ಬೈಲಹೊಂಗಲ 07: ರೈತರ ಹಿತಾಸಕ್ತಿ ಕಡೆಗಣಿಸಿ ರೈತರಿಗೆ ತೊಂದರೆ ಮಾಡಿ ಸಕರ್ಾರ ಯಾವುದೇ ಯೋಜನೆಯನ್ನು ಕೈಕೊಳ್ಳಲು ಯಾರಿಗೂ ಪರವಾಣಿಗೆ ನೀಡುವುದಿಲ್ಲ. ರೈತರ ಹಿತಾಸಕ್ತಿ ಕಾಪಾಡುವುದು ಪ್ರಮುಖ ಜವಾಬ್ದಾರಿ ಆಗಿದೆ. ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನ್ನಹಳ್ಳಿ ಹೇಳಿದರು.
ಸಮೀಪದ ಯಕ್ಕುಂಡಿ ಗ್ರಾಮದಲ್ಲಿ ಗ್ರೀನ್ಕೋ ಕಂಪನಿ ಹೈಡ್ರೋ ಪಾವರ್ ಪ್ರೋಜೆಕ್ಟ್ ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಜಲ ವಿದ್ಯುತ್, ಸೌರ ವಿದ್ಯುತ್, ವಾಯು ವಿದ್ಯುತ್ ಯೋಜನೆ ಹಾಗೂ ಪರಿಸರ ಮೇಲೆ ಆಗಲಿರುವ ಪರಿಣಾಮ ಕುರಿತು ಸಾರ್ವಜನಿಕರ ಆಹವಾಲನ್ನು ಸೋಮವಾರ ಸ್ವೀಕರಿಸಿ ಅವರು ಮಾತನಾಡಿದರು.
ಬಹಳಷ್ಟು ರೈತರು, ಸಾರ್ವಜನಿಕರು ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅವರ ಅಭಿಪ್ರಾಯಗಳನ್ನು ಆಧರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ತಿಳಿಸುತ್ತೇವೆ. ಕಂಪನಿಯರು 225 ಎಕರೆ ಜಮೀನು ಪಡೆಯಲು ಉದ್ದೇಶಿಸಿದ್ದಾರೆ. ಈ ಬಗ್ಗೆ ಸಕರ್ಾರ ಮಟ್ಟದಲ್ಲಿ ಅಂತಿಮ ತೀಮರ್ಾಣ ಆಗಬೇಕಿದೆ. ಕಂಪನಿಯವರು ಜಲ ವಿದ್ಯುತ್ ಉತ್ಪಾದನೆ ಮಾಡಬೇಕಾದರೆ ನವಿಲು ತೀರ್ಥ ಡ್ಯಾಂನಿಂದ ನೀರು ತೆಗೆದುಕೊಳ್ಳಬೇಕಾಗುತ್ತದೆ. ಆ ನೀರು ಕಂಪನಿಯವರು ತೆಗೆದುಕೊಂಡು ಹೋದರೆ ರೈತರ ಜಮೀನುಗಳ ಬೆಳೆಗಳಿಗೆ, ಕುಡಿಯಲು ನೀರಿನ ತೊಂದರೆ ಆಗಲಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸುವಂತೆ ಸಕರ್ಾರಕ್ಕೆ ತಿಳಿಸುವೆ. ಯಾವ ರೈತರು ಆತಂಕಕ್ಕೆ ಒಳಗಾಗಬಾರದು ಎಂದರು.
ಗ್ರಿನ್ಕೋ ಕಂಪನಿಯ ಸಿಒಒ ಶ್ರೀನಿವಾಸ ಮಾತನಾಡಿ, ಜಲ ವಿದ್ಯುತ್, ಸೌರ್ ವಿದ್ಯುತ್, ವಾಯು ವಿದ್ಯುತ್ ಕಾಮಗಾರಿಯಿಂದ ರೈತರಿಗೆ ಯಾವುದೇ ಹಾನಿ ಆಗುವುದಿಲ್ಲ. ಈ ಯೋಜನೆಯಿಂದ ಯಾವ ಗ್ರಾಮಸ್ಥರಿಗೂ, ರೈತರಿಗೆ ತೊಂದರೆ ಆಗುವುದಿಲ್ಲ. ಪರಿಸರಕ್ಕೂ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟು ಆಗುವದಿಲ್ಲ. ಈ ಗ್ರಾಮಗಳಲ್ಲಿ ಜಲ್, ಸೌರ್, ವಾಯು ವಿದ್ಯುತ್ ನಿಮರ್ಾಣದಿಂದ ತಮ್ಮ, ತಮ್ಮ ಹಳ್ಳಿಗಳ ಪ್ರಗತಿಯ ಜೊತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೌಲಭ್ಯ ಸಿಗಲಿದೆ. ಲಕ್ಷಾಂತರ ರೂ.ಅನುದಾನದಲ್ಲಿ ಗ್ರಾಮಗಳ ಅಭಿವೃದ್ಧಿ ಆಗಲಿದೆ. ರೈತರು, ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಇದೇ ವೇಳೆ ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ, ಕಾರ್ಲಕಟ್ಟಿ ತಾಂಡಾ, ಮಲ್ಲೂರ ಗ್ರಾಮಸ್ಥರು ಸಾರ್ವಜನಿಕ ಪ್ರಶ್ನೋತ್ತರ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಅಳಲು ತೋಡಿಕೊಂಡರು. ಜಲ ವಿದ್ಯುತ್, ಸೌರ ವಿದ್ಯುತ್, ವಾಯು ವಿದ್ಯುತ್ ನಿಮರ್ಾಣ ಮಾಡಲು ಅನುಮತಿ ನೀಡುವದಿಲ್ಲ ಎಂದು ಒಕ್ಕೂರಲಿನಿಂದ ವಿರೋಧ ವ್ಯಕ್ತಪಡಿಸಿದರು. ಸಾಕಷ್ಟು ರೈತರು ತಮ್ಮ, ತಮ್ಮ ಅನಿಸಿಕೆ ಹಂಚಿಕೊಂಡು ಗ್ರೀನ್ಕೋ ಕಂಪನಿಯ ಕಾರ್ಯ ಚಟುವಟಿಕೆಯನ್ನು ತಕ್ಷಣ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು. ಎಸಿ ಶಿವಾನಂದ ಭಜಂತ್ರಿ, ಪರಿಸರ ಇಲಾಖೆ ಅಧಿಕಾರಿಗಳು, ಗ್ರೀನ್ಕೋ ಕಂಪನಿ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು, ರೈತಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.