ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವ ದೇಶಕ್ಕೆ ತಳಪಾಯಯುಂಟು: ಕುಂಬಾರ

ಲೋಕದರ್ಶನ ವರದಿ

ವಿಜಯಪುರ 21: ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿ ಅಪ್ರತೀಮ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರಪ್ರೇಮಿ, ಶಿಕ್ಷಣ ಕ್ರಾಂತಿ ಹರಿಕಾರ, ಭಾರತರತ್ನ ಮೌಲಾನಾ ಅಬುಲಕಲಾಮ ಆಜಾದ ರವರು ದೇಶದ ಪ್ರಗತಿಗೆ ಶಿಕ್ಷಣ ಭದ್ರಬುನಾದಿ. ಯಾವ ಸಮಾಜ ಯಾವ ದೇಶ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುತ್ತದೆಯೋ ಆ ದೇಶಕ್ಕೆ ತಳಪಾಯಯುಂಟು ಎಂದು ಜಿಲ್ಲಾ ಕಸಾಪ ಗೌರವಕಾರ್ಯದಶರ್ಿ ಪ್ರೊ. ಬಸವರಾಜ ಕುಂಬಾರ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಸಭಾಭವನದಲ್ಲಿ ಡಾ. ಮೌಲಾನಾ ಅಬುಲಕಲಾಮ ಆಜಾದ ಅವರ 130ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಡಾ. ಮೌಲಾನಾ ಅಬುಲಕಲಾಮರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಪ್ರಮುಖ ಹೋರಾಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು. ಮಹಾತ್ಮಾ ಗಾಂಧೀಜಿ, ಜವಾಹರಲಾಲ ನೆಹರು, ಸರದಾರ ವಲ್ಲಭಬಾಯಿ ಪಟೇಲ ಅಂದಿನ ಎಲ್ಲ ರಾಷ್ಟ್ರೀಯ ನಾಯಕರ ನಿಕಟವತರ್ಿಯಾಗಿ ಸ್ವಾತಂತ್ರ ಹೋರಾಟ ಚಳುವಳಿಗಳಲ್ಲಿ ಭಾಗವಹಿಸಿ ಅನೇಕ ಸಲ ಸೆರೆಮನೆ ವಾಸ ಅನುಭವಿಸಿದ ಒಬ್ಬ ಧೀಮಂತ ನಾಯಕರಾಗಿದ್ದರು. ಅವರ ಆದರ್ಶಪ್ರಾಯ ವ್ಯಕ್ತಿತ್ವ ಇಂದಿನವರಿಗೆ ಮಾದರಿಯಾಗಿದೆ ಎಂದರು. 

ಮುಖ್ಯ ಅತಿಥಿಸ್ಥಾನದಿಂದ ಅಹಿಂದ ರಾಜ್ಯ ಕಾರ್ಯದಶರ್ಿಗಳಾದ ಎಸ್.ಎಂ. ಪಾಟೀಲ (ಗಣಿಹಾರರ) ಅವರು ಮಾತನಾಡುತ್ತ ಮೌಲಾನಾ ಆಜಾದರವರು ಅನುಭವಿಸಿದ ಅಂದಿನ ಸ್ವಾತಂತ್ರ್ಯ ಚಳುವಳಿ ದಿನಗಳು ಸುಖಮಯವಾಗಿರಲಿಲ್ಲ. ಮುಳ್ಳು ಕಲ್ಲಿನ ಹಾದಿಯಲ್ಲಿ ನಡೆದು ದೇಶ ಸ್ವಾತಂತ್ರ್ಯವಾಗುವಲ್ಲಿ ಅವರ ಪಾತ್ರ ಅನನ್ಯ ಹಾಗೂ ತಮ್ಮ ಬದುಕನ್ನೆ ದೇಶಕ್ಕಾಗಿ ಮುಡುಪಾಗಿಟ್ಟ ಮಹಾನ ನೇತಾರರಾಗಿದ್ದರು. ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಪತ್ರಕರ್ತರಾಗಿ, ಲೇಖಕರಾಗಿ ಎಲ್ಲದಕ್ಕೂ ಮಿಗಿಲಾಗಿ ಅಪ್ಪಟ ದೇಶಭಕ್ತನಾಗಿ ಮೆರೆದ ಅವರ ವ್ಯಕ್ತಿತ್ವ ಅಭೂತಪೂರ್ವವಾದದ್ದು ಎಂದರು.

