ರೈತರು ಹೆದರಬಾರದು, ನೀವು ಬೆಳೆದ ಕಬ್ಬು ಚಿನ್ನದ ಬೆಲೆಯುಳ್ಳ: ಶೆಟ್ಟಿ

ಲೋಕದರ್ಶನ ವರದಿ

ಕಾಗವಾಡ: ಪ್ರಸಕ್ತ ವರ್ಷದಲ್ಲಿ ಮಳೆಗಾಲ ಅತ್ಯಲ್ಪವಾಗಿದ್ದು, ರೈತರ ಬೆಳೆಗಳು ಕಮರಿ ಹೋಗಿವೆ. ನೀರಿನ ಕೊರತೆಯಿಂದ ರೈತರು ಸಮಸ್ಯೆಯಲ್ಲಿದ್ದಾರೆ.ಆದರೆ, ಈ ವರ್ಷ ಬೆಳೆದ ಕಬ್ಬು ನುರಿಸಲು ಯಾವುದೇ ಸಕ್ಕರೆ ಕಾಖರ್ಾನೆಗಳು ಬರುವ ಮಾಚರ್್ ತಿಂಗಳಿನ ವರೆಗೆ ಮಾತ್ರ ನುರಿಸುವಷ್ಟ ಕಬ್ಬು ಇದೆ. ರೈತರು ಹೆದರಬಾರದು, ನೀವು ಬೆಳೆದ ಕಬ್ಬು ಚಿನ್ನದ ಬೆಲೆಯುಳ್ಳವಾಗಿದೆ ಎಂದು ಸ್ವಾಭಿಮಾನಿ ರೈತ ಸಂಘಟನೆ ಸಂಸ್ಥಾಪಕರು ಹಾಗೂ ಮಹಾರಾಷ್ಟ್ರದ ಸಂಸದರಾದ ರಾಜು ಶೆಟ್ಟಿ ಕಾಗವಾಡದಲ್ಲಿ ಹೇಳಿದರು.

ಸೋಮವಾರರಂದು ಕಾಗವಾಡದ ಪ್ರವಾಸಿ ಮಂದಿರದಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ಸಮಸ್ಯೆ ಬಗ್ಗೆ ಸವಿಸ್ಥರವಾಗಿ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಸಂಸದರಾಜು ಶೆಟ್ಟಿ ಹೇಳಿದರು.

ಸಕ್ಕರೆ ಕಾಖರ್ಾನೆ ಮಾಲೀಕರು ರೈತರಲ್ಲಿ ಆತಂಕ ಮೂಡಿಸಿ ಸಕಾಲದಲ್ಲಿ ಕಬ್ಬು ಕಟಾವಣಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಬ್ಬು ಬೆಳೆಯಲು ರೈತ ಎಷ್ಟು ಕಷ್ಟಾಪಟ್ಟಿದ್ದಾನೆ ಇದರ ಅರಿವು ಈ ಮಾಲೀಕರಿಗೆಯಿಲ್ಲಾ. ಕೇವಲ ಜುಜಬಿ ಬೆಲೆ ನೀಡಿಕಬ್ಬು ಸಾಗಾಟಮಾಡಲು ಎಲ್ಲ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ, ರೈತರು ಆತಂಕಕ್ಕೆ ಒಳಗಾಗದೆ ಸ್ವಲ್ಪ ತಾಳ್ಮೆಯಲ್ಲಿರಿ.ಎಲ್ಲ ಸುಲಭವಾಗಿ ಸಮಸ್ಯೆಗಳು ಭಗಿಹರಿಸುತ್ತೇವೆ ಎಂದು ಸಂಸದರು ಹೇಳಿದರು.

2900 ರುಪಾಯಿ ಮೊದಲನೆ ಕಂತು ನೀಡಲೆಬೇಕು: ಪ್ರಸಕ್ತ ಹಂಗಾಮಿನ 12.50 ಕಬ್ಬಿನ ಇಳುವರಿಗೆ ಕೇಂದ್ರ ಸರಕಾರ ಘೊಷಿಸಿದಂತೆ ಎಫ್.ಆರ್.ಪಿ ದರದಲ್ಲಿ 2900 ರುಪಾಯಿ ಮೊದಲನೆ ಕಂತು ನೀಡಲೆಬೇಕು. ಈ ಕಂತಿನಲ್ಲಿಎರಡು ಭಾಗ ಮಾಡಲು ಬರುವದಿಲ್ಲಾ. ಇದರಿಂದ ಯಾವುದೇ ಸಂಘಟನೆಗಳು ಮೊದಲನೆ ಕಂತಿನದರ 2900 ಕೇಳಬೇಕೆಂದು ಸಂಸದರಾಜು ಶೆಟ್ಟಿ ಹೇಳಿದರು.

