ಪೇಟಿಎಂನಲ್ಲಿ ಬೆರಳ ತುದಿಯಲ್ಲಿ ಫಾಸ್ಟ್ ಟ್ಯಾಗ್ ಪಡೆಯಲು ಅವಕಾಶ

PAYTM

ಬೆಂಗಳೂರು, ನ.28 - ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಪೇಟಿಎಂ ತನ್ನ ವೇದಿಕೆ ಮೂಲಕ ಫಾಸ್ಟ್ ಟ್ಯಾಗ್ ಮಾರಾಟಕ್ಕೆ ಚಾಲನೆ ನೀಡಿದೆ. ವಿತರಣಾ ವೆಚ್ಚವನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮನ್ನಾ ಮಾಡಿದೆ. ಕೇವಲ 400 ರೂ ಪಾವತಿ ಮಾಡುವುದರ ಮೂಲಕ ಪೇಟಿಎಂ ಫಾಸ್ಟ್ ಟ್ಯಾಗ್ ಖರೀದಿಸಬಹುದು.

ಪಾವತಿಸಿದ 400 ರೂ.ನಲ್ಲಿ 250 ರೂ ಭದ್ರತಾ ಶುಲ್ಕ ಮತ್ತು 150 ರೂ ಮಿನಿಮಮ್ ಬ್ಯಾಲೆನ್ಸ್ ಆಗಿರುತ್ತದೆ. ಗ್ರಾಹಕರ ಖಾತೆಯಲ್ಲಿ ಈ ಹಣ ಇರುತ್ತದೆ. ಗ್ರಾಹಕರು ಪೇಟಿಎಂ ಆ್ಯಪ್ ಹಾಗು ವೆಬ್ ಸೈಟ್ ಮೂಲಕವು ಸಹ ಪೇಟಿಎಂ ಫಾಸ್ಟ್ ಟ್ಯಾಗ್ ಅನ್ನು ಖರೀದಿಸಬಹುದು.

ಉಚಿತವಾಗಿ ನಿಮ್ಮ ಮನೆ ಬಾಗಿಲಿದೆ ಫಾಸ್ಟ್ ಟ್ಯಾಗ್ ಅನ್ನು ತಲುಪಿಸಲಾಗುತ್ತದೆ. ವಾಹನದ ನೋಂದಣಿ ಪತ್ರ ಸ್ಕ್ಯಾನ್ ಮಾಡಿ ಸಲ್ಲಿಸಿದ ನಂತರ ಈ ಫಾಸ್ಟ್ ಟ್ಯಾಗ್ ಅನ್ನು ಆ್ಯಕ್ಟಿವೇಟ್ ಮಾಡಲಾಗುವುದು. ಯುಪಿಐ ಅಥವಾ ಬ್ಯಾಂಕ್ ಅಕೌಂಟ್ ಬಳಸಿ  ಪೇಟಿಎಂ ವ್ಯಾಲೆಟ್ ಮೂಲಕ ಫಾಸ್ಟ್ ಟ್ಯಾಗ್ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

ಪೇಟಿಎಂ ಫಾಸ್ಟ್ ಟ್ಯಾಗ್ ಬಳಸಿದರೆ 2019-20 ರ ಅವಧಿಯಲ್ಲಿ ಎಲ್ಲಾ ಟೋಲ್ ಗೇಟ್ ಗಳಲ್ಲಿ ಶೇಕಡ 2.5 ರಷ್ಟು ಕ್ಯಾಶ್ ಬ್ಯಾಕ್ ಕೂಡ ಲಭ್ಯವಾಗಲಿದೆ. ಉಚಿತ ಸಿನಿಮಾ ಟಿಕೆಟ್ ಗೆಲ್ಲುವ ಅವಕಾಶ ಕೂಡ ಇದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.