ಹೊಸದಿಲ್ಲಿ/ಬೆಂಗಳೂರು13:
ಕೇಂದ್ರ
ಸಚಿವ
ಅನಂತಕುಮಾರ್
ಅವರ
ನಿಧನಕ್ಕೆ
ಪ್ರಧಾನಿ
ನರೇಂದ್ರ
ಮೋದಿ, ಮಾಜಿ
ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್, ಕೇಂದ್ರ ಸಚಿವರು
ಹಾಗೂ ಬಿಜೆಪಿ ಮುಖಂಡರು ಸಹಿತ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು, ನನ್ನ ಸಹೋದ್ಯೋಗಿಯ ಹಠಾತ್ ಅಗಲಿಕೆ ತೀವ್ರ ನೋವನ್ನು ತರಿಸಿದೆ ಎಂದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿಯವರು, ತಮ್ಮ ತರುಣ ವಯಸ್ಸಿನಲ್ಲೇ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅನಂತಕುಮಾರ್, ಸಮಾಜ ಹಾಗೂ ದೇಶ ಸೇವೆಗಾಗಿ ತಮ್ಮನ್ನೇ ಸಮರ್ಪಣೆ ಮಾಡಿಕೊಂಡಿದ್ದರು. ಅವರ ಗಮನಾರ್ಹ ಸೇವೆಗಳಿಂದಾಗಿಯೇ ಅವರ ನೆನಪು ಸದಾ ನಮ್ಮೊಂದಿಗೆ
ಇರುತ್ತದೆ
ಎಂದಿದ್ದಾರೆ.
ಬಿಜೆಪಿಯನ್ನು ಕಟ್ಟುವಲ್ಲಿ ಅನಂತಕುಮಾರ್ ಅವರ ಶ್ರಮ ಎಷ್ಟಿತ್ತೋ, ಸಂಸದರಾಗಿ ಹಾಗೂ ಸಚಿವರಾಗಿಯೂ ಸಹ ಅವರ ಆಡಳಿತ ಅಷ್ಟೇ ಪರಿಣಾಮಕಾರಿಯಾಗಿತ್ತು. ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿಯಾಗಿದ್ದ ಅವರು, ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಅವರ ಕೊಡುಗೆ ಅಪಾರವಾದುದು ಎಂದಿದ್ದಾರೆ.
ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ದೂರವಾಣಿ ಕರೆ ಮಾಡಿ ನಾನು ಮಾತನಾಡಿ, ಸಮಾಧಾನ ಹೇಳಿ, ಸಂತಾಪ ಸೂಚಿಸಿದ್ದೇನೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ. ಇಡಿಯ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ.
ವಿಷಾದವಾಗಿದೆ: ರಾಷ್ಟ್ರಪತಿ
ಕೇಂದ್ರ ಸಚಿವರು ಹಾಗೂ ಅನುಭವಿ ಸಂಸದರು, ಹೆಚ್ . ಎನ್. ಅನಂತ ಕುಮಾರ್ ಅವರು ದೈವಾಧೀನರಾದ ಸುದ್ದಿ ತಿಳಿದು ವಿಷಾದವಾಗಿದೆ. ಇದು ನಮ್ಮ ದೇಶದ ಸಾರ್ವಜನಿಕ ಜೀವನಕ್ಕೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಜನತೆಗೆ ತುಂಬಲಾರದ ನಷ್ಟ. ಅವರ ಕುಟುಂಬವರ್ಗ, ಸಹೋದ್ಯೋಗಿಗಳು ಮತ್ತು ಅಸಂಖ್ಯಾತ ಸಹವರ್ತಿಗಳಿಗೆ ನನ್ನ ಸಂತಾಪ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ತುಂಬಾ ಆಘಾತವಾಗಿದೆ: ಎಲ್ ಕೆ ಆಡ್ವಾಣಿ
ಬಿಜೆಪಿಯ ಭೀಷ್ಮನೆಂದೇ ಕರೆಯುವ ಎಲ್.ಕೆ.ಅಡ್ವಾಣಿಯವರು ತಮ್ಮ ನೆಚ್ಚಿನ ಶಿಷ್ಯ ಅನಂತಕುಮಾರ್ ರವರ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಕೇಂದ್ರ ಸಚಿವ ಅನಂತಕುಮಾರ್ ರವರ ಅಕಾಲಿಕ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಅವರು ಬಡವರ ಮತ್ತು ಕೆಳವರ್ಗದ ನಾಯಕರೆಂದು ಹೆಚ್ಚು ಪ್ರಸಿದ್ಧರಾಗಿದ್ದರು. ಅನಂತಕುಮಾರ್ ಸಾವು ನಮಗೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಮಾಜಕ್ಕೆ ಉತ್ತಮ ಸೇವೆ
ಸಲ್ಲಿಸಿದ್ದಾರೆ: ಎಚ್ಡಿಡಿ
ಅನಂತ ಕುಮಾರ್ ರವರು ನಾನು ಪ್ರಧಾನಿ ಆದ ಸಂದರ್ಭದಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ
ಲೋಕಸಭಾ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿ ಅಂದಿನಿಂದ ಇಂದಿನವರೆಗೂ ಸಮಾಜಕ್ಕೆ ಉತ್ತಮ ಸೇವೆಸಲ್ಲಿಸುತ್ತಿದ್ದಾರೆ
ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.
ನಾವೆಲ್ಲ ಒಬ್ಬ ಸೃಜನಶೀಲ ವ್ಯಕ್ತಿಯನ್ನು ಕಳೆದುಕೊಂಡಿದ್ದೀವಿ. ನನ್ನ ಮತ್ತು ಅವರ ಸಂಬಂಧ
ಸುಮಾರು 3 ದಶಕಗಳದ್ದು , ನಾನು ಈ ದಿನ ನನ್ನ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೀನಿ ವಯಕ್ತಿಕವಾಗಿ
ಮನಸ್ಸಿಗೆ ಬಹಳ ನೋವುಂಟಾಗಿದೆ. ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾಗದ ನಷ್ಟವುಂಟಾಗಿದೆ. ಆ ದೇವರು
ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಭಗವಂತ ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ
ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.
ನೋವು ತರಿಸಿದೆ: ಡಿಸಿಎಂ
ಕೇಂದ್ರ ಸಂಸದೀಯ ವ್ಯವಹಾರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರ ನಿಧನದ ಸುದ್ದಿ ನೋವು
ತರಿಸಿದೆ.
ಬೆಂಗಳೂರು ದಕ್ಷಿಣದಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ಅನಂತಕುಮಾರ್
ಅವರು ಉತ್ತಮ ಸಂಸದೀಯ ಪಟು. ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ ಕುಮಾರ್ ಯಶಸ್ವಿ ರಾಜಕಾರಣಿಯಾಗಿದ್ದರು.
ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ನಿಭಾಯಿಸುತ್ತಿದ್ದರು. ಇವರ
ನಿಧನದ ನೋವನ್ನು ಅವರ ಕುಟುಂಬ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಉಪ ಮುಖ್ಯಮಂತ್ರಿ
ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.