ಪ್ರಭು ಮಹಾಲಿಂಗೇಶ್ವರ ಮಠದ ಅದ್ದೂರಿ ರಥೋತ್ಸವ
The grand chariot festival of Lord Mahalingeshwara Mutt
ನೇಸರಗಿ 10: ಸಮೀಪದ ಮಾಸ್ತಮರ್ಡಿ ಗ್ರಾಮದ 200 ವರ್ಷಗಳ ಇತಿಹಾಸವುಳ್ಳ ಅನೇಕ ಭಕ್ತರ ಆರಾಧ್ಯ ತಾಣ, ಅಲ್ಲಮಪ್ರಭು ವಾಸಿತ, ಶ್ರೀ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಂದು ಅದ್ದೂರಿ ರಥೋತ್ಸವವು ಅನೇಕ ಮಹಾತ್ಮರ, ಮುಖಂಡರ, ಭಕ್ತರ ಭಕ್ತಿ ಭಾವದೊಂದಿಗೆ ಅದ್ದೂರಿಯಾಗಿ ನೆರವೇರಿತು. ಈ ಜಾತ್ರಾ ಮಹೋತ್ಸವದಲ್ಲಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ ಜಾತ್ರೆಗಳಿಂದ ಜನರ ಮನಸಿನಲ್ಲಿ ಪ್ರೀತಿ, ಸೌಹಾರ್ದ, ಕುಟುಂಬ ಪ್ರೇಮ ಇಮ್ಮಡಿಗೊಳ್ಳುತ್ತದೆ.
ಪ್ರಹುಲಿಂಗೇಶ್ವರ ಮಠವು ಅನೇಕ ಪವಾಡ ಪುರುಷರ ಬಿಡಾಗಿದ್ದು, ಗುಡ್ಡದ ದಡದಲ್ಲಿ ನೂರು ವರ್ಷಗಳ ಹಿಂದೆ ಮಠವು ಸ್ಥಾಪನೆ ಅಗಿದ್ದು, ಅನೇಕ ಭಕ್ತರ ಅಶೋತ್ತರಗಳನ್ನು ಈಡೇರಿಸಿದ ಪುಣ್ಯ ಕ್ಷೇತ್ರ ಅಗಿದ್ದು, ಈಗಿನ ಫಿಠಾಧಿಪತಿಗಳಾದ ವೀರಭದ್ರ ಪಂಡಿತ ಆರಾಧ್ಯ ಶ್ರೀಗಳು ಈ ಮಠದ ಅಭಿವೃದ್ಧಿಗೆ ಪಾಳು ಬಿದ್ದ ಮಠವನ್ನು ಉನ್ನತಿಕರಿಸಿ ನೂತನ ರಥೋತ್ಸವ ನಿರ್ಮಾಣ ಮಾಡಿಸಿ ಅದ್ದೂರಿ ಜಾತ್ರೆ ಆಗಲು ಅವರ ಪರಿಶ್ರಮ ಅಪಾರವಾಗಿದೆ ಎಂದರು.
ಮಹಾ ನೂತನ ರಥೋತ್ಸವದಲ್ಲಿ ಮುನ್ನ ಧರ್ಮಸಭೆಯಲ್ಲಿ ಮಹಾತ್ಮರಾದ ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಮಹಾಸ್ವಾಮಿಗಳು, ಮಮದಾಪುರ ಮೌನ ಮಲ್ಲಿಕಾರ್ಜುನ ಶ್ರೀಗಳು, ಕಾದ್ರೊಳ್ಳಿಯ ಅದೃಶ್ಯ ಪಾಲಾಕ್ಷ ಶಿವಯೋಗಿಗಳು, ಮಾಸ್ತಮರ್ಡಿ ಪ್ರಭುಲಿಂಗೇಶ್ವರ ಮಠದ ಷ ಭ್ರ ವೀರಭದ್ರ ಪಂಡಿತ ಆರಾಧ್ಯ ಶ್ರೀಗಳು, ಹಾರುಗೋಪ್ಪದ ಶ್ರೀ ಶಿವಯೋಗಿಣಿ ತಾಯಿ , ಇನ್ನೂ ಅನೇಕ ಪೂಜ್ಯ ಮ ಮಹಾತ್ಮರು ಧರ್ಮಸಭೆಯಲ್ಲಿ ಆದ್ಯಾತ್ಮ ಪ್ರವಚನದಲ್ಲಿ ಭಾಗವಹಿಸಿದ್ದರು. ಯುವ ಮುಖಂಡ ಸಚಿನ ಪಾಟೀಲ ಸೇರಿದಂತೆ ನೇಸರಗ ಜಿ ಪಂ ಭಾಗದ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತ ಸಮೂಹ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 