ಗಂಗೂಲಿ ಅಧ್ಯಕ್ಷತೆಯಲ್ಲಿ ಭಾನುವಾರ ಮೊದಲ ಬಿಸಿಸಿಐ ವಾರ್ಷಿಕ ಸಭೆ

Ganguly

ಮುಂಬೈ, ನ.30 )- ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಸೌರಭ್ ಗಂಗೂಲಿ ನೇತೃತ್ವದಲ್ಲಿ ಮೊದಲ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ಕರೆದಿದ್ದು, ಲೋಧಾ ಸಮಿತಿಯ ಶಿಫಾರಸು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ (ಐಸಿಸಿ) ತಮ್ಮ ಪ್ರಾತಿನಿಧಿಯ ಆಯ್ಕೆ ಮುಂತಾದ ಹಲವಾರು ವಿಷಯಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

  ಸುಪ್ರೀಂ ಕೋರ್ಟ್ ನೇಮಕ ಮಾಡಿದ ನಿರ್ವಾಹಕರ ಸಮಿತಿ (ಸಿಒಎ) 33 ತಿಂಗಳ ಕಾರ್ಯಾಚರಣೆಯ ನಂತರ ಬಿಸಿಸಿಐನಿಂದ ಹಿಂದೆ ಸರಿಯಿತು. ಅದರ ನಂತರ ಗಂಗೂಲಿಯನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಮತ್ತು ಕಳೆದ ತಿಂಗಳು ಹೊಸ ಪದಾಧಿಕಾರಿಗಳನ್ನು ನೇಮಿಸಲಾಯಿತು. ಗಂಗೂಲಿ ನೇತೃತ್ವದ ಬಿಸಿಸಿಐ, ಲೋಧಾ ಸಮಿತಿಯ ಶಿಫಾರಸುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಚಿಂತಿಸುತ್ತಿದೆ.

  ಎಜಿಎಂಗೆ ಹೊರಡಿಸಲಾದ ಕರಡು ಪ್ರಕಾರ, ಪ್ರಸ್ತುತ ಬದಲಾವಣೆಗಳನ್ನು ಮಂಡಳಿಯು ಪರಿಗಣಿಸುತ್ತಿದೆ. ಇದರಲ್ಲಿ ಪದಾಧಿಕಾರಿಗಳ ಅಧಿಕಾರಾವಧಿಯ ವಿಷಯವನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಸಂವಿಧಾನದ ಪ್ರಕಾರ, ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್ ಸಂಘದಲ್ಲಿ ಮೂರು ವರ್ಷಗಳನ್ನು ಪೂರೈಸಿದ ಅಧಿಕಾರಿಯು ಮುಂದಿನ ಮೂರು ವರ್ಷಗಳ ಅವಧಿಗೆ ಅವರು ಅಧಿಕಾರದಿಂದ ದೂರವಿರಬೇಕು. 

  ಅಧಿಕಾರಿಯೊಬ್ಬರು ಎರಡು ಅವಧಿಗಳನ್ನು (ಆರು ವರ್ಷಗಳು) ಮಂಡಳಿ ಅಥವಾ ರಾಜ್ಯ ಸಂಘದಲ್ಲಿ ಕಳೆದಿದ್ದರೆ ಮಾತ್ರ ಈ ಅವರಿಗೆ ಕೂಲಿಂಗ್-ಆಫ್ ಅವಧಿಗೆ ಒಳಪಡಡುತ್ತಾರೆ. 

  ಪ್ರಸ್ತುತ ಸಂವಿಧಾನದ ಪ್ರಕಾರ, ಯಾವುದೇ ಬದಲಾವಣೆಯನ್ನು ಜಾರಿಗೆ ತರುವ ಮೊದಲು ಸುಪ್ರೀಂ ಕೋರ್ಟ್‌ನ ಅನುಮೋದನೆ ಅಗತ್ಯ, ಆದರೆ ಹೊಸ ಪ್ರಸ್ತಾವನೆಯ ಪ್ರಕಾರ, ಎಜಿಎಂನಲ್ಲಿ ಮೂರು ನಾಲ್ಕಾಂಶ ಬಹುಮತದಿಂದ ಪ್ರಸ್ತಾವನೆಯನ್ನು ಅಂಗೀಕರಿಸಿದರೆ, ನ್ಯಾಯಾಲಯದ ಅನುಮೋದನೆ ಅಗತ್ಯವಿಲ್ಲ.

  ಕಳೆದ ಮೂರು ವರ್ಷಗಳಲ್ಲಿ ಬಿಸಿಸಿಐ ಪರ, ಐಸಿಸಿಯಲ್ಲಿ  ಬಲವಾದ ಪ್ರಾತಿನಿಧ್ಯ ಇರಲಿಲ್ಲ. ಆದ್ದರಿಂದ ಮಂಡಳಿಯ ಭಾನುವಾರ ತನ್ನ ಸಾಮಾನ್ಯ ಸಭೆಯಲ್ಲಿ ಐಸಿಸಿಯಲ್ಲಿ ತನ್ನ ಪ್ರತಿನಿಧಿಯಾಗಿ ಒಬ್ಬ ಅನುಭವಿ ವ್ಯಕ್ತಿಯನ್ನು ಪ್ರಮುಖವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. 70 ವರ್ಷ ವಯಸ್ಸಿನ ಮಿತಿಯ ನಿಯಮ ಐಸಿಸಿ ಸಭೆಯಲ್ಲಿ ಭಾಗವಹಿಸಲು ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹ. ಹೀಗಾಗಿ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಐಸಿಸಿ ಸಭೆಯಲ್ಲಿ ಭಾಗವಹಿಸಲು ದಾರಿ ತೆರೆದಂತಾಗಿದೆ ಎಂದು ನಂಬಲಾಗಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಐಪಿಎಲ್ ಹುದ್ದೆಗೆ ರಾಜೀನಾಮೆ ನೀಡಬೇಕಾಗಿತ್ತು.