ಕರಾವಳಿ ಉತ್ಸವದ ಪೋಸ್ಟ್ರ್ ನಲ್ಲಿ ಶಾಸಕರ ಭಾವಚಿತ್ರವೇ ಇಲ್ಲ: ಬಿಜೆಪಿಯಿಂದ ಆಕ್ಷೇಪ

ಲೋಕದರ್ಶನ ವರದಿ

ಕಾರವಾರ01 : ಉತ್ತರ ಕನ್ನಡ ಜಿಲ್ಲಾ ಆಡಳಿತವು ಕರಾವಳಿ ಉತ್ಸವ 2018 ಕಾರ್ಯಕ್ರಮದ ಪೋಸ್ಟರಗಳನ್ನು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆಮಾಡಿದ್ದು ಆ ಪೋಸ್ಟರ್ಗಳಲ್ಲಿ  ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹಾಗೂ ಸ್ಥಳಿಯ ಶಾಸಕಿ  ರೂಪಾಲಿ ನಾಯ್ಕ ಅವರ ಭಾವಚಿತ್ರಗಳನ್ನು ದುರುದ್ದೆಶಪೂರ್ವಕವಾಗಿ ಕೈಬಿಟ್ಟಿರುವ ಉತ್ತರ ಕನ್ನಡ ಜಿಲ್ಲಾ ಆಡಳಿತದ ಕ್ರಮವನ್ನು ಜಿಲ್ಲಾ ಭಾರತೀಯ ಜನತಾ ಪಾಟರ್ಿ ಖಂಡಿಸುತ್ತದೆ ಎಂದು ಬಿಜೆಪಿ ವಕ್ತಾರ ರಾಜೇಶ್ ನಾಯಕ್ ಹೇಳಿದ್ದಾರೆ.  

ಈ ಹಿಂದೆ ಕರಾವಳಿ ಉತ್ಸವದ ವೇಳೆಯಲ್ಲಿ ಕಾರವಾರದ ಮಯೂರವಮರ್ಾ ವೇದಿಕೆಯ ಮೇಲೆ ನಡೆಯುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ರಾಜ್ಯಸರಕಾರದ ಸಂಬಂಧಿತ ಮಂತ್ರಿಗಳು, ಸಂಸದರು ಹಾಗೂ ಸ್ಥಳಿಯ ಶಾಸಕರ ಚಿತ್ರಗಳನ್ನು ಆಹ್ವಾನಪತ್ರಿಕೆಯಲ್ಲಿ ಬಳಸಲಾಗುತ್ತಿತ್ತು. ಅಲ್ಲದೇ ಇಡಿ ಬೀಚ್ನ ತುಂಬೆಲ್ಲ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸ್ಥಳಿಯ ಶಾಸಕರು ಹಾಗು ಉಸ್ತುವಾರಿ ಸಚಿವರ  ಬ್ಯಾನರ್ಗಳನ್ನು ಹಾಕಲು ಅವಕಾಶ ನೀಡಲಾಗುತ್ತಿತ್ತು. ಆಗಲೂ ಇದೇ ಅಧಿಕಾರಿಗಳು ಇದ್ದರು. 

ಆದರೆ ಈಗ ಏಕಾಏಕಿ ಶಾಸಕರು ಹಾಗೂ ಕೇಂದ್ರ ಮಂತ್ರಿಗಳ ಹೆಸರನ್ನು ಹಾಗೂ ಭಾವಚಿತ್ರಗಳನ್ನು ಆಹ್ವಾನ ಪತ್ರಿಕೆಯಿಂದ ಕೈಬಿಟ್ಟಿರುವುದು ಪ್ರಸ್ತುತ ರಾಜ್ಯಸರಕಾರದ  ರಾಜಕೀಯ ಎದ್ದು ಕಾಣುತ್ತಿದೆ. ಹಾಗೂ ಅವರ ಕೈಗೊಂಬೆಗಳಾಗಿ ಸ್ಥಳಿಯ ಅಧಿಕಾರಿಗಳು ವತರ್ಿಸುತ್ತಿರುವುದಕ್ಕೆ ಉದಾಹರಣೆಯಾಗಿದೆ. 

