ಕಂಪ್ಲಿ 21:ತಾಲೂಕು ಸಮೀಪದ ಸೋಮಲಾಪುರ ಗ್ರಾಮದ ಎರದ ಮಟ್ಟಿ ಪ್ರದೇಶದ ಚೆಕ್ ಡ್ಯಾಂ ಬಳಿಯಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಶುಕ್ರವಾರ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಡಿ.11ರಂದು ಸೋಮಲಾಪುರ ಗ್ರಾಮದಲ್ಲಿ ವೆಂಕಟಸ್ವಾಮಿ ಎಂಬ ಮೂರು ವರ್ಷದ ಬಾಲಕನನ್ನು ಹೊತ್ತೊಯ್ದು ಚಿರತೆ ಕೊಂದು ಹಾಕಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ತೀವ್ರ ಕಾಯರ್ಾಚರಣೆ ನಡೆಸಿದರೂ, ಚಿರತೆ ಮಾತ್ರ ಬೋನಿಗೆ ಬಿಳದೆ ಇರುವುದು ಗ್ರಾಮಸ್ಥರ ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಬಾಲಕನನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ತೀವ್ರ ಕಾಯರ್ಾಚರಣೆ ಕೈಗೊಂಡ ಹಿನ್ನಲೆ ಗ್ರಾಮದ ಎರದಮಟ್ಟಿ ಪ್ರದೇಶದ ಚೆಕ್ ಡ್ಯಾಂ ಬಳಿಯಲ್ಲಿ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆ ಸೆರೆಯಾಗಿದೆ. 7-8 ವರ್ಷದ ಚಿರತೆ ಇದ್ದಾಗಿದ್ದು, ಎರಡುವರೆ ಎತ್ತರ ಹಾಗೂ ನಾಲ್ಕು ಅಡಿ ಉದ್ದದ ಚಿರತೆಯಾಗಿದೆ. ಸೋಮಲಾಪುರ, ದೇವಲಾಪುರ, ಹಳೇ ದರೋಜಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆಗೆ ಕಂಟಕವಾಗಿದ್ದ ಚಿರತೆಯನ್ನು ಬಂಧಿಸುವ ಒತ್ತಾಯಗಳು ಹೆಚ್ಚಾಗಿದ್ದವು. ಆದರೆ, ದಿನೇ ದಿನೇ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರು, ನಾಯಿ, ಕುರಿ, ಮೇಕೆಗಳ ಮೇಲೆ ದಾಳಿ ಮಾಡಿ, ಕೊಂದು ಹಾಕಿತ್ತು. ಬೆಳಗಿನ ಜಾವದಲ್ಲಿ ನಾಯಿಯನ್ನು ತಿನ್ನುವ ಆಸೆಯಿಂದ ಬಂದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಬೋನಿನಲ್ಲಿ ಸೆರೆಯಾಗಿರುವ ಚಿರತೆ ಕಂಡ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲೇ ಬೀಡು ಬಿಟ್ಟಿದ್ದ ಅರಣ್ಯ ಅಧಿಕಾರಿಗಳು ಬೋನಿನ ಸ್ಥಳಕ್ಕೆ ಬಂದು ಚಿರತೆ ಬೋನಿಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಗ್ರಾಮದಲ್ಲಿ ಆತಂಕ ಮೂಡಿಸಿದ ಚಿರತೆಯು ಬೋನಿಗೆ ಬಿದ್ದಿದರಿಂದ ಗ್ರಾಮದ ಜನರು ಹಾಗೂ ಅಧಿಕಾರಿಗಳು ನೆಮ್ಮದಿಯ ನಿಟ್ಟೂಸಿರು ಬಿಟ್ಟಿದ್ದಾರೆ. ಸೋಮಲಾಪುರ, ಹಳೇ ದರೋಜಿ, ಮೆಟ್ರಿ ಸೇರಿ ಸುತ್ತಲಿನ ಗ್ರಾಮದ ಜನರು ಬೋನಿಗೆ ಬಿದ್ದ ಚಿರತೆ ನೋಡಲು ಮೂಗಿ ಬಿದ್ದಿದ್ದರು. ಚಿರತೆ ಬೋನಿಗೆ ಬಿದ್ದ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ದೇವರಾಜ್, ವಲಯ ಅಧಿಕಾರಿ ಟಿ.ಭಾಸ್ಕರ್, ಸಿಬ್ಬಂದಿ ಹಾಗೂ ಗ್ರಾಮಸ್ಥರಿದ್ದರು.
ಅರಣ್ಯ ಇಲಾಖೆಯ ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ಕುಮಾರ್ ಗ್ರಾಮಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಸೋಮಲಾಪುರದಲ್ಲಿ ಬಾಲಕನನ್ನು ಬಲಿ ಪಡೆದು, ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ಈ ಚಿರತೆ ಸೆರೆಯಿಂದ ಗ್ರಾಮದ ಜನರು ನೆಮ್ಮದಿಯ ಜೀವನ ನಡೆಸಬಹುದಾಗಿದೆ. ಗ್ರಾಮಸ್ಥರು ಯಾವುದೇ ಆತಂಕಪಡಬೇಕಿಲ್ಲ. ಇನ್ನೂ ಎರಡು ಮೂರು ದಿನದವರೆಗೆ ಅಳವಡಿಸಿದ ಬೋನುಗಳಿರುತ್ತವೆ. ಮೆಟ್ರಿ ಗ್ರಾಮದಲ್ಲಿ ಚಿರಚಿತಜ ಪ್ರತ್ಯೆಕ್ಷವಾದ ಹಿನ್ನಲೆ ಒಂದು ಬೋನು ಅಳವಡಿಸಲಾಗಿದೆ. ಗ್ರಾಮಸ್ಥರು ಇನ್ನೊಂದು ಬೋನು ಅಳವಡಿಕೆಗೆ ಒತ್ತಾಯಿಸಿದರಿಂದ ಸಿಬ್ಬಂದಿ ಜೊತೆಗೆ ಚಚರ್ಿಸಿ ಅವಶ್ಯಕತೆಯಿದ್ದಲ್ಲಿ ಇನ್ನೊಂದು ಬೋನು ಅಳವಡಿಸಲಾಗುವುದು. ಬೋನಿಗೆ ಬಿದ್ದ ಚಿರತೆಯನ್ನು ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.