    ಅಂಜುಮನ ಪದವಿಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಲೀಮ ದೌಲತಕೋಟಿ ಆಜಾದರ  ಶೈಕ್ಷಣಿಕ ವಿಚಾರಧಾರೆಗಳು ಕುರಿತು ಮಾತನಾಡುತ್ತ ಅವರ ಶಿಕ್ಷಣ ಮಂತ್ರಿ ಇದ್ದಾಗ ಶಿಕ್ಷಣಕ್ಕಾಗಿ 2 ಕೋಟಿ ಇದ್ದ ಅನುದಾನವನ್ನು ತಮ್ಮ ಚಾಕಚಕ್ಕತೆಯಿಂದ ಮಾನ್ಯ ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಟ್ಟು 30 ರೂ. ಕೋಟಿಗೆ ಅನುದಾನ ಪಡೆಯುವಲ್ಲಿ ಯಶಸ್ವಿಗೊಂಡರು. ಅವರ ಪ್ರಯತ್ನದಿಂದ ವಿಶ್ವವಿದ್ಯಾಲಯ ಅನುದಾನ, ಸಾಹಿತ್ಯ, ಲಲಿತಕಲಾ ಅಕಾಡೆಮಿ, ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ಕೊಟ್ಟು ಐಐಟಿ ಕಾಲೇಜುಗಳ ಪ್ರಾರಂಭಕ್ಕೆ ಕಾರಣಿಭೂತರಾದರು ಎಂದರು.

ಮೌಲಾನಾ ಅಬುಲಕಲಾಮ ಆಜಾದರ ಜೀವನ ಹಾಗೂ ಸಾಧನೆ ಕುರಿತು ಡಾ. ಅಮೀರುದ್ದಿನ ಖಾಜಿ ಮೌಲಾನಾ ಅಬುಲಕಲಾಮ ಆಜಾದರ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ ಕುರಿತು ಡಾ. ಸೈಯ್ಯದ ಅಲಿಮುಲ್ಲಾ ಹುಸೇನಿ ಇವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಾಹಿತಿ ಹಾಗೂ ಸಂಶೋಧಕರಾದ ಡಾ. ವ್ಹಿ.ಎಂ.ಬಾಗಾಯತ ಇವರು ಮಾತನಾಡುತ್ತ ಆಜಾದ ಎಂದರೆ ಸ್ವಾತಂತ್ರ್ಯ ತಮ್ಮ ಕಾವ್ಯ ನಾಮದಿಂದಲೇ ದೇಶದಲ್ಲಿ ಚಿರಪರಿಚಿತರಾದರು. ವಿದ್ವತಪೂರ್ಣ ಭಾಷಣ, ವಿಚಾರಧಾರೆಗಳಿಂದ ಗಾಂಧೀಜಿಯವರ ನಿಕಟವತರ್ಿಗಳಾಗಿ ಕಾಂಗ್ರೆಸ್ಸ ಪಕ್ಷದ ಎರಡು ಭಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಆಜಾದರದು. ಅಲ್ ಹಿಲಾಲ ಪತ್ರಿಕೆ ಮೂಲಕ ರಾಷ್ಟ್ರಭಿಮಾನ, ಶಿಕ್ಷಣಕ್ಕೆ ಒತ್ತು ನೀಡಿ ಅಂದಿನ ಬ್ರಿಟಿಷ ಸರಕಾರಕ್ಕೆ ತಮ್ಮ ಲೇಖನಿ ಮೂಲಕ ಚುರುಕುಮುಟ್ಟಿಸಿದ ಶ್ರೇಯಸ್ಸು ಮೌಲಾನರದು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಎ.ಎ. ಪಟೇಲ, ಡಾ. ಎಂ.ಎ. ಲಿಂಗಸೂರ, ತಾಲೂಕಾ ಕಸಾಪ ಅಧ್ಯಕ್ಷ ಪ್ರೊ. ಯು.ಎನ್. ಕುಂಟೋಜಿ, ಡಾ. ಮುಸ್ತಾಕಅಹ್ಮದ ಇನಾಮದಾರ, ಡಾ. ಎಸ್.ಜೆ. ಜಹಾಗೀರದಾರ, ಡಾ. ಖುದ್ದುಸ ಪಟೇಲ, ಆರೀಫ ಇನಾಮದಾರ, ಮಹಮ್ಮದ ಶಮಿವುದ್ದಿನ, ಸೋಮಶೇಖರ ಕುಲರ್ೆ, ಮಹಾದೇವ ರಾವಜಿ ಉಪಸ್ಥಿತರಿದ್ದರು.