ಲೋಕದರ್ಶನ ವರದಿ
ದಾಂಡೇಲಿ 01: ನಾವು ಸಮಾಜದ ಜನರನ್ನು ಶೈಕ್ಷಣಿಕವಾಗಿ ಹಾಗೂ ಆಥರ್ಿಕವಾಗಿ ಸದೃಢಗೊಳಿಸಿ ಸಶಕ್ತರನ್ನಾಗಿಸಲು ಮುಂದಡಿ ಇಡಬೇಕು ಪ್ರತಿಯೊಬ್ಬ ಗೋಮಾಂತಕ ಸಮಾಜದ ಬಾಂಧವರು ಸಮಾಜದ ಉನ್ನತಿಗೆ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು ಆಗ ಮಾತ್ರ ನಮ್ಮ ಸಮಾಜದ ಬೆಳವಣಿಗೆ ಸಾಧ್ಯ ಎಂದು ದಾಂಡೇಲಿ ತಾಲೂಕಿನ ವೈದ್ಯೆ ಡಾ.ಭಾವನಾ ಅಂಕೋಲೆಕರ ಅವರು ನಗರದ ಕನ್ಯಾ ವಿದ್ಯಾಲಯದ ಸಭಾಭವನದಲ್ಲಿ ನಡೆದ ದಾಂಡೇಲಿ-ಜೋಯಿಡಾ-ರಾಮನಗರ ಹಾಗೂ ಹಳಿಯಾಳ ಇದರ 20ನೇ ಗೋಮಾಂತಕ ಸಮಾಜದ ವಾಷರ್ಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿರಸಿಯ ನಂದನ ಸಾಗರ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋಮಾಂತಕ ಸಮಾಜದ ಸಂಘಟನೆಗೆ ದಾಂಡೇಲಿಯ ಸಂಘ ಅನುಕರಣಿಯವಾಗಿದೆ ಸಮಾಜದ ಜನರನ್ನು ಸಂಘಟಿಸಲು ವಿಶೇಷ ಒತ್ತು ನೀಡುತ್ತಿರುವ ದಾಂಡೇಲಿ ಗೋಮಾಂತಕ ಸಂಘದ ಕಾರ್ಯ ಶ್ಲಾಘನೀಯವೆಂದರು. ಕಾರವಾರದ ಡಾ.ವಿಜಯ ಕುಮಾರ ಬಾಂದೇಕರ, ಯಲ್ಲಾಪುರದ ಶಂಕರಾನಂದ, ರಾಮನಗರದ ಗುರುನಾಥ ಕಾಮತ ಅವರು ಗೋಮಾಂತಕ ಸಂಘದ ಉನ್ನತಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳಿಗೆ ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು. ಸಮಾಜದ ಹಿರಿಯರಾದ 92 ವರ್ಷದ ಅಚ್ಚುತ್ ಬಾಂದೇಕರ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಹಳಿಯಾಳ ತಾಲೂಕಿನ ಸಮಾಜದ ಶಿಕ್ಷಕಿಯರಾದ ಲತಾ ಕಿಣಿ, ಸೀಮಾ ಕಿಣಿ, ಕಾಂಚನಾ ಶೇಜವಾಡಕರ ಹಾಗೂ ಚಂದ್ರಕಲಾ ಬಾಂದೇಕರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಮೇಶ ಝಂಜು ವಹಿಸಿದ್ದರು. ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಮಿಲಿಂದ ಕೊಡಕಣರ್ಿ ನಾಗೇಶ ಯಲ್ಲಾಪುರಕರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸತ್ಯ ನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಅಮರ ಗುರವ ಹಾಗೂ ಅಶ್ವಿನಿ ಗುರವ ದಂಪತಿಗಳು ಭಾಗವಹಿಸಿದ್ದರು. ಅನಿಲ್ ದುರಂದರ ಸ್ವಾಗತಿಸಿದರು, ದೇವಿದಾಸ ಶೇಜವಾಡಕರ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯದಶರ್ಿ ಗಜಾನನ ಬಾನಾವಳಿ ವರದಿ ವಾಚಿಸಿದರು. ಚಂದ್ರಕಲಾ ಮಂಗೇಶಕರ ಹಾಗೂ ಪೂಣರ್ಿಮಾ ಗುರವ ಕಾರ್ಯಕ್ರಮ ನಡೆಸಿಕೊಟ್ಟರು, ಮಾರುತಿ ಬಾಂದೇಕರ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.