ಶಾಸಕರು ಹಾಗೂ ಕೇಂದ್ರ ಮಂತ್ರಿಗಳ ಹೆಸರನ್ನು ಹಾಗೂ ಭಾವಚಿತ್ರಗಳನ್ನು ಆಹ್ವಾನ ಪತ್ರಿಕೆಯಿಂದ ಕೈಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ರಾಜ್ಯ ಸರಕಾರವೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆಯೋ ಅಥವಾ ಆಡಳಿತ ನಡೆಸುವವರನ್ನು ಮೆಚ್ಚಿಸಲು ಅಧಿಕಾರಿಗಳೇ ಈ ರಾಜಕಾರಣಕ್ಕೆ ಕೈಹಾಕಿದ್ದಾರೋ ಎಂಬುದನ್ನು ಸಂಬಂಧಿತರು ಸ್ಪಷ್ಟಪಡಿಸಬೇಕಾಗಿದೆ. ಕರಾವಳಿ ಉತ್ಸವವವ್ ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಉತ್ಸವವೇ ಹೊರತು ಯಾವುದೇ ಪಕ್ಷ ಅಥವಾ ಅಧಿಕಾರಿಯ ಸ್ವಂತ ಹಣದಿಂದ ನಡೆಯುವ ಕಾರ್ಯಕ್ರಮವಲ್ಲ. ಹೀಗಾಗಿ ಅಧಿಕಾರಿಗಳು ಪ್ರೋಟೋಕಾಲ್ ಪ್ರಕಾರ ಸ್ಥಳೀಯ ಸಂಸದರು ಹಾಗೂ ಶಾಸಕರ ಹೆಸರು ಹಾಗೂ ಭಾವಚಿತ್ರಗಳನ್ನು ಹಾಕಬೇಕಲ್ಲದೇ ಯಾರದೋ ಮಜರ್ಿಗೆ ಬಿದ್ದವರಂತೆ ವತರ್ಿಸಬಾರದು. ಈ ರೀತಿ ಶಾಸಕರು ಹಾಗೂ ಕೇಂದ್ರ ಮಂತ್ರಿಗಳ ಹೆಸರನ್ನು ಹಾಗೂ ಭಾವಚಿತ್ರಗಳನ್ನು ಕೈಬಿಟ್ಟ ಜಿಲ್ಲಾಡಳಿತದ ವರ್ತನೆ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನವಾಗಿದೆ ಎಂದು ರಾಜೇಶ್ ನಾಯಕ್ ಟೀಕಿಸಿದ್ದಾರೆ.

ಕೂಡಲೇ ತಪ್ಪನ್ನು ಸರಿಪಡಿಸಿ ಕರಾವಳಿ ಉತ್ಸವದ ಹೊಸ ಪೋಸ್ಟರಗಳನ್ನು ಶಾಸಕರು ಹಾಗೂ ಕೇಂದ್ರ ಮಂತ್ರಿಗಳ ಹೆಸರು ಹಾಗೂ ಭಾವಚಿತ್ರಗಳ ಸಹಿತ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಕರಾವಳಿ ಉತ್ಸವದ ಉಧ್ಘಾಟನೆಯ ದಿನ ಅಲ್ಲಿ ಬರುವ ವಿಐಪಿಗಳಿಗೆ ಕಪ್ಪು ಬಾವುಟ ತೋರಿಸಲಾಗುವುದಲ್ಲದೇ ಉಧ್ಘಾಟನೆಯ ವೇಳೆ ಮಯೂರವಮರ್ಾ ವೇದಿಕೆಯ ಮುಂಭಾಗದಲ್ಲಿ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕ ಸ್ಪಷ್ಟಪಡಿಸುತ್ತದೆ. 

ಜನಪ್ರತಿನಿಧಿಗಳಿ ಅಧಿಕಾರಿಗಳು ಮಾಡುವ ಅವಮಾನವನ್ನು ಯಾವ ಕಾಲಕ್ಕೂ ಸಹಿಸಲು ಸಾಧ್ಯವಿಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ಪಕ್ಷದ ವತಿಯಿಂದ ತರಬಯಸುತ್ತೇನೆ ಎಂದಿದ್ದಾರೆ.