ಲೋಕದರ್ಶನ ವರದಿ
ಬ್ಯಾಡಗಿ 18: ವಿಶ್ವ ಪ್ರಸಿದ್ಧ ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಗೆ ವಿವಿಧ ಜಿಲ್ಲೆಗಳಿಂದ ಒಣ ಮೆಣಸಿನಕಾಯಿ ತೊಟ್ಟು ಬಿಡಿಸಲು ಬಡ ಮಹಿಳಾ ಕಾಮರ್ಿಕರು ದಿನ ನಿತ್ಯ ಆಗಮಿಸುತ್ತಿದ್ದು ಅವರಿಗೆ ವಿಮಾ ಸೌಲಭ್ಯ ಒದಗಿಸಲು ನಿರಾಕರಿಸುತ್ತಿರುವ ಎಪಿಎಂಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳುವಂತೆ ಎಪಿಎಂಸಿ ಸದಸ್ಯೆ ವನಿತಾ ಗುತ್ತಲ ಸರಕಾರವನ್ನು ಆಗ್ರಹಿಸಿದರು.
ಅವರು ಶನಿವಾರ ಎಪಿಎಂಸಿಯ ಕಾಯರ್ಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದಿನ ನಿತ್ಯ ಸಾವಿರಾರು ಮಹಿಳೆಯರು ತಮ್ಮ ಗ್ರಾಮಗಳಿಂದ ನೂರಾರು ವಾಹನಗಳಲ್ಲಿ ಮಾರುಕಟ್ಟೆಗೆ ಮೆಣಸಿನಕಾಯಿ ತೊಟ್ಟು ಬಿಡಿಸಲು ಬರುತ್ತಿದ್ದಾರೆ. ಇವರುಗಳಿಗೆ ಎಪಿಎಂಸಿಯಿಂದಾಗಲಿ ಇಲ್ಲವೇ ವರ್ತಕರ ಸಂಘದಿಂದಾಗಲಿ ಯಾವುದೇ ಭದ್ರತೆಯನ್ನು ಕೊಡುತ್ತಿಲ್ಲ. ಹಾಗೂ ಇವರುಗಳಿಗೆ ಯಾವುದೇ ವರ್ತಕರಿಂದ ಅನ್ಯಾಯವಾದಾಗ ಕೇಳಲು ಯಾವುದೇ ಸಂಘಟನೆಯೂ ಕೂಡಾ ಇವರಿಗೆ ಇಲ್ಲದಾಗಿದೆ. ಮಾರುಕಟ್ಟೆಗೆ ಒಣ ಮೆಣಸಿನ ಕಾಯಿ ತೊಟ್ಟು ಬಿಡಿಸಲು ತಮ್ಮ ಗ್ರಾಮದಿಂದ ಬರುವ ಸಂದರ್ಭದಲ್ಲಿ ಅನೇಕ ವಾಹನಗಳು ಅಪಘಾತಗೊಂಡು ಕೆಲವೊಬ್ಬರೂ ಸಾವುಗಳನ್ನು ಕಂಡರೇ ಇನ್ನೂ ಅನೇಕರು ಮೈಕೈಗೆ, ಸೊಂಟಕ್ಕೆ, ಭುಜಕ್ಕೆ, ತಲೆಗೆ ಎದೆಗೆ, ತರುಚಿತ ಹಾಗೂ ಒಳಪೆಟ್ಟು ಬಿದ್ದು ಅಂಗವಿಕಲರಾದಂತಹ ಉದಾಹರಣೆಗಳನ್ನು ಕಾಣಬಹುದಾಗಿದೆ ಎಂದರು.
ನ.16 ರಂದು ಮುಂಜಾನೆ ಬುಡಪನಹಳ್ಳಿ ಗ್ರಾಮದಿಂದ ಎಪಿಎಂಸಿ ಮಾರುಕಟ್ಟೆಗೆ ಮೆಣಸಿನ ಕಾಯಿ ತೊಟ್ಟು ಬಿಡಿಸಲು ಪ್ಯಾಸೆಂಜರ್ ವಾಹನದಲ್ಲಿ ಆಗಮಿಸುತ್ತಿದ್ದ, ಸಂದರ್ಭದಲ್ಲಿ ವಾಹನವು ಅಫಘಾತವಾಗಿದ್ದು ಅದರಲ್ಲಿರುವ ಅನೇಕ ಮಹಿಳೆಯರಿಗೆ ತೀವ್ರವಾದ ಗಾಯಗಳಾಗಿವೆ. ಬ್ಯಾಡಗಿ ಹಾಗೂ ಹಾವೇರಿಯ ಆಸ್ಪತ್ರೆಗಳಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಮಾಳಮ್ಮ ಕೊಂ.ಪರಸಪ್ಪ ಪೂಜಾರ ಎಂಬ ಮಹಿಳೆಯು ಸಾವನ್ನಪ್ಪಿದ್ದಾಳೆಂದು ದೂರಿದರು.
ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕಾದ ಎಪಿಎಂಸಿಯ ಕಾರ್ಯದಶರ್ಿಗಳು ಹಾಗೂ ವರ್ತಕರ ಸಂಘದವರು ಏನೇನೂ ಸಬೂಬುಗಳನ್ನು ಹೇಳುತ್ತಾ ಬಡ ಕೂಲಿ ಕಾಮರ್ಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪಿಸಿದರಲ್ಲದೇ ಎಪಿಎಂಸಿ ಸಿಬ್ಬಂದಿ ವರ್ಗವು ಇದೇ ಪೃವೃತ್ತಿಯನ್ನು ಮುಂದುವರಿಸಿಕೊಂಡು ಹೋದಲ್ಲಿ ಎಪಿಎಂಸಿಯ ಮಾರುಕಟ್ಟೆಗೆ ಆಗಮಿಸುತ್ತಲಿರುವ ಸಾವಿರಾರು ಮಹಿಳಾ ಕೂಲಿಕಾಮರ್ಿಕರಿಗೆ ಸಾಕಷ್ಟು ಅನ್ಯಾಯವಾಗಲಿದೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಈ ಹಿಂದೆ ದಿನಾಂಕ 18ರಂದು ಈ ವಿಷಯವಾಗಿ ಸ್ಥಳೀಯ ಎಪಿಎಂಸಿ ಸರ್ವ ಸದಸ್ಯರ ಸಭೆಯಲ್ಲಿ ಮಾರುಕಟ್ಟೆಗೆ ಒಣ ಮೆಣಸಿನಕಾಯಿ ತೊಟ್ಟು ಬಿಡಿಸಲು ಬರುವ ಮಹಿಳಾ ಕಾಮರ್ಿಕರಿಗೆ ಮಾನವೀಯ ದೃಷ್ಟಿಯಿಂದ ಸಾಮೂಹಿಕ ವಿಮಾ ಮಾಡಿಸಲು ಸಭೆಯಲ್ಲಿ ಠರಾವನ್ನು ಮಾಡಲಾಗಿದೆ. ಆದರೆ ಠರಾವು ಮಾಡಿ ಕೆಲವಾರು ತಿಂಗಳು ಕಳೆದರೂ ಮಹಿಳಾ ಕಾಮರ್ಿಕರಿಗೆ ಸಾಮೂಹಿಕ ವಿಮಾ ಮಾಡಿಸುವಲ್ಲಿ ಎಪಿಎಂಸಿ ಕಾರ್ಯದಶರ್ಿಗಳು ಹಾಗೂ ವರ್ತಕರ ಸಂಘದವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರತಿ ನಿತ್ಯ ಅನೇಕ ಮಹಿಳಾ ಕೂಲಿ ಕಾಮರ್ಿಕರು ನೂರಾರು ನೋವುಗಳಿಗೆ ತುತ್ತಾಗುತ್ತಲಿದ್ದಾರೆಂದು ತಮ್ಮ ನೋವನ್ನು ತೋಡಿಕೊಂಡರು.
ಈ ಕೂಡಲೇ ಎಪಿಎಂಸಿ ಕಾರ್ಯದಶರ್ಿಗಳು ಹಾಗೂ ವರ್ತಕರ ಸಂಘದವರು ಮೆಣಸಿನಕಾಯಿ ತೊಟ್ಟು ಬಿಡಿಸಲು ಆಗಮಿಸುತ್ತಲಿರುವ ಮಹಿಳಾ ಕೂಲಿ ಕಾಮರ್ಿಕರಿಗೆ ಮಾನವೀಯತೆಯ ದೃಷ್ಟಿಯಿಂದ ಸಾಮೂಹಿಕ ವಿಮಾ ಮಾಡಿಸಲು ಮುಂದಾಗದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಎಪಿಎಂಸಿಯ ಕಾಯರ್ಾಲಯಕ್ಕೆ ಬೀಗ ಜಡಿದು ಬೃಹತ್ ಪ್ರತಿಭಟನೆ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ವಿಜಯಕುಮಾರ ಮಾಳಗಿ ಉಪಸ್ಥಿತರಿದ್ದರು.