಕ್ರಮದಲ್ಲಿ ಕೊಂಕಣಿ ಹಾಡನ್ನು  ಡಾಕ್ಟರ್  ಸ್ವಪ್ನ ಕುಲಕಣರ್ಿ ಜಂಲಕ್ಷ್ಮೀ ಭಜಂತ್ರಿ. ರಾಜೇಶ್ವರಿ ಬಸರಿಮರ.  ಭವ್ಯ  ಶೇಟ್ ಗೀತಾ ಸುಭಾನೇ.  ಕವಿತಾ ಬಡಿಗೇರ್.   ಪದ್ಮಾ  ಪೈ.    ಸಮೀಧಾ   ಪೈ.  ಪೂವರ್ಿ ರಾಜಪುರೋಹಿತ್. ಸೃಷ್ಟಿ ಸೊಲ್ಲಾಪುರ. ಸುಷ್ಮಾ ಕೃಷ್ಣಮೂತರ್ಿ ಶರಣ್ಯ ಬಸರಿ ಮರ  ಸಂಜನಾ ಉಮ್ರಾನೀ.  ಶ್ರೀಲೇಖ ಹೊನವಾಡ.  ಶ್ರೀವತ್ಸಾ  ಹೊನವಾಡ.  ಶ್ರೀನಿಧಿ ಪುಂಡೆ ವಿಜಯಲಕ್ಷ್ಮಿ ಪಾಟೀಲ್. ಮುಗ್ಧ ಜೋಶಿ ಶ್ರೇಯಾ ದೇಶಪಾಂಡೆ, ಅದ್ವಿಕ ಯಂಡಿಗೇರಿ, ಮುಗಧಾ  ಜೋಷಿ, ಶಾಂತೇಶ್ ಶೇಟ್ ಸ್ವಾಗತಿಸಿದರು. ಅಕಾಡಮೆ ಸದಸ್ಯರಾದ ಪ್ರಮೋದ್  ಶೇಟ್ ವಂದಿಸಿದರು.