ಗೋಕಾಕ 07: ಪರೋಪಕಾರದೊಂದಿಗೆ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದವರು ಅಮರರಾಗಿ ಜನರ ಮನದಲ್ಲಿ ನೆಲೆಸುತ್ತಾರೆಂದು ಗಂದಿಗವಾಡದ ರಾಜಗುರು ಹಿರೇಮಠದ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಗುರುವಾರದಂದು ಸಾಯಂಕಾಲ ಇಲ್ಲಿಯ ಬಸವ ನಗರದ ಬಲಮುರಿ ಗಣಪತಿ ಮಂದಿರದಲ್ಲಿ ಶಿವಯೋಗಿ ತತ್ವ ವಿಚಾರ ವೇದಿಕೆ ಹಾಗೂ ಬಲಮುರಿ ಗಣಪತಿ ಮಂದಿರ ಕಮೀಟಿಯ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ತತ್ವ ವಿಚಾರ ವೇದಿಕೆಯ ಶರಣ ಶಿವಯೋಗಿ ಬಿದರಿ ಹಾಗೂ ಸದಸ್ಯರಾಗಿದ್ದವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ವಿಚಾರ ಸಂಕರ್ಿರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇವರು ನಮ್ಮ ಆತ್ಮದಲ್ಲಿ ಇದ್ದಾನೆ, ನಾವು ಅದನ್ನು ಅರಿತು ನಾನು ಎಂಬುವುದರಿಂದ ದೂರವಾಗಿ ಜಗತ್ತಿನೊಳಗಿನ ಪರಮ ಸತ್ಯವನ್ನು ತಿಳಿದಾಗ ನಾವೆಲ್ಲ ಶಿವಯೋಗಿಗಳಾಗಲು ಸಾಧ್ಯ. ಪರಮಾತ್ಮ ಸತ್ಯವನ್ನು ಪ್ರಚಾರ ಮಾಡಿ ಆಧ್ಯಾತ್ಮಿಕ ಸಮಾಜ ನಿಮರ್ಾಣಕ್ಕೆ ಶ್ರಮಿಸಿದ ದಿ. ಶಿವಯೋಗಿ ಬಿದರಿ ಅವರು ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದ್ದಾರೆ. ನಾವೆಲ್ಲ ಅವರ ಮಾರ್ಗದಲ್ಲಿ ನಡೆದು ಇಂದಿನ ಯುವ ಪೀಳಿಗೆಯಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಶರಣ ಬಸವರಾಜ ರಾಮಗಾನಟ್ಟಿ, ಶಿವಯೋಗಿ ತತ್ವ ವಿಚಾರ ವೇದಿಕೆ ಅಧ್ಯಕ್ಷ ಬಸವರಾಜ ಮುರಗೋಡ, ಕಾಶಪ್ಪ ಕಲಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಎಮ್.ಪಿ.ಅಂಗಡಿ, ಮಹಾಂತೇಶ ತಾವಂಶಿ, ನಾಗಪ್ಪ ಚಿಪ್ಪಲಕಟ್ಟಿ, ಜಿ.ಆರ್.ಮಾಳಗಿ, ಪ್ರೊ. ರಾಜಶೇಖರ ಗುಣಕಿ ಇದ್ದರು.
ಯಲ್ಲಪ್ಪ ಕುರಬಗಟ್ಟಿ ಸ್ವಾಗತಿಸಿದರು, ರಾಧಾ ಗುಲ್ಲ ನಿರೂಪಿಸಿದರು, ವೀರಣ್ಣ ಕೊಳಕಿ ವಂದಿಸಿದರು.