ಲೋಕದರ್ಶನ ವರದಿ
ಜೊಯಿಡಾ16: ತಾಲೂಕಿನ ಜನರ ಆರೋಗ್ಯದ ರಕ್ಷಣೆ ಕುರಿತು ಸಂಜೀವನಿ ಸೇವಾ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಜನರಿಗೆ ವಿವಿಧ ಸೇವೆಗಳನ್ನು ನೀಡಿದೆ. ಆರೋಗ್ಯವಂತ ಸಮಾಜ ನಿಮರ್ಾಣವೇ ಈ ಟ್ರಸ್ಟ್ನ ಗುರಿಯಾಗಿದೆ. ಇದರ ಪ್ರಯೋಜನ ಹೆಚ್ಚಿನ ಜನರು ಪಡೆಯುವಂತಾಗ ಬೇಕು ಎಂದು ಸಂಜೀವನಿ ಸೇವಾ ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷರಾದ ರವಿ ರೇಡಕರ ಹೇಳಿದರು.
ಅವರು ಈಚೆಗೆ ಸಂಜೀವನಿ ಸೇವಾ ಟ್ರಸ್ಟ್, ಜೊಯಿಡಾ, ಅಶೋಕಾ ಆಸ್ಪತ್ರೆ, ಹುಬ್ಬಳ್ಳಿ ಹಾಗೂ ಕ್ರೂಗರ ಪೌಂಡೇಶನ ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ಜೋಯಿಡಾದ ಕನ್ನಡ ಭವನದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ತಾಲೂಕಿನಲ್ಲಿ ಅತೀ ಬಡತನದಿಂದ ಬಳಲುತ್ತಿರುವ ಜನರೇ ಹೆಚ್ಚಾಗಿದ್ದಾರೆ. ಅವರು ತಮ್ಮ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ತಾಲೂಕಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಇದರಿಂದ ಜನರು ತಮ್ಮ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿರ್ಲಕ್ಷಿಸುವುದರಿಂದ ಅನೇಕ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದನ್ನು ನಾವೆಲ್ಲರೂ ಸೇರಿ ಸರಿ ಪಡಿಸಬೇಕಿದೆ ಎಂದರು.
ಅಶೋಕಾ ಆಸ್ಪತ್ರೆ, ಹುಬ್ಬಳ್ಳಿ ಡಾ| ರೂಪೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಅತೀಯಾದ ಮೋಬೈಲ ಬಳಕೆ, ಟಿವಿ ವಿಕ್ಷಣೆ ಮತ್ತು ಇತರ ಕಾರಣಗಳಿಂದ ನಾವು ನಮ್ಮ ಉತ್ತಮವಾದ ಕಣ್ಣುಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮಗೆ ವಯಸ್ಸಾಗುವ ಮುಂಚೆಯೇ ನಾವು ನಾನಾ ರೀತಿಯ ಕಣ್ಣಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ಅವುಗಳಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೇ, ನಾವು ದೊಡ್ಡ ಅನಾಹುತಕ್ಕೆ ಒಳಗಾಗಬೇಕುತ್ತದೆ. ಕಣ್ಣುಗಳ ಮಹತ್ವವನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ಪಶ್ಚಾತಾಪ ಪಟ್ಟರೆ ಪ್ರಯೋಜನವಿಲ್ಲ. ಹೆಚ್ಚಿನ ಜನರು ಇಂಥ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಒಟ್ಟು 234 ರೋಗಿಗಳನ್ನು ತಪಾಸಣೆ ಮಾಡಲಾಯಿತು. ಅದರಲ್ಲಿ 63 ರೋಗಿಗಳಿಗೆ ಕನ್ನಡಕ ಹಾಗೂ ಉಳಿದವರಿಗೆ ಔಷಧಗಳನ್ನು ನೀಡಲಾಯಿತು. 19 ರೋಗಿಗಳಿಗೆ ಅದೇ ದಿನ ಹುಬ್ಬಳ್ಳಿ ಅಶೋಕಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಇಂಗ್ಲೀಷ ಕಂಠ ಪಾಠ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಂಬೋಳಿಯ ಕನ್ನಡ ಪ್ರಾಥಮಿಕ ಖಾಲೆಯ ವಿದ್ಯಾಥರ್ಿನಿ ರೇಷ್ಮಾ ಸಂಜಯ ಕಣ್ಣೇಕರ ಇವಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ಪಾಂಜೇಲಿಯ ವಿಷ್ಣು ದೇಸಾಯಿ, ಹುಡಸಾದ ನಾರಾಯಣ ಹೆಬ್ಬಾರ, ಕಿರವತ್ತಿಯ ರಾಜೇಂದ್ರ ವೇಟೆ, ಅಣಶಿಯ ದಿನಕರ ಪೇಡ್ನೇಕರ, ಅಶೋಕಾ ಆಸ್ಪತ್ರಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಜಿವನಿ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಸುನೀಲ ದೇಸಾಯಿ, ಕಾರ್ಯದಶರ್ಿ ಜಯಾನಂದ ಡೇರೆಕರ, ಜಯಂತ ಗಾವಡಾ, ಭಗವಂತ ಚೌಗುಲೆ, ಕೃಷ್ಣಾ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಅಜೀತ ಟೆಂಗ್ಸೆ, ಪ್ರಭಾಕರ ನಾಯ್ಕ, ಕಿರಣ ನಾಯ್ಕ, ಉದಯ ದೇಸಾಯಿ, ಸದಾನಂದ ದೇಸಾಯಿ, ಹರಿಶ ಭಟ್ಟ, ಬಸವಣಯ್ಯ ಹಿರೇಮಠ, ಪಾಂಜೇಲಿಯ ಮಹಾದೇವ ದೇಸಾಯಿ ಮುಂತಾದ ನೂರಾರು ಸಾರ್ವಜನರಿಕರು ಉಪಸ್ಥಿತರಿದ್ದರು