ಮನಸ್ಸೇ ಮನಸ್ಸು ನಿಲ್ಲಿಸಲ್ಲಿಕ್ಕೆ ಸಾಧ್ಯ : ಡಾ. ವಾಲಿ ಗುರೂಜಿ
The mind itself cannot stop the mind: Dr. Wali Guruji
ಶಿಗ್ಗಾವಿ 06 : ಯಾವುದೇ ಒಂದು ಕೆಲಸಕ್ಕೆ ಅಂಟಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಕಷ್ಟದ ಕೆಲಸ ಮನುಷ್ಯನ ತೋಳಲಾಟವನ್ನು ಗುರುಗಳಿಂದ, ಪರಿಸರದಿಂದ ನಿಯಂತ್ರಿಸಲು ಸಾಧ್ಯವಿಲ್ಲ ಕಾರಣ ಮನಸ್ಸೇ ಮನಸ್ಸು ನಿಲ್ಲಿಸಲ್ಲಿಕ್ಕೆ ಸಾಧ್ಯ ಮನಸ್ಸೇ ನಿರ್ಣಯ ಮಾಡಬೇಕು ಎಂದು ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಮಹಾರಾಜರು ಹೇಳಿದರು. ಪಟ್ಟಣದ ವಿರಕ್ತಮಠದ 33 ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ಸದಮಲ ಜ್ಞಾನಿಗಳ ಕುರಿತು ಪ್ರವಚನ ನೀಡಿ ಮಾತನಾಡಿ ಗುರುವಿನ ಕೆಲಸ ಶಿಷ್ಯನ ಭಾರವನ್ನು ಇಳಿಸುವುದು ಮುಖ್ಯ, ಪಾಲಕರು, ಗುರುಗಳು ಕೊಡುವ ಶಿಕ್ಷಣ ಸಂಸ್ಕಾರವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ಶರೀಫನವರಿಗೆ ಭದ್ರ ಬುನಾದಿ ಹಾಕಿದವರು ಬಸಯ್ಯ, ವೀರಭದ್ರಯ್ಯನವರು, ನಿಜ ಸ್ಥಿತಿ ಉಳ್ಳಂತವರು,ಶರೀಫರ ಚರಿತ್ರೆ ನೂಲ್ವಿಯ ಕುಮಾರಸ್ವಾಮಿ ಮಠದಿಂದ ಪ್ರಾರಂಭವಾಗುತ್ತದೆ. ರೈತಾಪಿ ವರ್ಗದವರಿಗೆ ಹದಗೆಟ್ಟ ಹೊಲವಿದ್ದರೆ ಹೊಲಕ್ಕೆ ಹೋಗಲು ಬೇಜಾರ ಆಗುತ್ತದೆ. ಆದರೆ ಅದೇ ಹೊಲ ಹಸನಾಗಿದ್ದರೆ ರೈತಾಪಿ ವರ್ಗಕ್ಕೆ ಸಂತೋಷಮಯ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ದಿವ್ಯ ಸಾನಿಧ್ಯವಹಿಸಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹಾಗೂ ವಿರಕ್ತಮಠದ ಬಸವಲಿಂಗ ದೇವರು ಆರ್ಶಿವದಿಸಿದರು. ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಪತ್ತಾರ ಮಾತನಾಡಿ ಬಸವ ತತ್ವಾಧಾರಿತ ಕಾಯಕದ ಮೇಲೆ ಸಮಾಜಮುಖಿ ಕೆಲಸವು ಮಾದರಿ ವಿರಕ್ತಮಠವಾಗಿ ಕಾರ್ಯನಿರ್ವಹಿಸುತ್ತಾ ಸಾಗಿದೆ ಎಂದರು.
ಸಂಗೀತ ಸೇವೆಯನ್ನ ಶಿದ್ದಲಿಂಗಪ್ಪ ನರೇಗಲ್ಲ್, ತಬಲಾ ಸಾಥ ಬಸವರಾಜ ವಂದಲಿ, ತತ್ವ ಪದ ಸೇವೆ ಬಸವರಾಜ ಶಿಗ್ಗಾವಿ ನೆರವೇರಿಸಿದರು. ಸಹನಾ ದುಭೆ, ಪ್ರತೀಕ್ಷಾ ಮೊರಬದ ಭರತನಾಟ್ಯ ಮಾಡಿದರು. ಆರ್.ಎಫ್.ಓ ಪಂಚಾಕ್ಷರ್ಪ ತೆಗ್ಗಿಹಳ್ಳಿ, ರಾಘವೇಂದ್ರ ಪತ್ತಾರ ಕರೆಪ್ಪ ಕಟ್ಟಿಮನಿ, ಮಲ್ಲಪ್ಪ ದುಂಡಪ್ಪನವರ, ಈಶ್ವರಗೌಡ ಪಾಟೀಲ, ವರದಿಗಾರರಾದ ಬಸವರಾಜ ಹೊನ್ನಣ್ಣನವರ, ಸುರೇಶ ಯಲಿಗಾರ, ಸಿದ್ರಾಮಗೌಡ ಮೆಳ್ಳಾಗಟ್ಟಿ ಸೇರಿದಂತೆ ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 