ಧಾರವಾಡ24 : ಕನರ್ಾಟಕ ಕುಲಪುರೋಹಿತ ಆಲೂರು ವೆಂಕಟರಾಯರ 55 ನೇ ಪುಣ್ಯತಿಥಿಯ ನಿಮಿತ್ತ ಇಲ್ಲಿಯ ಪುರಸ್ಕಾರ ಸಂಸ್ಥೆಯು ಇದೇ ಫೆ.25 ರಂದು ಬೆಳಿಗ್ಗೆ 9-30 ಕ್ಕೆ ಆಲೂರು ವೆಂಕಟರಾಯರ ಸಾಂಸ್ಕೃತಿಕ ಭವನದಲ್ಲಿ ಇರುವ ಕುಲಪುರೋಹಿತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ಮರಣೆ ಕಾರ್ಯಕ್ರಮ ಮಾಡಲಿದೆ.
ಆಲೂರ ವೆಂಕಟರಾಯರ ಮೊಮ್ಮಗ ಪ್ರೊ. ದೀಪಕ ಆಲೂರ ಅವರನ್ನು ಗೌರವಿಸುವುದರ ಮೂಲಕ ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಪುಣ್ಯ ಪುರುಷರ ವಂಶಜರನ್ನು ಗೌರವಿಸಲಾಗುವುದೆಂದು ಪುರಸ್ಕಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.