ಕ್ರೀಡೆ ಇಲ್ಲದವನ ಜೀವನ ಕೀಟ ತಿಂದ ಹಣ್ಣು ಇದ್ದಂತೆ-ಒಂಟಗೂಡಿ
ಮೂಡಲಗಿ 05: ಪ್ರಾಚೀನ ಕಾಲದಿಂದಲೂ ಕ್ರೀಡೆಗಳು ಮಾನವನ ಬದುಕಿನಲ್ಲಿ ಹಾಸು ಹೊಕ್ಕಾಗಿವೆ ಪ್ರತಿಯೊಬ್ಬ ವಿದ್ಯಾರ್ಥಿಯು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರಬೇಕಾದರೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರಬೇಕು ಎಂದು ಹಿಡಕಲ್ಲದ ವಸಂತ್ ರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ಸಾಹಿತಿ ಟಿ.ಎಸ್.ಒಂಟಗೂಡಿ ಹೇಳಿದರು.
ಅವರು ತಾಲೂಕಿನ ಖಾನಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ, ಸಾಹಿತ್ಯ, ಸಂಗೀತ, ನೃತ್ಯ ಕಲೆ ಮುಂತಾದವುಗಳಲ್ಲಿ ಭಾಗವಹಿಸಿ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ನೆಲೆಸುವಂತೆ ಮಾಡಬೇಕು. ಕ್ರೀಡೆ ಇಲ್ಲದವನ ಜೀವನ ಕೀಟ ತಿಂದ ಹಣ್ಣು ಇದ್ದಂತೆ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಗುರಿ ಇಟ್ಟುಕೊಂಡು ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು, ಗುರಿ ಇಲ್ಲದವನ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಮ್‌ಸಿ ಅಧ್ಯಕ್ಷ ಸದಾಶಿವ ತುಪ್ಪದ ವಹಿಸಿದ್ದರು ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋಪಾಲ ನಿಂಗನೂರ, ಶಂಕರ ದೋಣಿ, ಗೂಳಪ್ಪ ಹೊಸೂರು, ರಮೇಶ ಕರಗಣಿ ಮುಖ್ಯೋಪಾಧ್ಯಾಯ ಆರ್ ಎಸ್ ಹೂನೂರ ಉಪಸ್ಥಿತರಿದ್ದರು
ದೈಹಿಕ ಶಿಕ್ಷಕ ಲಕ್ಕಪ್ಪ ಪಾಟೀಲ ಸ್ವಾಗತಿಸಿ, ಲಕ್ಷ್ಮೀ ಬೆಳಗಲಿ ನಿರೂಪಿಸಿದರು, ಲಕ್ಷ್ಮೀ ಧರ್ಮಟ್ಟಿ ವಂದಿಸಿದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ತಾಲೂಕಿನ ಖಾನಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಾಚಾರ್ಯ ಮತ್ತು ಸಾಹಿತಿ ಟಿ.ಎಸ್.ಒಂಟಗೂಡಿ ಮಾತನಾಡಿದರು