ಎಫ್.ಆರ್.ಪಿ ದರಘೋಷಣೆ ಬಗ್ಗೆ ಸರಕಾರದ ವಿರುದ್ಧ ನ್ಯಾಯಾಲಯ ಮೋರೆ: ಕೇಂದ್ರ ಸರಕಾರದ ಎಫ್.ಆರ್.ಪಿ ದರ ಘೋಷಣೆ ಬಗ್ಗೆ ಅನೇಕ ಸಮಸ್ಯೆಗಳಿದ್ದು. ಇದರಿಂದ ಮಹಾರಾಷ್ಟ್ರದ ಓರ್ವಕಬ್ಬು ಬೆಳೆಗಾರ ರೈತನ 1300 ಕೋಟಿ ರುಪಾಯಿಗಳಷ್ಟು ನಷ್ಟವಾಗಿದೆ. ಇದರಿಂದ ಮುಂಬೈ ಹೈಕೋಟರ್್ದಲ್ಲಿ ದೂರು ಸಲ್ಲಿಸಿದ್ದು, ವಿಚಾರನಲ್ಲಿದೆ.ಬರುವ ದಿ.26 ರಂದು ನಿರ್ಣಯ ಹೊರಬಳಲಿದೆ ಎಂದು ಸಂಸದರಾಜು ಶೆಟ್ಟಿ ಹೇಳಿದರು.

ಕೇಂದ್ರ ಸರಕಾರ ರೈತರ ಪರವಿಲ್ಲಾ: ಕೇಂದ್ರ ಸರಕಾರಯಾವರೀತಿ ಮಧ್ಯಸ್ತಿ ವಹಿಸಿ ಸಕ್ಕರೆ ಕಾಖರ್ಾನೆಗಳಿಗೆ ಅನುದಾನರೂಪದಲ್ಲಿ ಸಹಾಯ ನೀಡಿ ರೈತರಿಗೆ ಆಗುತ್ತಿರುವ ಸಮಸ್ಯೆ ಭಗಿಹರಿಸಲು ಮುಂದಾಗಿತ್ತುಲ್ಲಾ. ಇದರಲ್ಲಿ ರೈತರು ಹಾಗೂ ಸಕ್ಕರೆ ಕಾಖರ್ಾನೆಗಳ ಮಧ್ಯ ವಾದವಿವಾದವಾಗಿ ಇದರಲ್ಲಿ ರೈತರ ತೆಲೆ ಒಡೆದು ಆ ರಕ್ತದಲ್ಲಿ ತಾವು ಸಂತಸ ಹಂಚಿಕೊಳ್ಳುವದಲ್ಲಿ ಹವ್ಯಾಸ ಅವರಲ್ಲಿದೆ ಎಂದು ಸ್ವಾಭಿಮಾನಿ ರೈತ ಸಂಘಟನೆ ಸಂಸ್ಥಾಪಕ, ಸಂಸದರಾಜು ಶೆಟ್ಟಿ ನೊಂದ ಹೇಳಿದರು.

ಈ ವೇಳೆ ಕಾಗವಾಡದ ಸ್ವಾಭಿಮಾನಿ ರೈತ ಸಂಘಟನೆ ಸದಸ್ಯರಾದ ಸಚೀನಕವಟಗೆ, ಕಾಕಾಸಾಹೇಬ ಚೌಗುಲೆ, ಆದಿನಾಥ ಬಿಂದಗೆ, ಅಜೀತಕರವ, ರಾಜುಕರವ, ಅಜೀತ ಮಗದುಮ್ಮ, ರಾಜು ಮಗದುಮ್ಮ, ವಿಶ್ವನಾಥ ಬಡಿಗೇರ, ಮಲ್ಲಿಕಾಜರ್ುನ ಕುಂಬಾರ, ಸುಧೀರಕರವ ಸೇರಿದಂತೆ ಅನೇಕರು ಇದ್ದರು.