ಜಗತ್ತಿನಲ್ಲಿಯೇ ಶ್ರೇಷ್ಠ ಸಂಪತ್ತು ಶಿಕ್ಷಣ: ಶ್ರೀ ಬಸವ ಪ್ರಭು ಕಲ್ಮಠ ಶ್ರೀಗಳು

The greatest wealth education in the world: Sri Basava Prabhu Kalmath Sri

ಜಗತ್ತಿನಲ್ಲಿಯೇ ಶ್ರೇಷ್ಠ ಸಂಪತ್ತು ಶಿಕ್ಷಣ: ಶ್ರೀ ಬಸವ ಪ್ರಭು ಕಲ್ಮಠ ಶ್ರೀಗಳು 

 ರನ್ನ ಬೆಳಗಲಿ, 06; ಪಟ್ಟಣದ ನೆರೆಯ ಗ್ರಾಮವಾದ ನಾಗರಾಳ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಬನದ ವಸತಿ ಶಾಲೆಯಲ್ಲಿ 5 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಮಂಗಳವಾರ ಜರುಗಿತು. ದಿವ್ಯ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ಬಸವ ಪ್ರಭು ಕಲ್ಮಠ ಶ್ರೀಗಳು ಜಗತ್ತಿನಲ್ಲಿಯೇ ಶ್ರೇಷ್ಠ ಸಂಪತ್ತು ಶಿಕ್ಷಣವಾಗಿದೆ. ವಿದ್ಯಾರ್ಥಿ ಜೀವನವು ಬಂಗಾರಮಯ ವಾಗಬೇಕಾದರೆ ಶಿಕ್ಷಣವನ್ನು ಕಲಿಯುವಾಗ, ಕಷ್ಟ ಪಡಲೇಬೇಕು. ಅಂದಾಗ ಮುಂದಿನ ಜೀವನ ಆನಂದ ದಾಯಕವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಾನಂದ ನಾಗರಾಳ ಅಧ್ಯಕ್ಷರು ಎಸ್‌.ಡಿ.ಎಂ.ಸಿ ವಹಿಸಿದ್ದರು. ಹಿರಿಯ ಪತ್ರಕರ್ತರು, ಅಂಕಣಕಾರರಾದ ಮಲ್ಲಿಕಾರ್ಜುನ ಹೆಗ್ಗಳಗಿ ಪಾಲಕರ ಪೋಷಕರ ಕುರಿತು ಮಾತನಾಡುತ್ತಾ ಮನೆಗೆ ಹೊಂದಿಕೊಂಡಿರುವ ಹತ್ತಿರದಲ್ಲಿರುವ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಕ್ಕಳು ಮುಗಿಸುವಂತೆ ಜಾಗೃತಿ ವಹಿಸಬೇಕು. ನಮ್ಮ ಆಡಂಬರಕ್ಕಾಗಿ ಬಹಳ ಬಹಳ ದೂರದ ಶಾಲೆಗಳಿಗೆ ಸೇರಿಸಿ, ಲಕ್ಷ ಲಕ್ಷ ರೂಪಾಯಿಗಳನ್ನು ಖಾಸಗಿ ಶಾಲಾ ಶಿಕ್ಷಣ ಹೆಸರಲ್ಲಿ ಖರ್ಚು ಮಾಡುವುದು, ಒಂದು ಆಡಂಬರವಾಗಿದೆ. ಪಾಲಕರಿಂದ ಮಕ್ಕಳು ದೂರವಾದರೆ ಅವರು ಅನಾಥ ಭಾವದಿಂದ ಬದುಕಿ ತದನಂತರ ನಿಮ್ಮನ್ನು ದೂರ ಮಾಡುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿಕೊಟ್ಟರು. ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ವಿದ್ಯಾರ್ಥಿ ಜೀವನದ ಉತ್ತಮ ಲಕ್ಷಣದ ಕುರಿತು. ನಿವೃತ್ತ ತಹಸಿಲ್ದಾರರಾದ ಡಿ ಜೆ ಸಮಾಜ ಕುಟುಂಬ ಮತ್ತು ಮಕ್ಕಳ ಪಾಲನೆ ಕುರಿತು. ಹಿರಿಯ ಬಯಲಾಟ ಕಲಾವಿದರಾದ ಕೃಷ್ಣಪ್ಪ ಪೂಜಾರ ಕಲಿಕೆ ಜೊತೆಗೆ ಗ್ರಾಮೀಣ ಕ್ರೀಡೆ ಮತ್ತು ಜಾನಪದ ಕಲಾ ಪ್ರತಿಭೆಗಳನ್ನು ಮಕ್ಕಳ್ಳಿ ಗುರುತಿಸಿ ಉತ್ತಮ ಕಲಾವಿದರನ್ನಾಗಿ ರೂಪಿಸುವ ಕುರಿತು ಮಾತನಾಡಿದರು.ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಗೌರವಿಸಿ ಸತ್ಕರಿಸಿದರು. 5 ಲಕ್ಷ ರೂಪಾಯಿ ಮೊತ್ತದ ಹೈಟೆಕ್ ಶೌಚಾಲಯವನ್ನು ಶ್ರೀಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲು ಜಗದಾಳ ಉದ್ಘಾಟಿಸಿದರು.ನಿವೃತ್ತ ಸೈನಿಕರಾದ ಬಸವರಾಜ ಬಳಿಗಾರ,ಮಾಧವಾನಂದ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಯಡಹಳ್ಳಿ,ಆದಮ್ ಮಕಾನದಾರ, ಮಲ್ಲಪ್ಪ ಹಸಬಿ, ಸಿದ್ದಪ್ಪ ನಾಗರಾಳ, ರಾಮಣ್ಣ ಶೆಂಡಗಿ ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯರಾದ ಜಯಪ್ರಕಾಶ ಆನೂರ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕರಾದ ಪಿ ಆರ್ ಮಲ್ಲಾರಿ ವಂದಿಸಿದರು.