ಜಿಲ್ಲಾ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳಿಗೆ ಹಾಲುಮತ ಮಹಾಸಭಾದಿಂದ ಸನ್ಮಾನ

The new office bearers of the District Agricultural Society were felicitated by the Halumata Mahasa

ಜಿಲ್ಲಾ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳಿಗೆ ಹಾಲುಮತ ಮಹಾಸಭಾದಿಂದ ಸನ್ಮಾನ 

ಗದಗ 16:   ಜಿಲ್ಲಾ ಕೃಷಿಕ ಸಮಾಜದ 2025 ರಿಂದ 2030 ರ ವರೆಗಿನ 5 ವರ್ಷಗಳ ಅವಧಿಗಾಗಿ   ಗುರುವಾರ ನಡೆದ  ಚುನಾವಣೆಯಲ್ಲಿ  ನೂತನ ಅಧ್ಯಕ್ಷರಾಗಿ ವೀರೇಂದ್ರ ಪಾಟೀಲ, ಉಪಾಧ್ಯಕ್ಷರಾಗಿ ರಾಮಣ್ಣ ಹೂವಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ದೀಪು ಕಪ್ಪತ್ತನವರ, ಖಜಾಂಚಿಯಾಗಿ ಗೋವಿಂದರಡ್ಡಿ ಶಿದ್ನಾಳ ಹಾಗೂ ರಾಜ್ಯ ಪ್ರತಿನಿಧಿಯಾಗಿ ಶಿವಪ್ಪ ಅರಹುಣಸಿ ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ  ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಅವರು ಕಾರ್ಯನಿರ್ವಹಿಸಿದರು. 

ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಹಾಲುಮತ ಮಹಾಸಭಾದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ, ಶಂಕರ ಕಳಗಣ್ಣವರ, ಗೌರವಾಧ್ಯಕ್ಷರಾದ ನಾಗರಾಜ ಮೆಣಸಗಿ, ಉಪಾಧ್ಯಕ್ಷರಾದ ಸೋಮನಗೌಡ ಪಾಟೀಲ, ಕಾರ್ಯದರ್ಶಿಯಾದ ಮುತ್ತು ಜಡಿ, ಜಿಲ್ಲಾ ಪದಾಧಿಕಾರಿಗಳಾದ ಸುರೇಶ ಹಲವಾಗಲಿ, ಕುಮಾರ ಮಾರನಬಸರಿ, ಸತೀಶ ಗಿಡ್ಡಹನುಮಣ್ಣವರ, ರವಿ ವಗ್ಗನವರ, ಸೋಮು ಮೇಟಿ, ರಮೇಶ ಮಾಲಗಿತ್ತಿ, ಎಂ.ಎಸ್‌.ಮಲ್ಲಾಪೂರ, ತಿರಕಪ್ಪ ಬೋಳನವರ, ರಾಜು ಪೂಜಾರ, ಯಮನೂರ​‍್ಪ ಪೂಜಾರ  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.